ಶ್ರೀ ರಾಮಕೃಷ್ಣ ಪರಮಹಂಸರು ಹೇಳಿರುವಂತೆ ಆತ್ಮ ಶುದ್ಧಿಯನ್ನು ಸಾಧಿಸುವ ಪ್ರಕ್ರಿಯೆಯಲ್ಲಿನ ಏಳು ಹಂತಗಳು ಹೀಗಿವೆ…|ಕನ್ನಡಕ್ಕೆ: ಚಿರಂಬರ ನರೇಂದ್ರ
ಆತ್ಮ ಶುದ್ಧಿಯನ್ನು ಸಾಧಿಸುವ ಪ್ರಕ್ರಿಯೆಯಲ್ಲಿನ ಏಳು ಹಂತಗಳು…
1. ಸಾಧು – ಸಂಗ : ಸತ್ಸಂಗ, ಒಳ್ಳೆಯ ಜನರ, ಸಾಧು ಸಂತರ ಸಹವಾಸದಲ್ಲಿರುವುದು.
2. ಶೃದ್ಧಾ : ಆತ್ಮ ಕುರಿತಾದ ವಿಷಯಗಳಲ್ಲಿ ಅಚಲ ನಂಬಿಕೆ.
3. ನಿಷ್ಠಾ : ತನ್ನ ಆದರ್ಶಗಳ ಕುರಿತು ಏಕಾಗ್ರಚಿತ್ತದ ನಿಷ್ಠೆ.
4. ಭಕ್ತಿ : ಭಗವಂತನ ಕುರಿತಾದ ಆಳವಾದ ಪ್ರೇಮ.
5. ಭಾವ : ಭಗವಂತನ ಕುರಿತಾದ ಆಲೋಚನೆಯಲ್ಲಿ ಕರಗಿ ಹೋಗುವ ಸ್ಥಿತಿ.
6. ಮಹಾ ಭಾವ : ತೀವ್ರವಾದ ಭಾವವನ್ನು ಮಹಾ ಭಾವ ಎನ್ನುತ್ತಾರೆ. ಭಕ್ತ, ಹುಚ್ಚನಂತೆ ಒಮ್ಮೆ ನಗುತ್ತಾನೆ ಒಮ್ಮೊಮ್ಮೆ ಅಳುತ್ತಾನೆ. ಮನುಷ್ಯ ದೈಹಿಕ ಬಯಕೆಗಳ ಮೇಲೆ ವಿಜಯ ಸಾಧಿಸಿದ್ದಾನೆ. ಅವನಿಗೆ ತನ್ನ ದೇಹದ ಕುರಿತಾದ ಯಾವ ಪ್ರಜ್ಞೆಯೂ ಉಳಿದಿಲ್ಲ. ಇದು ಸಾಮಾನ್ಯರಿಗೆ ಸಾಧ್ಯವಾಗುವಂಥದಲ್ಲ, ಮಹಾನ್ ಆತ್ಮಗಳಿಗೆ ಅಥವಾ ದೈವಿ ಅವತಾರಗಳಿಗೆ ಮಾತ್ರ ಸಂಬಂಧಿಸಿದ್ದು.
7. ಪ್ರೇಮ, ಭಗವಂತನ ಕುರಿತಾದ ಅತ್ಯಂತ ತೀವ್ರವಾದ ಪ್ರೀತಿ. ಇದು ಮಹಾ ಭಾವದೊಂದಿಗೆ ಕೂಡಿ ಬರುವಂಥದು. ಈ ಸ್ಥಿತಿಯ ಎರಡು ಸ್ಪಷ್ಟ ಸೂಚಕಗಳೆಂದರೆ : ಒಂದು, ಸುತ್ತಲಿನ ಜಗತ್ತು ನೆನಪಿನಿಂದ ಮರೆಯಾಗಿರುವುದು. ಎರಡು, ದೇಹವನ್ನೂ ಒಳಗೊಂಡಂತೆ ಮನುಷ್ಯ ತನ್ನ ಸೆಲ್ಫ್ ನ ನೆನಪಿನಿಂದ ಪೂರ್ಣವಾಗಿ ಹೊರತಾಗಿರುವುದು.
ಇಂಥ ಪರಿಪೂರ್ಣ ಸ್ಥಿತಿಯಲ್ಲಿ ಮನುಷ್ಯ ಭಗವಂತನಿಗೆ ಮುಖಾಮುಖಿಯಾಗಿದ್ದಾನೆ. ಅವನು ತನ್ನ ಗುರಿಯನ್ನು ಮುಟ್ಟಿದ್ದಾನೆ ಅಥವಾ ಅವನು ತನ್ನ ಗುರಿಯಿಂದ ಹೊರತಾಗಿದ್ದಾನೆ.
(Source: Sayings of Sri Ramakrishna. (770)

