Kiran’s Never Mind Series #2

“ಎಲ್ಲೀವರೆಗೆ ನೀನು ಯಾವುದನ್ನಾದರೂ ಗಟ್ಟಿಯಾಗಿ ಹಿಡಿದುಕೊಂಡಿರ್ತೀಯೋ, ಅಲ್ಲೀವರೆಗೆ ನಿನ್ನಿಂದ ಚಲನೆ ಸಾಧ್ಯವಿಲ್ಲ. ನೀನು ಬರಲಿಕ್ಕೂ ಆಗೋದಿಲ್ಲ, ಹೋಗೋದಿಕ್ಕೆ ಕೂಡ. ನಡುಮಧ್ಯದಲ್ಲೇ ಯಾವ ಕ್ರಿಯೆಯೂ ಇಲ್ಲದೆ ವ್ಯರ್ಥವಾಗಿ ಉಳಿಯಬೇಕಾಗುತ್ತೆ” ಇದು ಝೆನ್ ತಿಳಿವು.  ನಾವು ಮಾಡೋದು ಹೀಗೇನೇ. ನಡಿಗೆಯ ಭಯದಿಂದ ಯಾವುದನ್ನಾದರೂ ಗಟ್ಟಿಯಾಗಿ ಹಿಡಿದುಕೊಳ್ತೇವೆ. ಆ ಆಸರೆ ನಮಗೆ ಪ್ರಿಯವಾಗುತ್ತಾ ಹೋಗಿ ನಡಿಗೆಯ ಬಗ್ಗೆ ಭಯ ಹೆಚ್ಚುತ್ತಾ ಹೋಗುತ್ತದೆ. ನಿಶ್ಚಲವಾದ ಆಸರೆಯನ್ನು ನೆಚ್ಚಿಕೊಂಡು ಚಲನೆಯನ್ನೇ ಕಳೆದುಕೊಳ್ತೇವೆ. ಈ ಮೂಲಕ ಪ್ರಗತಿ ಹೊಂದುವುದರಿಂದ ನಮ್ಮನ್ನು ನಾವು ವಂಚಿಸಿಕೊಳ್ತೇವೆ. ಈ ಆಸರೆ […]