ಆರಾಧನೆಯೇ ಹೆಣ್ಣಾಗಿ ರೂಪು ತಳೆದಳು ರಾಧೆ

ರಾಧಾ ಎಲ್ಲ ಮಡಿವಂತಿಗೆಗಳನ್ನು ಬಿಟ್ಟು ಕೊಳಲಿನ ಕರೆಯ ಜಾಡು ಹಿಡಿದು ನಡೆದಳು. ಲೌಕಿಕದಲ್ಲಿ ಇರುತ್ತಲೇ ಪಾರಮಾರ್ಥಿಕ ನೆಲೆಯಲ್ಲೂ ಜೀವಿಸಿದಳು. ಹಾಗೆಂದೇ ಕೃಷ್ಣನನ್ನು ಸೇರಿದಳು. ಅಮರಳಾದಳು ಮಾತ್ರವಲ್ಲ, ಪ್ರೇಮವನ್ನೂ ಕೃಷ್ಣನೊಳಗಿನ ಪ್ರೇಮಿಯನ್ನೂ ಅಮರವಾಗಿಸಿದಳು. ರಾಧೆ… ಯಾರು ಹಾಗೆಂದರೆ? ಕೇಳುವ ಪ್ರಶ್ನೆಯೇ ಇಲ್ಲ. ಕೃಷ್ಣನ ಹೆಸರು ಗೊತ್ತಿರುವ ಎಲ್ಲರಿಗೂ ರಾಧೆಯ ಹೆಸರು ಗೊತ್ತು. ಆದರೂ ಇವಳೊಬ್ಬಳಿದ್ದಳು ಅನ್ನುವ ಬಗೆಗೇ ನೂರೆಂಟು ತರ್ಕ ವಿತರ್ಕ. ಅಷ್ಟೊಂದು ಸಮರ್ಪಣಾ ಭಾವದಲ್ಲಿ, ದ್ವೈತಾದ್ವೈತಗಳನ್ನು ಮೀರಿದ ಐಕ್ಯದಲ್ಲಿ ಇದ್ದುಕೊಳ್ಳುತ್ತ ಸಾಕ್ಷಾತ್ ಕೃಷ್ಣನನ್ನು ಪ್ರೇಮಿಸಿದವಳು ಒಬ್ಬಳಿದ್ದಳು ಎಂದರೆ […]