ಕನ್’ಫ್ಯೂಶಿಯಸ್ ಹೇಳಿದ್ದು …

“ಯಾವತ್ತಿಗೂ ಬೀಳದೆ ಇರುವುದೇ ನಮ್ಮ ಸಾಧನೆಯಲ್ಲ. ಬಿದ್ದಾಗಲೆಲ್ಲ ಹೇಗೆ ಎದ್ದು ನಿಂತೆವು ಅನ್ನುವುದು ನಮ್ಮ ಸಾಧನೆಯಾಗುತ್ತದೆ” ಅನ್ನುತ್ತಾನೆ ತತ್ತ್ವಜ್ಞಾನಿ ಕನ್’ಫ್ಯೂಷಿಯಸ್.  ನಾವು ಸೋಲಲೇ ಇಲ್ಲ ಅನ್ನುವುದಕ್ಕಿಂತ, ಸೋತಾಗ ಅದನ್ನು ಮೀರಿ ಹೇಗೆ ಬೆಳೆದೆವು, ಹೇಗೆ ಗೆಲುವಿನ ಛಲ ತೊಟ್ಟು ಮುನ್ನಡೆದೆವು ಮತ್ತು ಗೆಲುವು ಸಾಧಿಸಲು ಪ್ರಯತ್ನಿಸಿದೆವು ಅನ್ನುವುದು ಮುಖ್ಯವಾಗುತ್ತದೆ. ಬದುಕಿನ ನೈಜ ಸ್ವಾರಸ್ಯ ಇರುವುದೇ ಇಲ್ಲಿ. ಆದ್ದರಿಂದ ಸೋಲು ಬಂದಾಗ ಕುಗ್ಗದೆ, ಗೆಲುವಿಗೆ ಅತಿಯಾಗಿ ಹಿಗ್ಗದೆ ಮುನ್ನಡೆಯಬೇಕು ಅನ್ನುವುದು ಈ ಮಾತಿನ ವಿಸ್ತರಣೆ.  Advertisements

More

ಶೋಹಿಚಿ ತೀರಿಕೊಂಡಿದ್ದು ಗೊತ್ತಾಗಿದ್ದು ಹೇಗೆ?

ಶೋಹಿಚಿ ಒಬ್ಬ ಒಕ್ಕಣ್ಣ ಝೆನ್ ಗುರು. ಅವನು ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ. ಅಪಾರ ಜ್ಞಾನವನ್ನು ಹೊಂದಿದ್ದ ಶೋಹಿಚಿ ವ್ಯರ್ಥವಾಗಿ ಮಾತಾಡುವುದನ್ನಾಗಲೀ ಸಂಕೇತಗಳನ್ನಾಗಲೀ ಇಷ್ಟಪಡುತ್ತಿರಲಿಲ್ಲ. ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ. ಶೋಹಿಚಿಯ ಕಾರಣದಿಂದ ತೊಫುಕು ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ. ಅಲ್ಲಿ ಅವನು ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅನುಮತಿ ನೀಡುತ್ತಿರಲಿಲ್ಲ. ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನು ಮಾಡಬೇಕಾಗಿಯೂ ಇರಲಿಲ್ಲ. ವರ್ಷಗಳು ಉರುಳಿದವು. ಒಂದು ದಿನ ತೊಫುಕು ದೇವಾಲಯದ ಸಮೀಪದಲ್ಲಿ […]

More

ಮೂರ್ಖತ್ವದ ಮಾನದಂಡ

~ ಯಾದಿರಾ ಮರುಭೂಮಿಯ ಮಹಾಯೋಗಿನಿ ರಾ-ಉಮ್ ಬಳಿಗೆ ಮೂರ್ಖನೊಬ್ಬ ಬಂದ. ಈಚಲ ಮರದ ಕೆಳಗೆ ಧ್ಯಾನಾಸಕ್ತಳಾಗಿದ್ದ ರಾ-ಉಮ್ ಕಣ್ಣು ತೆರೆದಳು. ‘ಅಮ್ಮಾನಾನೊಬ್ಬ ಮೂರ್ಖ ಎಂದು ನನಗೆ ಗೊತ್ತಿದೆ. ಮೂರ್ಖತ್ವವನ್ನು ಹೇಗೆ ಕಳೆದುಕೊಳ್ಳುವುದು ಎಂದು ಮಾತ್ರ ಗೊತ್ತಾಗುತ್ತಿಲ್ಲ’ ಎಂದು ಆ ಮೂರ್ಖ ಅಲವತ್ತುಕೊಂಡ. ರಾ-ಉಮ್ ಗಹಗಹಿಸಿ ನಕ್ಕು. ‘ಅಂದರೆ ನೀನು ಮೂರ್ಖ ಎಂದು ನಿನಗೆ ಗೊತ್ತಿದೆ. ಹಾಗಾದರೆ ನೀನು ಮೂರ್ಖನಾಗಿರಲು ಸಾಧ್ಯವೇ ಇಲ್ಲ’ ಎಂದಳು. ಮೂರ್ಖನಿಗೆ ತಲೆಕೆಟ್ಟಂತಾಯಿತು. ಅವನು ವಿವರಿಸಿದ: ‘ಎಲ್ಲರೂ ನನ್ನನ್ನು ಮೂರ್ಖ ಎನ್ನುತ್ತಾರೆ’ ರಾ-ಉಮ್ ಗೆ […]

More

ಮೀನಿನಿಂದ ಫಜೀತಿಗೊಳಗಾದ ಹದ್ದು

ಒಮ್ಮೆ ಹದ್ದೊಂದು ಕೆರೆಯ ದಡದಲ್ಲಿ ಬೆಸ್ತನು ಹಿಡಿದಿಟ್ಟ ಮೀನನ್ನು ಎತ್ತಿಕೊಂಡು ಹಾರಿತು. ಹದ್ದಿನ ಕೊಕ್ಕಿನಲ್ಲಿ ಮೀನನ್ನು ಕಂಡೊಡನೆ ಹತ್ತಾರು ಕಾಗೆಗಳು ಕಾವ್ ಕಾವ್ ಅನ್ನುತ್ತಾ ಅದರ ಸುತ್ತ ಸುತ್ತುವರಿದವು. ಹದ್ದು ಎತ್ತ ಹೋದರೂ ಕಾಗೆಗಳ ಹಿಂಡು ಅದನ್ನು ಹಿಂಬಾಲಿಸಿದವು. ಹತ್ತರಷ್ಟಿದ್ದ ಹಿಂಡಿಗೆ ನೂರಾರು ಕಾಗೆಗಳು ಸೇರಿಕೊಂಡವು. ಅವುಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹದ್ದು ಪರದಾಡಿತು. ಈ ಪರದಾಟದಲ್ಲಿ ಅದರ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿತ್ತು. ಮೀನು ಕೆಳಗೆ ಬೀಳುತ್ತಿದ್ದಂತೆಯೇ ಹದ್ದನ್ನು ಬಿಟ್ಟು ಕಾಗೆಗಳು ಅದರತ್ತ ಮುಗಿಬಿದ್ದವು. ಈ ಎಲ್ಲ […]

More

ಫಲದ ನಿರೀಕ್ಷೆಯಿಂದಲೇ ಕೆಲಸ ಮಾಡುವಾಗ ಮನಸ್ಸನ್ನು ಸಂಭಾಳಿಸುವುದು ಹೇಗೆ?

ಭಗವದ್ಗೀತೆಯ ಶ್ರೀಕೃಷ್ಣ ಹೇಳಿದಂತೆ ಫಲಾಫಲಗಳ ಬಗ್ಗೆ ಚಿಂತಿಸದೆ ಕೇವಲ ಕರ್ಮವನ್ನು ಮಾಡಬೇಕು. ಆದರೆ ಫಲವನ್ನು ಅಪೇಕ್ಷಿಸಿಯೇ ಒಂದು ಕೆಲಸವನ್ನು ಹಿಡಿದಿರುವಾಗ, ಸಾಹಸಕ್ಕೆ ಕೈಹಾಕಿದಾಗ ಏನು ಮಾಡಬೇಕು? ~ ಆನಂದಪೂರ್ಣ ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ ಇಲ್ಲದೆ ನಾವು ಅದನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಪೂರ್ವ ನಿರ್ಧಾರಿತ ಪರೀಕ್ಷೆಗಳಲ್ಲಿ […]

More

ಜೀವನಶೈಲಿಯಾದ ಮತಪಂಥಗಳು…

ಮೂಲಧರ್ಮದಿಂದ ಕವಲೊಡೆದ ಕೆಲವು ಮತಪಂಥಗಳು ಕಾಲಕ್ರಮದಲ್ಲಿ ಒಂದು ಧರ್ಮಕ್ಕಿಂತ ಹೆಚ್ಚು ಜೀವನಶೈಲಿಯಾಗಿ ರೂಪುಗೊಂಡಿವೆ. ಮತ್ತಿವು ತಾವು ಕವಲಾಗಿ ಬಂದ ಧರ್ಮಗಳನ್ನು ಸಹನೀಯವೂ ಸುಂದರವೂ ವಿಶಾಲವೂ ಆಗಿಸುತ್ತ ಬಂದಿವೆ. ಬಾವುಲ್, ಸೂಫೀ, ಝೆನ್, ತಾವೋ, ಹಸೀದ್ ಮೊದಲಾದವುಗಳು ಇದಕ್ಕೆ ಸದ್ಯದ ಉದಾಹರಣೆಗಳು.. ಧರ್ಮ ಎಂದರೆ ಶಾಶ್ವತತೆಯನ್ನು ಸಮಯದೊಳಕ್ಕೆ ಅನುವಾದಿಸುವುದು ಅನ್ನುತ್ತಾರೆ ಓಶೋ. ನಿತ್ಯಸತ್ಯವಾದ, ಬದಲಾಗದ ಸಂಗತಿಯೊಂದು ಕಾಲದ ಹರಿವಿನ ಜೊತೆ ವಿಸ್ತಾರಗೊಳ್ಳುತ್ತ, ಇಲ್ಲವೇ ವಿಘಟನೆಗೊಳ್ಳುತ್ತ ಸಾಗುವ ಪ್ರಕ್ರಿಯೆಯನ್ನು ನಾವು ಧರ್ಮವೆಂದು ಕರೆಯುತ್ತೇವೆ. ಒಂದಷ್ಟು ಚಿಂತನೆಗಳು, ವಿಧಿವಿಧಾನಗಳು, ನಂಬಿಕೆಗಳು ಒಗ್ಗೂಡಿ ಒಂದು […]

More