ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ