ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ

ಧ್ಯಾನದ ಅರ್ಥ, ತರಂಗರಹಿತವಾಗುವುದು. ಅಂದರೆ, ಮನಸ್ಸಿನಿಂದ ಹೊರತಾಗಿ ಉಳಿಯುವುದು. ಅಮನಸ್ಕರಾಗುವುದು. ಚೇತನದ ಮೂಲಸ್ವಭಾವವಾದ ನಿಸ್ತರಂಗ ಸ್ಥಿತಿಯನ್ನು ಹೊಂದುವುದು. ನಿಸ್ತರಂಗ ಚೇತನವೇ ನಮ್ಮ ಆತ್ಮ. ಆದ್ದರಿಂದ, ಧ್ಯಾನವು ಅಂತತಃ ಆತ್ಮದರ್ಶನದ ಮಾರ್ಗವಾಗಿದೆ. ಆತ್ಮಸ್ಥಿತಿಯಲ್ಲಿ ನೆಲೆಸುವ ಉಪಾಯವಾಗಿದೆ ~ Whosoever Ji ನೀವು ಧ್ಯಾನ ಮಾಡುತ್ತಿದ್ದೀರಿ ಎಂದಾದರೆ, ಇಲ್ಲಿ ಯಾವ ‘ನಾನು’ ಕೂಡ ಧ್ಯಾನ ಮಾಡುತ್ತಿಲ್ಲ. ‘ನಾನು’ ಧ್ಯಾನ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ನೆರಳು ತನ್ನ ಮೂಲವನ್ನು ಅರಿಯವುದು ಸಾಧ್ಯವಿಲ್ಲ. ಅಲೆಯು ಸಾಗರವನ್ನು ತಿಳಿಯುವುದು ಸಾಧ್ಯವಿಲ್ಲ. ಧ್ಯಾನದಲ್ಲಿ ‘ನಾನು’ […]

ಹೊರಗೆ ಮಿಂದು ಒಳಗೆ ಮೀಯದೆ ಫಲವೇನು? : ದಾಸ ವಾಣಿ

ಮನಶುದ್ಧಿ ಇಲ್ಲದವಗೆ ಮಂತ್ರದ ಫಲವೇನು? ತನುಶುದ್ಧಿ ಇಲ್ಲದವಗೆ ತೀರ್ಥದ ಫಲವೇನು? ಮಿಂದಲ್ಲಿ ಫಲವೇನು, ಮೀನು ಮೊಸಳೆಯಂತೆ? ನಿಂದಲ್ಲಿ ಫಲವೇನು, ಶ್ರೀಶೈಲದ ಕಾಗೆಯಂತೆ!! ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತ್ತಿದ್ದ ಪುರಂದರ ವಿಠಲ ಅಂತರಂಗ ಶುದ್ಧಿ ಇಲ್ಲದೆ ಬಹಿರಂಗದಲ್ಲಿ ಎಷ್ಟು ಶುಚಿಯಾಗಿದ್ದರೂ ಪ್ರಯೋಜನವಿಲ್ಲ ಎನ್ನುವುದು ಅನುಭಾವಿಗಳ ಮಾತು. ಮನಸ್ಸೇ ಶುದ್ಧವಿಲ್ಲದೆ ಮಂತ್ರಗಳನ್ನು ಪಠಿಸಿ ಪ್ರಯೋಜನವಿದೆಯೇ? ಖಂಡಿತಾ ಇಲ್ಲ. ಹಾಗೆಯೇ ತನುಶುದ್ಧಿ… ಅಂದರೆ ದೇಹವನ್ನು ಸತ್ಕರ್ಮಗಳಿಗೆ ವಿನಿಯೋಗಿಸದೆ ತೀರ್ಥದ ಫಲವಿದೆಯೆ? ಅದೂ ಇಲ್ಲ… ಮೀನುಮೊಸಳೆಗಳೂ ಮೀಯುತ್ತವೆ. ಹಾಗೆಯೇ […]

ಸಂತರು ತಲೆ ಬಗ್ಗಿಸುವುದು ಇಲ್ಲಿ ಮಾತ್ರ… ~ ರೂಮಿ ಪದ್ಯ

ಧರ್ಮ ಮತ್ತು ದ್ರೋಹದ ಆಚೆಗೆ ಒಂದು ಬಯಲು ಇದೆ. ಪ್ರೇಮ, ಮನೆ ಕಟ್ಟಿಕೊಂಡಿರುವುದು ಈ ಬಯಲಿನ ನಟ್ಟ ನಡುವೆ. ಸಂತರು ತಲೆ ಬಗ್ಗಿಸುವುದು ಇಲ್ಲಿ ಮಾತ್ರ; ನಂಬಿಗಸ್ತರಿಗೆ ಮತ್ತು ದ್ರೋಹಿಗಳಿಗೆ ಇಲ್ಲಿ ಜಾಗ ಇಲ್ಲ ~ ಜಲಾಲುದ್ದೀನ್ ರೂಮಿ |ಅನುವಾದ : ಚಿದಂಬರ ನರೇಂದ್ರ  

ಭಕ್ತ ಸಿರಿಯಾಳನು ಶಿವನಿಗೆ ಮಗನನ್ನು ಉಣಬಡಿಸಿದ ಕಥೆ

ಬಕ್ರೀದ್ ಹಿನ್ನೆಲೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ಪ್ರವಾದಿ ಇಬ್ರಾಹೀಮರು ತಮ್ಮ ಮಗ ಇಸ್ಮಾಯೀಲನನ್ನು ಬಲಿ ಕೊಡಲು ಮುಂದಾದ ಘಟನೆ ಕುರಿತು ಕೆಲವು ಪ್ರಶ್ನೆಗಳು ‘ಅರಳಿಮರ’ಕ್ಕೆ ಬಂದಿದ್ದವು. ಇದು ಸಾಂಕೇತಿಕವೂ ಆಗಿರಬಹುದು ಮತ್ತು ಎಲ್ಲ ಧಾರ್ಮಿಕ ನಂಬಿಕೆಗಳಲ್ಲೂ ಕಾಣಿಸಿಕೊಳ್ಳಬಹುದಾದ ಘಟನೆಯೂ ಆಗಿರುವುದು. ಇದನ್ನು ಪುಷ್ಟೀಕರಿಸಲು ಇಲ್ಲೊಂದು ಕತೆಯನ್ನು ನೀಡಲಾಗಿದೆ. ಅಧ್ಯಾತ್ಮ ಶ್ರೇಷ್ಠ – ಕನಿಷ್ಠಗಳೆಂಬ ವ್ಯತ್ಯಾಸವನ್ನು ತೋರುವುದಿಲ್ಲ. ಸನ್ನಡತೆಯೇ ಧರ್ಮ, ವಿಕೃತಿಯೇ ಅಧರ್ಮ. ಇದು ಅರಳಿಬಳಗದ ನಿಲುವು.  ಒಂದಾನೊಂದು ಕಾಲದಲ್ಲಿ ಸಿರಿಯಾಳನೆಂಬ ಶ್ರೇಷ್ಠ ಶಿವಭಕ್ತನಿದ್ದನು. ಅವನ ಶಿವಭಕ್ತಿ ಲೋಕಪ್ರಸಿದ್ಧವಾಗಿತ್ತು. ಆದರೂ […]

ತ್ಯಾಗ ಬಲಿದಾನಗಳ ಸಂಸ್ಮರಣೆ : ಬಕ್ರೀದ್

ಅಲ್ಲಾಹನಲ್ಲಿ ಪ್ರೇಮ, ಶ್ರದ್ಧೆ, ದೃಢತೆಗಳು ಮತ್ತು ನಂಬಿಕೆಗಾಗಿ ಪ್ರಾಣವನ್ನೇ ಅರ್ಪಿಸುವ ಬಲಿದಾನಗಳು ಬಕ್ರೀದ್ ಹಬ್ಬದ ಆಚರಣೆಯನ್ನು ಸಂಕೇತಿಸುತ್ತವೆ ~ ಸುನೈಫ್ ಪ್ರತಿಯೊಂದು ಧರ್ಮದಲ್ಲೂ ಹಬ್ಬಗಳಿರುತ್ತವೆ ಮತ್ತು ಪ್ರತಿ ಹಬ್ಬದ ಆಚರಣೆಗೂ ಒಂದು ಕಥೆ ಇರುತ್ತದೆ. ಇಂದು ಮುಸ್ಲಿಮರು ಬಕ್ರೀದ್ ಆಚರಿಸುತ್ತಿದ್ದು, ಇದನ್ನು ‘ತ್ಯಾಗ ಬಲಿದಾನಗಳ ಹಬ್ಬ’ ಎಂದು ಕರೆಯಲಾಗುತ್ತದೆ. ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಯೀಲ್ ಅಲ್ಲಾಹನ ಅತಿ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿನವನ್ನು ಸ್ಮರಿಸುವುದೇ ಈ ದಿನದ ಮುಖ್ಯ ಉದ್ದೇಶ. ನಿಜದಲ್ಲಿ ಅಂದು ತನ್ನ ಏಕೈಕ […]

ಅರಣ್ಯ ನಾಶ ಮಾಡಬಾರದು : ಬೆಳಗಿನ ಹೊಳಹು

“ವನಾನಿ ನ ಪ್ರಜಹಿತಾನಿ”… ಅರ್ಥಾತ್, ಅರಣ್ಯ ನಾಶ ಮಾಡಬಾರದು – ಎನ್ನುತ್ತದೆ ಋಗ್ವೇದದ ಒಂದು ಮಂತ್ರ  ~ ಅಪ್ರಮೇಯ ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಕಾಡನ್ನು ನಾಶಮಾಡುತ್ತಿದ್ದಾನೆ, ಮರಗಳನ್ನು ಕಡೆದು ಭೂಮಿಯನ್ನು ಬೆಟ್ಟ, ಗುಡ್ಡಗಳನ್ನು ಸತ್ವಹೀನವಾಗಿಸುತ್ತಿದ್ದಾನೆ. ಇದರ ಫಲವನ್ನು ನಾವು ಈಗಾಗಲೇ ಅನುಭವಿಸುತ್ತಿರುವುದನ್ನು ಕಾಣಬಹುದು. ಮನುಷ್ಯನು ಮಿಥ್ಯಾ ಅಭಿವೃದ್ಧಿಯ ಹೆಸರಿನಲ್ಲಿ, ದುರಾಸೆಯಿಂದ ಮಾಡುತ್ತಿರುವ ಪ್ರಕೃತಿ ನಾಶವು ಮನುಷ್ಯನಿಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಮಾರಕವಾಗಿದೆ. ಇದು ಮೂರ್ಖನು ತಾನು ಕೂತ ಕೊಂಬೆಯನ್ನೇ ಕತ್ತರಿಸುತ್ತಿರುವಂತಿದೆ. ನಮ್ಮ ಪೂರ್ವಜರು ಪ್ರಕೃತಿಯನ್ನೇ ದೇವರೆಂದು ಆರಾಧಿಸಿ, […]

ಗ್ರಹಿಕೆಯಂತೆ ಬಣ್ಣಗಳು, ಗ್ರಹಿಕೆಯಂತೆ ಭಗವಂತನೂ…

ಅಲ್ಲಿಗೆ, ಆಯಾ ಬಣ್ಣವು ನಿರ್ದಿಷ್ಟ ತರಂಗಾಂತರಗಳಲ್ಲಿ ಅನುಭವಕ್ಕೆ ಬರುವಂಥ ಬೆಳಕಿನ ತರಂಗಗಳು ಎಂದಾಯ್ತು. ನಮ್ಮ ಗ್ರಹಿಕೆಯ ಸೀಮಿತಿಗೆ ತಕ್ಕಂತೆ ನಮಗೆ ಇಂತಿಷ್ಟು ಬಗೆಯ ಬಣ್ಣಗಳು ಗೋಚರಿಸುತ್ತವೆ ಎಂದಾಯ್ತು. ಒಟ್ಟಾರೆಯಾಗಿ – ಯಾವುದು ಬೆಳ್ಳಗೆ ಕಾಣುವ ಬೆಳಕಿನಲ್ಲಿ ಹುದುಗಿದೆಯೋ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಗೋಚರಿಸುತ್ತದೆಯೋ; ಯಾವುದು ಎಲ್ಲರಿಗೂ ಗೋಚರಿಸುವುದಿಲ್ಲವೋ, ಯಾವುದು ವಾಸ್ತವದಲ್ಲಿ ಇದೆ ಮತ್ತು ವಾಸ್ತವದಲ್ಲಿ ಇಲ್ಲವೋ ಆ ವಿಲಕ್ಷಣ ಸಂಗತಿಯೇ ಬಣ್ಣ ಎಂದಾಯ್ತು!! ~ ಆನಂದಪೂರ್ಣ ಬಣ್ಣ! ಹಾಗೆಂದರೇನು? ಅನಿರೀಕ್ಷಿತವಾಗಿ ಇಂಥದೊಂದು ಪ್ರಶ್ನೆ ತೂರಿಬಂದರೆ ಯಾರಿಗಾದರೂ ಗಲಿಬಿಲಿಯೇ. […]

ತತ್ತ್ವಜ್ಞಾನಿ ಗಾರ್ಗಿ ವಾಚಕ್ನವಿಯ ಯಶೋಗಾಥೆ

ಸಮೂಹದಲ್ಲಿದ್ದ ಗಾರ್ಗಿಯು ಅದನ್ನು ತಡೆಯುತ್ತ ಎದ್ದು ನಿಂತು, ತಾನು ಕೆಲವು ಪ್ರಶ್ನೆಗಳನ್ನು ಕೇಳುವುದಿದೆ ಎಂದಳು. ಇಡಿಯ ಬ್ರಹ್ಮ ಸಭೆ ಅವಾಕ್ಕಾಯಿತು. ಮಹಾಜ್ಞಾನಿ ಯಾಜ್ಞವಲ್ಕ್ಯರನ್ನು ಓರ್ವ ಸ್ತ್ರೀಯು ಪ್ರಶ್ನಿಸುವುದೆ? ಅವರೆದುರು ನಿಂತು ವಾದ ಮಾಡುವುದೆ?’ ಎಂದು ತಮ್ಮತಮ್ಮಲ್ಲೆ ಮಾತಾಡಿಕೊಂಡರು. ಆದರೆ ಗಾರ್ಗಿಯು ಯಾವುದೇ ಅಳುಕಿಲ್ಲದೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ~ ಚೇತನಾ ವೇದಕಾಲೀನ ಭಾರತದ ಋಷಿಕೆಯರಲ್ಲಿ ಗಾರ್ಗೀ ವಾಚಕ್ನವಿಯ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಅಧ್ಯಾತ್ಮ ಚಿಂತಕಿಯೂ ತತ್ತ್ವಜ್ಞಾನಿಯೂ ಆಗಿದ್ದ ಗಾರ್ಗೀ ಗುರುಕುಲದಲ್ಲಿ ಶಿಕ್ಷಣ ಪಡೆದು ಪಂಡಿತಳೆಂದು ಗುರುತಿಸಿಕೊಂಡಿದ್ದಳು. ವಿದೇಹ ರಾಜ್ಯದ ವಿದ್ವಾಂಸ […]

ನಮ್ಮ ಸಂಸ್ಕಾರವೆಲ್ಲ ನಮಸ್ಕಾರಕ್ಕೆ ಮುಗಿದುಹೋಗುತ್ತಿದೆಯೇ?

ಈ ಜಾಲದ ಯಾವುದೇ ಒಂದು ಕೊಂಡಿ ಕಳಚಿದರೂ ಭೂಮಿಯ ಸಮತೋಲನ ತಪ್ಪುವುದು ಖಚಿತವೆಂದು ಈವರೆಗಿನ ವಿಜ್ಞಾನಿಗಳು, ತತ್ತ್ವಶಾಸ್ತ್ರಜ್ಞರು, ಅಧ್ಯಾತ್ಮ ಚಿಂತಕರೆಲ್ಲರೂ ಹೇಳುತ್ತಲೇ ಬಂದಿದ್ದಾರೆ. ಮನುಷ್ಯನ ಹೊರತಾಗಿ ಭೂಮಿಯ ಮೇಲಿನ ಇನ್ಯಾವ ಜೀವಿಯೂ ಪರಿಸರದಲ್ಲಿ ಸಹಬಾಳ್ವೆಯ ಆಶಯಕ್ಕೆ ಧಕ್ಕೆ ತಂದಿಲ್ಲ ಎನ್ನುವುದು ನಾಚಿಕೆಗೇಡಿನ ವಿಷಯ. ~ ಗಾಯತ್ರಿ    ಭೂಮಿ, ಸದ್ಯದ ತಿಳಿವಳಿಕೆಯಂತೆ ಜೀವರಾಶಿಗಳ ಏಕೈಕ ಆವಾಸ ಸ್ಥಾನ. ಜೀವಿಯ ಆವಾಸ ಸ್ಥಾನವೆಂದರೆ ಕೇವಲ ಕಾಲೂರುವ ನೆಲೆಯಲ್ಲ. ಜೀವಿ ಅಂದರೆ ಕೇವಲ ಮನುಷ್ಯನೂ ಅಲ್ಲ. ನೆಲ, ಗಾಳಿ, ನೀರು, […]

ಶರೀರವೇ ದೇವಮಂದಿರ : ಮೈತ್ರೇಯಿ ಉಪನಿಷತ್

ವೇದಕಾಲದ ಬ್ರಹ್ಮವಾದಿನಿ ಮೈತ್ರೇಯಿ, ಯಾಜ್ಞವಲ್ಕ್ಯರ ಪತ್ನಿಯೂ ಆಗಿದ್ದಳು. ‘ಮೈತ್ರೇಯಿ ಉಪನಿಷತ್’ ರಚಿಸುವ ಮೂಲಕ ಮೊದಲ ಮಹಿಳಾ ಉಪನಿಷತ್ಕಾರಳೆಂದೂ ಖ್ಯಾತಿ ಪಡೆದಿರುವಳು ~ ಅಪ್ರಮೇಯ   ದೇಹಃ ದೇವಾಲಯಃ ಪ್ರೋಕ್ತಃ ಸಃ ಜೀವಃ ಕೇವಲಃ ಶಿವಃ | ತ್ಯಜೇತ್ ಅಜ್ಞಾನನಿರ್ಮಾಲ್ಯಮ್ ಸಃ ಅಹಮ್ ಭಾವೇನ ಪೂಜಯೇತ್ ||2. 1 || ಅರ್ಥ:  ಶರೀರವೇ ದೇವಮಂದಿರವಾಗಿದೆ, ಜೀವನೇ ಪರಮಾತ್ಮನಾಗಿದ್ದಾನೆ. ಅಜ್ಞಾನವೆನ್ನುವ ನೈರ್ಮಾಲ್ಯವನ್ನು (ಪೂಜೆಗಿಟ್ಟ ಹೂವಿನ ಅವಶೇಷಗಳು – ಪ್ರಸಾದ) ನಿವಾರಿಸಿಕೊಂಡು ಪರಮಾತ್ಮನೇ ನಾನು ಎನ್ನುವ ಅಭೇದ ಜ್ಞಾನದಿಂದ ಪೂಜೆ ಮಾಡಬೇಕು. […]