ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #3 ~ ಪರಿವರ್ತನ ಪ್ರಕ್ರಿಯೆ

ಒನ್ ವೇ ಲವ್ ‘ನಿಂದ ಉಂಟಾಗುವ ಹತಾಶೆ ವ್ಯಕ್ತಿಯನ್ನು ಕ್ರೂರಿಯನ್ನಾಗಿಸುವ ಸಾಧ್ಯತೆ ಇರುತ್ತದೆ. ಅಥವಾ ಅದು ತೀವ್ರ ಖಿನ್ನತೆಗೆ ದೂಡುವುದೂ ಉಂಟು. ಇದರಿಂದ ಹೊರಬರಲು ಪರಿವರ್ತನ ಪ್ರಕ್ರಿಯೆಯ ಧ್ಯಾನ ಸಹಾಯ ಮಾಡುತ್ತದೆ  ~ ಚಿತ್ಕಲಾ ಪ್ರೇಮ ಏಕಮುಖ ಆಗಿರುವಾಗ, ಅದು ನೀಡುವ ನೋವು ಹತಾಶೆಗಳಿಂದ ಹೊರಬರಲು ‘ಪರಿವರ್ತನ’ ಧ್ಯಾನ ನಿಮಗೆ ಸಹಾಯ ಮಾಡುತ್ತದೆ. ಇದು ಕಠಿಣವಾದುದೇನೂ ಅಲ್ಲ. ಮುಖ್ಯವಾಗಿ ನೀವು ಅದರಿಂದ ಹೊರಕ್ಕೆ ಬರಲು ಮನಸ್ಸು ಮಾಡಬೇಕಷ್ಟೆ. ಪರಿವರ್ತನ ಪ್ರಕ್ರಿಯೆ, ಹೆಸರೇ ಹೇಳುವಂತೆ ಒಂದು ಪ್ರಕ್ರಿಯೆ. ಇದೊಂದು ಪ್ರೊಸೀಜರ್. […]

ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #1 ~ ಅನಾಹತ ಧ್ಯಾನ

ಈ ಸಂಚಿಕೆಯಲ್ಲಿ ಭಗ್ನ ಪ್ರೇಮಿಗಳಿಗಾಗಿ ಧ್ಯಾನ ವಿಧಾನವನ್ನು ನೋಡೋಣ. ಈ ದಿನಗಳಲ್ಲಿ, ವಿಶೇಷವಾಗಿ ಯುವಜನರು ಹಾಗೂ ಮಧ್ಯ ವಯಸ್ಕರು ಅನುಭವಿಸುತ್ತಿರುವ ತುಮುಲವಿದು. ಪ್ರೇಮ ವೈಫಲ್ಯದಿಂದ ಹೊರಗೆ ಬರಲಾಗದೆ ಖಿನ್ನತೆ, ಉದ್ವೇಗ ಮೊದಲಾದ ಮಾನಸಿಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಒದ್ದಾಡುವ ಜನರನ್ನು ನಾವು ನೋಡುತ್ತಲೇ ಇದ್ದೇವೆ. ಆದ್ದರಿಂದ ಮೊದಲನೆಯದಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವಿದನ್ನು ಲವ್ ಹೀಲಿಂಗ್ ಮೆಡಿಟೇಶನ್ ಎಂದು ಕರೆದಿದ್ದೇವೆ. ಈ ಲವ್ ಹೀಲಿಂಗ್ ಮೆಡಿಟೇಶನ್’ನಲ್ಲೂ ಹಲವು ಬಗೆಗಳಿದ್ದು, ಈ ಬಾರಿ ‘ಅನಾಹತ ಧ್ಯಾನ’ದ ಬಗೆಯನ್ನು ನೋಡೋಣ  […]