ಬೌದ್ಧರ 7 ಮಂದಿರಗಳು… | ಓಶೋ ವ್ಯಾಖ್ಯಾನ

ಹೇಗೆ ಹಿಂದೂಗಳು ಏಳು ಚಕ್ರಗಳ ಬಗ್ಗೆ ಮಾತನಾಡುತ್ತಾರೋ ಹಾಗೆಯೇ ಬೌದ್ಧರು ಏಳು ಮಂದಿರಗಳ ಬಗ್ಗೆ ಮಾತನಾಡುತ್ತಾರೆ… | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ಪುರಾತನ ಬೌದ್ಧ ಶಾಸ್ತ್ರ ಗ್ರಂಥಗಳಲ್ಲಿ ಏಳು ಮಂದಿರಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ. ಹೇಗೆ ಸೂಫಿಗಳು ಏಳು ಕಣಿವೆಗಳ ಬಗ್ಗೆ ಮಾತನಾಡುತ್ತಾರೋ, ಹೇಗೆ ಹಿಂದೂಗಳು ಏಳು ಚಕ್ರಗಳ ಬಗ್ಗೆ ಮಾತನಾಡುತ್ತಾರೋ ಹಾಗೆಯೇ ಬೌದ್ಧರು ಏಳು ಮಂದಿರಗಳ ಬಗ್ಗೆ ಮಾತನಾಡುತ್ತಾರೆ.

ಮೊದಲ ಮಂದಿರ ಭೌತಿಕವಾದದ್ದು (physical), ಎರಡನೇಯದು ಮನೋದೈಹಿಕವಾದದ್ದು (psycho-somatic), ಮೂರನೇಯದು ಮನೋವೈಜ್ಞಾನಿಕ (psychological), ನಾಲ್ಕನೇಯದು ಮನೋ ಆಧ್ಯಾತ್ಮಿಕ (psycho-spiritual), ಐದನೇಯದು ಆಧ್ಯಾತ್ಮಿಕ (spiritual), ಆರನೇಯದು ಆಧ್ಯಾತ್ಮಿಕ ಆಜ್ಞೆಯ (spiritual-transcendental), ಮತ್ತು ಕಟ್ಟಕಡೆಯದು ಎಲ್ಲಕ್ಕಿಂತ ಮಿಗಿಲಾದದ್ದು ಆಜ್ಞೆಯ (transcendental).

ಹೃದಯ ಸೂತ್ರಗಳು (heart sutra) ಏಳನೇಯ ಮಂದಿರಕ್ಕೆ ಸಂಬಂಧಪಟ್ಟಂತವು.

ಏಳನೇಯ ಮಂದಿರವನ್ನು ಪ್ರವೇಶಿಸಿದ ವ್ಯಕ್ತಿಯೊಬ್ಬನಿಂದ ಇವು ಘೋಷಿತವಾದವು, ಆಜ್ಞೇಯ, ಅಪ್ಪಟ. ಸಂಸ್ಕೃತದಲ್ಲಿ ಇದನ್ನೇ ಪ್ರಜ್ಞಾಪರಿಮಿತ ಎನ್ನುತ್ತಾರೆ – the wisdom of the beyond, from the beyond, in the beyond; ಇದು ಎಲ್ಲ ಬಗೆಯ ಗುರುತಿಸುವಿಕೆಗಳನ್ನು ಮೀರಿದಾಗ ಮಾತ್ರ ಸಾಧ್ಯವಾಗುವ ತಿಳುವಳಿಕೆ, ಅದು ಶ್ರೇಷ್ಠ ಇರಬಹುದು ಅಥವಾ ಕನಿಷ್ಠ ಆಗಿರಬಹುದು, ಈ ಲೋಕದ್ದು ಅಥವಾ ಆ ಲೋಕದ್ದು ; ಯಾವಾಗ ನೀವು ಎಲ್ಲ ಗುರುತಿಸುವಿಕೆಗಳನ್ನ ಮೀರುತ್ತೀರೋ, ಯಾವಾಗ ಪೂರ್ಣ ಅನಾಮಿಕರಾಗುತ್ತೀರೋ , ಯಾವಾಗ ತನ್ನ ಸುತ್ತ ಯಾವುದೇ ಹೊಗೆಯಿಲ್ಲದ ಶುದ್ಧ ಅರಿವಿನ ಜ್ವಾಲೆ ಉರಿಯಲು ಶುರುವಾಗುತ್ತದೆಯೋ ಆಗ ಸಾಧ್ಯವಾಗುವ ತಿಳುವಳಿಕೆ. ಆದ್ದರಿಂದಲೇ ಬೌದ್ಧರು ಈ ಪುಟ್ಟ ಪುಸ್ತಕವನ್ನು ಪ್ರೀತಿಸುತ್ತಾರೆ, ಅತ್ಯಂತ ಪುಟ್ಟ ಪುಸ್ತಕ ಇದು, ಹಾರ್ಟ ಸೂತ್ರ. ಇದು ಬೌದ್ಧ ಧರ್ಮದ ಹೃದಯ, ತಿರುಳು.

ಮೊದಲ ಬೌದ್ಧ ಮಂದಿರ ಯಾವುದು ಭೌತಿಕವಾಗಿದೆಯೋ ಅದು ಹಿಂದೂ ಯೋಗ ಶಾಸ್ತ್ರ ಪ್ರಕಾರದ ಮೂಲಾಧಾರಕ್ಕೆ ಸಮನಾದದ್ದು. ಎರಡನೇಯ ಮನೋ ದೈಹಿಕ ಮಂದಿರ ಸ್ವಾಧಿಷ್ಟಾನ ಚಕ್ರಕ್ಕೆ, ಮೂರನೇಯ ಮನೋವೈಜ್ಞಾನಿಕ ಮಂದಿರ ಮಣಿಪುರ ಚಕ್ರಕ್ಕೆ, ನಾಲ್ಕನೆಯ ಮನೋ ಆಧ್ಯಾತ್ಮಿಕ ಮಂದಿರ ಅನಾಹತ ಚಕ್ರಕ್ಕೆ, ಐದನೇಯ ಅಧ್ಯಾತ್ಮಕ ಮಂದಿರ ವಿಶುದ್ಧ ಚಕ್ರಕ್ಕೆ, ಆರನೇಯ ಆಧ್ಯಾತ್ಮಿಕ ಆಜ್ಞೆಯ ಮಂದಿರ ಆಜ್ಞಾ ಚಕ್ರಕೆ, ಮತ್ತು ಏಳನೇಯ ಹಾಗು ಕಟ್ಟ ಕಡೆಯ ಆಜ್ಞೆಯ ಮಂದಿರ ಸಹಸ್ರಾರ ಚಕ್ರಕ್ಕೆ ಸಮಾನಾಂತರ.

ಸಹಸ್ರಾರ ಎಂದರೆ ಸಾವಿರ ದಳಗಳ ಕಮಲ. ಇದು ಆತ್ಯಂತಿಕ ಅರಳುವಿಕೆಯ ಪ್ರತೀಕ : ಯಾವುದೂ ಮೊಗ್ಗಾಗಿ ಉಳಿದಿಲ್ಲ, ಪ್ರತಿಯೊಂದೂ ಅರಳಿದೆ, ಪ್ರತಿಯೊಂದು ಅಭಿವ್ಯಕ್ತಗೊಂಡಿರುವುದರ ಸೂಚನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.