ಹಫೀಜನ ಮೂರು ಪದ್ಯಗಳು

ಮೂಲ : ಹಫೀಜ್ | ಅನುವಾದ : ಚಿದಂಬರ ನರೇಂದ್ರ ಇದೊಳ್ಳೆ ವ್ಯವಹಾರ ! ನಮ್ಮ ಮಹಾನ್ ಧರ್ಮಗಳೇಲ್ಲ ಸರಕು ಸಾಗಿಸುವ ದೊಡ್ಡ ದೊಡ್ಡ ಹಡಗುಗಳಾದರೆ, ಈ ಕವಿತೆಗಳು ಜೀವ ರಕ್ಷಕ ದೋಣಿಗಳಂತೆ. ನನಗೆ ಗೊತ್ತಿರುವ ಪ್ರತೀ ಜಾಣ ಮನುಷ್ಯನೂ ಹಡಗಿನಿಂದ ದೋಣಿಗೆ ಹಾರಿದ್ದಾನೆ ಇದೊಳ್ಳೆ ವ್ಯವಹಾರ ಅಲ್ಲವೆ ಹಫೀಜ್? ~ ಹಫೀಜನಿಗೆ ಅದೊಂದೇ ಕೆಲಸ ಆಕಾಶ ಒಂದು ಜೋತು ಬಿದ್ದ ನೀಲೀ ಸಮುದ್ರ. ನಕ್ಷತ್ರಗಳು ಸಾಗರದಲ್ಲಿ ಈಜುತ್ತಿರುವ ಪುಟ್ಟ ಪುಟ್ಟ ಮೀನುಗಳು. ಗ್ರಹ ಮಂಡಲಗಳು ನಾನು […]

ನಾನು ಮತ್ತು ನೀನು ಎಂದರೇನು ? : ಸೂಫಿ ಶಬ್’ಸ್ತರಿ ಪದ್ಯ

ನಾನು ಮತ್ತು ನೀನು ಎಂದರೇನು? ಒಂದೇ ದೀಪದ ನೂರು ಬೆಳಕು ತೂರಿ ಬಿಡುವ ಜಾಲರಿ ನಾವು ನಾನು ಮತ್ತು ನೀನು ಭೂಮಿ ಮತ್ತು ಸ್ವರ್ಗ -ದ ನಡುವೆಯೊಂದು ಪರದೆ ತೆರೆ ಸರಿಸಿ ನೋಡು, ಕಾಣುವುದು ಎಲ್ಲ ಮತಗಳು ಬೆಸೆದುಕೊಂಡ ಬಗೆ ಮತ್ತೆ ನೀನೇ ಕೇಳುವೆ: ಮಸೀದಿ ಏನೆಂದು ಸಿನಗಾಗ್ ಯಾಕೆಂದು, ಅಗ್ನಿಮಂದಿರ ಯಾರದೆಂದು… ~ ಶಬ್’ಸ್ತರಿ | ಅನುವಾದ : ಸುನೈಫ್

ಒಂದು ಝೆನ್ ಪ್ರಶ್ನೋತ್ತರ

ತನ್ನ ಶಿಷ್ಯರಿಗೆ ಮಾಸ್ಟರ್ ಪ್ರಶ್ನೆ ಮಾಡಿದ. “ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “ ಒಬ್ಬ ಶಿಷ್ಯ : ದೂರದಿಂದ ನಾವು , ಯಾವುದು ನರಿ ಯಾವುದು ನಾಯಿ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ. ಮಾಸ್ಟರ್ ಗೆ ಈ ಉತ್ತರ ಹಿಡಿಸಲಿಲ್ಲ. ಇನ್ನೊಬ್ಬ ಶಿಷ್ಯ : ದೂರದಿಂದ ನಾವು , ಯಾವುದು ಆಲದ ಮರ, ಯಾವುದು ಅರಳಿ ಮರ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ. ಮಾಸ್ಟರ್ ಗೆ ಈ ಉತ್ತರವೂ […]

ಸ್ವಾತಂತ್ರ್ಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 14

ಮಾತುಗಾರನೊಬ್ಬ ಸ್ವಾತಂತ್ರ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸತೊಡಗಿದ. ನಗರದ ಹೆಬ್ಬಾಗಿಲ ಬಳಿ, ಮನೆಯೊಳಗೆ ಬೆಂಕಿಗೂಡಿನ ಸುತ್ತ ನೀವು ದೀರ್ಘದಂಡ ಹಾಕಿ ಸ್ವಾತಂತ್ರ್ಯವನ್ನು ಆರಾಧಿಸುವುದನ್ನ ನಾನು ನೋಡಿದ್ದೇನೆ, ತನ್ನ ಕುತ್ತಿಗೆಗೆ ಕತ್ತಿ ಹಿಡಿದ ಕ್ರೂರಿಯನ್ನು ಗುಲಾಮನೊಬ್ಬ ದೀನನಾಗಿ ಆರಾಧಿಸುತ್ತಿರುವಾಗಲೂ. ಹೌದು, ದೇವಾಲಯದ ಅಂಗಳದಲ್ಲಿ ಮತ್ತು ಕೋಟೆ ಕೊತ್ತಲಗಳ ನೆರಳಲ್ಲಿ, ನಿಮ್ಮೊಳಗಿನ ಅತ್ಯಂತ ಸ್ವಾತಂತ್ರ್ಯಪ್ರಿಯ ಜನ ತಮ್ಮ ಸ್ವಾತಂತ್ರ್ಯವನ್ನು ಕೈಕೊಳದಂತೆ, ಕುತ್ತಿಗೆಯ ಮೇಲಿನ ನೊಗದಂತೆ ಧರಿಸಿ ಓಡಾಡುವುದನ್ನೂ ನೋಡಿದ್ದೇನೆ. ನನ್ನ ಹೃದಯ ನನ್ನೊಳಗೇ ಕಣ್ಣೀರು ಸುರಿಸುತ್ತಿದೆ ; ನೀವು ನಿಜವಾಗಲೂ […]

ಬಸವ ವಚನ ವಾಚನ : ಬಸವಣ್ಣನವರ ವಚನಗಳ ಪ್ರಸ್ತುತಿ

ಸ್ವಸ್ಥ ಬೆಳಗಿನ ಆರಂಭಕ್ಕೆ, ಬಸವಣ್ಣನವರ ಕೆಲವು ವಚನಗಳು…. ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ !? ~ ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ… ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ~ ಎನ್ನ ನಡೆಯೊಂದು ಪರಿ  ಎನ್ನ ನುಡಿಯೊಂದು ಪರಿ  ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ  ನುಡಿಗೆ ತಕ್ಕ ನಡೆಯ […]

ದೇವರು ಕಷ್ಟವೇಕೆ ಕೊಡುತ್ತಾನೆ? ನಿಯತಿಯ ತಪ್ಪಿಗೆ ನಾವು ಹೊಣೆಯೇ? : ಅರಳಿಮರ ಸಂವಾದ

ನಾವು ಕಷ್ಟ ಮಾತ್ರವಲ್ಲ, ಸುಖವನ್ನೂ ದೇವರ ತಲೆಯ ಮೇಲೆ ಹೊರಿಸಿ, ಅವನು ಕೊಟ್ಟ ಎಂದುಬಿಡುತ್ತೇವೆ. ಆದ್ದರಿಂದ, ತಪ್ಪು ದೇವರದ್ದಲ್ಲ, ನಮ್ಮದು. ಸುಖವನ್ನು ನಾವು ದೇವರ ಮೇಲೆ ಹೊರಿಸೋದು, ಅದನ್ನು ನಿಭಾಯಿಸುವ ಮತ್ತು ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅಷ್ಟೆ. ಹಾಗೆಯೇ ಕಷ್ಟವನ್ನು ದೇವರ ಮೇಲೆ ಹೊರಿಸೋದು, ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು! ~ ಚಿತ್ಕಲಾ ದೇವರು ಕಷ್ಟಗಳನ್ನೇಕೆ ಕೊಡುತ್ತಾನೆ? ಇದು ಅರಳಿಮರದ ಚರ್ಚೆಯಲ್ಲಿ ಓದುಗರಾದ ಲಕ್ಷ್ಮಿಮಧು ಅವರು ಮುಂದಿಟ್ಟ ಪ್ರಶ್ನೆ. ಎಲ್ಲಕ್ಕಿಂತ ಮೊದಲು, ದೇವರು ಅನ್ನುವ ಅಸ್ತಿತ್ವ ಒಂದಿದೆ ಮತ್ತು […]

ಆಧ್ಯಾತ್ಮಿಕ ನಾಸ್ತಿಕತೆ

ಆಧ್ಯಾತ್ಮಿಕ ನಾಸ್ತಿಕತೆ ಎಂಬ ಆಧುನಿಕ ಸಂಗತಿ : ಅರಳಿಮರ ಸಂವಾದ

‘ಅರಳಿಮರ’, ಆರಂಭದ ದಿನಗಳಲ್ಲಿಯೇ ಆಧ್ಯಾತ್ಮಿಕ ನಾಸ್ತಿಕತೆಯ ಚರ್ಚೆಯನ್ನು ಆರಂಭಿಸಿತ್ತು. ಈ ಏಳು ತಿಂಗಳಲ್ಲಿ ಮತ್ತೆ ಮತ್ತೆ ಈ ಸಂಗತಿ ಹಲವು ಪ್ರಶ್ನೆಗಳಾಗಿ ಕೇಳಲ್ಪಡುತ್ತಿದೆ. ಆದ್ದರಿಂದ, ಮತ್ತೊಮ್ಮೆ ಚರ್ಚೆಗೆ ಇದನ್ನು ನಿಮ್ಮ ಮುಂದಿಡಲಾಗುತ್ತಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.  ನಾಸ್ತಿ ಪದದ ಶಬ್ದಾರ್ಥ `ಇಲ್ಲ ‘ ಎಂದು. ನಾಸ್ತಿಕತೆಯು ದೇವರು ಇಲ್ಲವೆಂಬ ವಾದ ಹೊಂದಿರುವವರ ಪಂಥ. ಈ ಪಂಥ ಯಾವುದೋ ಒಂದು ದೇಶ,ಕಾಲ, ಸಮುದಾಯಕ್ಕೆ ಸೀಮಿತವಾಗಿರುವಂಥದ್ದಲ್ಲ. ಅಸ್ತಿ (ಇರುವಿಕೆ) ವಾದದ ಜೊತೆಗೇ ನಾಸ್ತಿ ವಾದವೂ (ಇಲ್ಲದಿರುವಿಕೆ) ಹುಟ್ಟಿಕೊಂಡು ಒಂದಕ್ಕೊಂದು ಮುಖಾಮುಖಿಯಾಗುತ್ತ […]

ನಸ್ರುದ್ದೀನನ ನ್ಯಾಯ : ಯಾರಿಗೆಷ್ಟು ಗೋಲಿ?

ಇಬ್ಬರು ಮಕ್ಕಳಿಗೆ 12 ಗೋಲಿಗಳಿದ್ದ ಒಂದು ಚೀಲ ದಾರಿಯಲ್ಲಿ ಸಿಕ್ಕಿತು. ಅವನ್ನು ಹೇಗೆ ಹಂಚಿಕೊಳ್ಳಬೇಕು ಎಂದು ಆ ಮಕ್ಕಳಿಬ್ಬರು ಜಗಳಾಡತೊಡಗಿದರು. ವಿಷಯ ತೀರ್ಮಾನವಾಗದೇ ಹೋದಾಗ, ಕೊನೆಗೆ ಮುಲ್ಲಾ ನಸ್ರುದ್ದೀನ ನನ್ನು ಜಗಳ ಬಗೆಹರಿಸುವಂತೆ ಕೇಳಿಕೊಂಡರು. ಮುಲ್ಲಾ ನಸ್ರುದ್ದೀನ : ಈ ಸಮಸ್ಯೆಯನ್ನು ಮನುಷ್ಯರು ಬಗೆಹರಿಸಿಕೊಳ್ಳುವಂತೆ ತೀರ್ಮಾನ ನೀಡಲೋ ಅಥವಾ ಭಗವಂತ ನಿರ್ಣಯಿಸುವಂತೆ ಆದೇಶ ಕೊಡಲೋ? ಮಕ್ಕಳು : ಭಗವಂತನ ಮಾತು ಯಾರೂ ಮೀರಲಿಕ್ಕಾಗುವುದಿಲ್ಲ. ಭಂಗವಂತ ತೀರ್ಪು ಕೊಡುವಂತೆಯೇ ತೀರ್ಮಾನ ಹೇಳು. ಮುಲ್ಲಾ ನಸ್ರುದ್ದೀನ ಒಮ್ಮೆ ಆ ಗೋಲಿಗಳನ್ನು […]

ಫರ್ನಿಚರ್ ಎಲ್ಲಿ !? ~ ಝೆನ್ ಸಂಭಾಷಣೆ

ಒಮ್ಮೆ ಒಬ್ಬ ಪ್ರವಾಸಿ, ಝೆನ್ ಮಾಸ್ಟರ್’ ನ ಮನೆಗೆ ಬಂದ. ಅಲ್ಲಿ ಕೇವಲ ಒಂದು ಟೇಬಲ್ ಮತ್ತು ಒಂದು ಖುರ್ಚಿ ನೋಡಿದ ಪ್ರವಾಸಿಗೆ ಆಶ್ಚರ್ಯವಾಯಿತು. ಪ್ರವಾಸಿ : ಬೇರೆ ಫರ್ನೀಚರ್ ಎಲ್ಲ ಎಲ್ಲಿ ? ಮಾಸ್ಟರ್ : ಯಾಕೆ? ನಿನ್ನ ಫರ್ನೀಚರ್ ಎಲ್ಲಿ? ಪ್ರವಾಸಿ : ನನ್ನ ಫರ್ನೀಚರ್ ? ನಾನು ಪ್ರವಾಸಿ, ಸುಮ್ಮನೇ ಇಲ್ಲಿಂದ ಹಾಯ್ದು ಹೋಗುತ್ತಿದ್ದೆ. ಮಾಸ್ಟರ್ : ನಾನೂ ಅಷ್ಟೇ. (ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

ಅರಿವಿಗೆ ತಕ್ಕಂತೆ ಮಾತುಗಳು ಅರ್ಥ ಪಡೆಯುತ್ತವೆ

ಯಾವುದೇ ಪದ, ಶಬ್ದ, ಕೇಳುಗರ ಕಿವಿಯಲ್ಲಿ, ಅವರ ಅರಿವಿಗೆ ತಕ್ಕಂತೆ ಅರ್ಥ ಪಡೆಯುತ್ತದೆ. ಮಾತು ಎನ್ನುವುದು ಮಾಯೆಯಂತೆ. ಅದು ಸಮ್ಮೋಹಗೊಳಿಸುತ್ತದೆ. ನಮ್ಮನ್ನು ಒಂದು ಅರ್ಥಕ್ಕೆ ಬದ್ಧರಾಗಿ ಕಟ್ಟಿಹಾಕುತ್ತದೆ. ಆ ಅರ್ಥದ ಪಾಶದಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ ~ ಚೇತನಾ ತೀರ್ಥಹಳ್ಳಿ ಮಾಡುವ ಪ್ರತಿಯೊಂದು ಕೆಲಸಕ್ಕೂ ಅರ್ಥ ಇರಬೇಕೆಂದು ನಾವು ಬಯಸುತ್ತೇವೆ. ಆಡುವ ಪ್ರತಿ ಮಾತಿಗೂ ಅರ್ಥ ಇರಬೇಕೆಂದು ಅಪೇಕ್ಷೆ ಪಡುತ್ತೇವೆ. ಅರ್ಥವಿಲ್ಲದ ಮಾತು, ನಿರುದ್ದಿಶ್ಯ ಕೆಲಸಗಳು  ಸಮಯದ ಅಪವ್ಯಯದಂತೆ ನಮಗೆ ತೋರುತ್ತವೆ. ಆದರೆ ನಾವು ಇವನ್ನು ಪ್ರಜ್ಞಾಪೂರ್ವಕವಾಗಿ […]