ಕೃಷ್ಣನಲ್ಲಿ ಕುಂತೀದೇವಿಯ ಪ್ರಾರ್ಥನೆ

ಜೀವಿತದ ಅರ್ಧಕ್ಕಿಂತಲೂ ಹೆಚ್ಚು ಕಾಲ ತನ್ನ ಕುಟುಂಬದ, ತನ್ನ ಮಕ್ಕಳ ಅಧಿಕಾರ ಪ್ರಾಪ್ತಿಗಾಗಿ ಪರಿತಪಿಸಿದ್ದ ಕುಂತಿ ಅಂತ್ಯಕಾಲದಲ್ಲಿ ತನ್ನ ಈ ಸಾಂಸಾರಿಕ ಗುರುತನ್ನೆ ಅಳಿಸಿ ಹಾಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾಳೆ. `ನಾನು ಇಂತಹ ಮನೆತನಕ್ಕೆ ಸೇರಿದವಳು ಎನ್ನುವ ಭಾವನೆಯನ್ನು ಅಳಿಸಿ ಹಾಕು ಕೃಷ್ಣ’ ಎಂದಾಕೆ ಪ್ರಾರ್ಥಿಸುತ್ತಾಳೆ  ~ ಗಾಯತ್ರಿ ವಿಪದಃ ಸಂತು ನಃ ಶಶ್ವತ್ ತತ್ರತತ್ರ ಜಗತ್ಪತೇ | ಭವತೋ ದರ್ಶನಂ ಯತ್ ಸ್ಯಾದಪುನರ್ಭವದರ್ಶನಮ್ || `ಜಗತ್ತಿಗೆ ಒಡೆಯನಾದವನೇ, ನೀನು ಏನಾದರೂ ಕೊಡುವುದಿದ್ದರೆ ನನ್ನ ಜೀವನದುದ್ದಕ್ಕೂ ಕಷ್ಟವನ್ನು ಕೊಡು’ […]