ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ….

ಎಲ್ಲವೂ ಆಕಾರಗಳೂ ನಿರಾಕಾರವನ್ನು ಆಧರಿಸಿವೆ. ಅವೆಲ್ಲವೂ ಅದರಿಂದಲೇ ಹೊಮ್ಮುತ್ತವೆ, ಅದರಲ್ಲಿಯೇ ಮುಳುಗುತ್ತವೆ; ಅದರಿಂದಲೇ ಪ್ರಕಟಗೊಳ್ಳುತ್ತವೆ, ಅದರಲ್ಲಿಯೇ ಪುನಃ  ವಿಲೀನವಾಗಿಹೋಗುತ್ತವೆ. ಯಾರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅವರನ್ನು ನಾವು ಪ್ರಜ್ಞಾವಂತರೆಂದು ಕರೆಯುತ್ತೇವೆ ~ Whosoever Ji ಚೇತನಕ್ಕೆ ತನ್ನದೇ ಆದ ಆಕಾರ ಇಲ್ಲದ ಕಾರಣ, ನಿರಾಕಾರವಾಗಿರುವ ಕಾರಣ ಅದು ಅರ್ಥೈಸಿಕೊಳ್ಳುತ್ತದೆಯೋ ಅದರೊಂದಿಗೆ ಸಮರೂಪ ಹೊಂದುತ್ತದೆ. ಆಕಾರಕ್ಕೆ ತನ್ನದೇ ಆದ ಅಸ್ತಿತ್ವ ಇರುವುದಿಲ್ಲ. ಅಸ್ತಿತ್ವ ಇರುವುದು ಚೇತನಕ್ಕೆ. ನಮಗೆ ಆಕಾರವು ಕಾಣಿಸುತ್ತದೆ. ಆದರೆ ಆಕಾರಕ್ಕೆ ಯಾವುದು ಆಧಾರವಾಗಿದೆಯೋ ಅದು ಕಾಣಿಸುವುದಿಲ್ಲ. ಎಲ್ಲ ಭ್ರಾಂತಿಯ […]