ನೀರು ಕುಡಿಯಲೊಲ್ಲದ ಕುದುರೆಯನ್ನುಯಾರು ಪಳಗಿಸಬೇಕು?

ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತವೋ, ದಾರಿಯ ದೂರ ತಿಳಿದಿಲ್ಲವೋ, ದಾಹ ತಣಿಸಿಕೊಳ್ಳುವ ಅಗತ್ಯ ಮನಗಾಣಲಿಲ್ಲವೋ…. ಒಟ್ಟಾರೆ ನೀರು ಕುಡಿಯುತ್ತಿಲ್ಲ. ಹಾಗೆಯೇ ನಾವು ಕೂಡಾ…. ~ ಗಾಯತ್ರಿ ಇವತ್ತಿನ ದಿನವನ್ನು ಆದಷ್ಟು ಎಚ್ಚರಿಕೆಯಿಂದ ಕಳೆಯಬೇಕು, ಕೆಲಸಗಳನ್ನು ಫಲಿತಾಂಶದೊಡನೆ ತಾಳೆ ಹಾಕಿ ಮಾಡಬೇಕು ಎಂದೆಲ್ಲ ನೀವು ನಿರ್ಧರಿಸಿ ಆಗಿದೆ. ಇನ್ನು ಮುಂದಿನ ಹಂತ…. ಈಗ ನೀವು ಕೊಳದ ಎದುರು ನಿಂತ ಕುದುರೆಯನ್ನು ನೆನೆಯಿರಿ. ಅದರ ಪಕ್ಕ ಒಬ್ಬ ಕುದುರೆಸವಾರನನ್ನೂ. ನೀವು ಕುದುರೆ. ಕುದುರೆ ಸವಾರ […]