ಹಿಂತಿರುಗಿ ನೋಡಿ… | ಓಶೋ

ಹಿಂತಿರುಗಿ ನೋಡುವುದರಿಂದ ನಿಮ್ಮ ಕಾರುಣ್ಯವನ್ನು ಹೆಚ್ಚಿಸಿಕೊಳ್ಳಲು, ಉತ್ತಮಪಡಿಸಿಕೊಳ್ಳಲು ನಿಮಗೆ ಸಹಾಯ ಆಗಬಹುದು. ನೀವು ಕಾರುಣ್ಯವನ್ನ, ಅರಿವನ್ನ ಹೊಂದುವುದರಲ್ಲಿ ಯಾವಾಗ ಯಶಸ್ವಿ ಆದಿರಿ ಎನ್ನುವುದನ್ನ ಇನ್ನೊಮ್ಮೆ ಹಿಂತಿರುಗಿ ಗಮನಿಸಿ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಾನು ಇದನ್ನ ನಿಮಗೆ ನೆನಪಿಸಲು ಬಯಸುತ್ತೇನೆ,

ಬೈಬಲ್ ನಲ್ಲಿ ಜೀಸಸ್ ಮತ್ತೆ ಮತ್ತೆ “repent” ಎನ್ನುವ ಪದ ಬಳಸುತ್ತಾನಲ್ಲ ಅದು Aramaic ಭಾಷೆಯಿಂದ ಇಂಗ್ಲೀಷ್ ಗೆ ಆದ ತಪ್ಪು ಅನುವಾದದ ಪದ. ಇಂಗ್ಲೀಷ್ ಗೆ ಅನುವಾದ ಆದಾಗ ಆ ಪದ ಪೂರ್ತಿ ವಿರುದ್ಧ ಅರ್ಥವನ್ನು ಪಡೆದುಕೊಂಡಿದೆ. ಇಂಗ್ಲೀಷ್ ನಲ್ಲಿ ಅದು repentance ಆಗಿದೆ, ತಪ್ಪಿತಸ್ಥ ಭಾವ ( feeling guilty).

Aramaic ಭಾಷೆಯಲ್ಲಿ repent ಎಂದರೆ ಸರಳವಾಗಿ ಮರಳು, ಹಿಂತಿರುಗು, ಹಿಂತಿರುಗಿ ನೋಡು ಎಂದಷ್ಟೇ. ಹಿಂತಿರುಗಿ ಗಮನಿಸು : ದಿನ ಆಗಿ ಹೋಗಿದೆ, ಹಿಂತಿರುಗಿ ನೋಡು. ಇನ್ನೊಮ್ಮೆ ಪರಿಶೀಲಿಸಿ ನೋಡು, ಅರಿವು ಎಲ್ಲಿ ಕೊರತೆ ಆಯಿತು, ಇನ್ನೊಮ್ಮೆ ಗಮನಿಸು. ಹೀಗೆ ಮಾಡುವುದರಿಂದ ನಾಳೆ ನಿಮಗೆ ಸಹಾಯ ಆಗಬಹುದು, ನಿಮ್ಮ ಅರಿವು ವಿಸ್ತಾರಗೊಳ್ಳಬಹುದು. ನಿಮ್ಮ ಕಾರುಣ್ಯದಲ್ಲಿ ಎಲ್ಲಿ ಕೊರತೆ ಆಯಿತು ಇನ್ನೊಮ್ಮೆ ಪರಿಶೀಲಿಸು, ಹೀಗೆ ಮಾಡುವುದು ನಿಮ್ಮ ಕಾರುಣ್ಯವನ್ನು ಹೆಚ್ಚಿಸಿಕೊಳ್ಳಲು, ಉತ್ತಮಪಡಿಸಿಕೊಳ್ಳಲು ನಿಮಗೆ ಸಹಾಯ ಆಗಬಹುದು. ಹಾಗು ಕಾರುಣ್ಯವನ್ನ, ಅರಿವನ್ನ ಹೊಂದುವುದರಲ್ಲಿ ಯಾವಾಗ ನೀವು ಯಶಸ್ವಿ ಆದಿರಿ ಎನ್ನುವುದನ್ನ ಇನ್ನೊಮ್ಮೆ ಹಿಂತಿರುಗಿ ಗಮನಿಸಿ.

ನೀವು ಮಾಡಿದ ಕೆಲಸದ ಕುರಿತಾಗಿ ಯಾವ ಹೆಮ್ಮೆ , ಯಾವ ತಪ್ಪಿತಸ್ಥ ಭಾವ ಬೇಡ. ಇದು ಹೆಮ್ಮೆ ಮತ್ತು ತಪ್ಪಿತಸ್ಥ ಭಾವದ ಕುರಿತಾದ ಪ್ರಶ್ನೆ ಅಲ್ಲ, ನೀವು ನಿದ್ದೆಗೆ ಜಾರುವ ಮುನ್ನ ಆಗಿ ಹೋದ ಘಟನೆಯ ಬಗ್ಗೆ ಯಾವ ಹೆಮ್ಮೆ, ಯಾವ ಪಶ್ಚಾತಾಪ ಇಲ್ಲದೇ ಸರಳವಾಗಿ ಅವಲೋಕನ ಮಾಡುವುದು. ನೀವು ಯಾವುದೇ ತೀರ್ಮಾನಕ್ಕೆ ಮುಂದಾಗಬೇಡಿ, ನೀವು ನಿಮ್ಮನ್ನ ಪಾಪಿ ಅಂತಲೋ ಅಥವಾ ಇಂದು ನಾನು ಎಷ್ಟು ಒಳ್ಳೆಯ ಕೆಲಸ ಮಾಡಿದೆ ಎನ್ನುವ ಹೆಮ್ಮೆಯಿಂದಲೋ ಮೌಲ್ಯಮಾಪನ ಮಾಡಿಕೊಳ್ಳಬೇಡಿ. ಸುಮ್ಮನೇ ಮುಂಜಾನೆಯಿಂದ ರಾತ್ರಿಯವರೆಗೆ ನಿಮ್ಮೊಡನೆ ಅಥವಾ ನಿಮ್ಮಿಂದಾಗಿ ನಡೆದ ಘಟನೆಗಳನ್ನು ಯಾವ ಜಡ್ಜಮೆಂಟ್ ಇಲ್ಲದಂತೆ ಪರಿಶೀಲಿಸಿ.

ಇದು ಹೆಚ್ಚಿನ ಅರಿವನ್ನು ಸಾಧಿಸುವ ಉತ್ತಮ ವಿಧಾನ.

ತಪ್ಪು ಒಪ್ಪುಗಳ ಕುರಿತಾದ ಒಂದು ಸುಂದರ ಝೆನ್ ಕಥೆ ಇದೆ.

ವಯಸ್ಸಾಗಿದ್ದ ಝೆನ್ ಮಾಸ್ಟರ್ ತೀರಿಕೊಂಡಿದ್ದ. ಅವನ ಕೆಲವು ಶಿಷ್ಯರು ಮಾಸ್ಟರ್ ನ ಒಳ್ಳೆಯ ಗುಣಗಳ ಗುಣಗಾನ ಮಾಡುತ್ತಿದ್ದರೆ, ಇನ್ನೂ ಕೆಲವು ಶಿಷ್ಯರು ಮಾಸ್ಟರ್ ನ ಅವಗುಣಗಳ ಬಗ್ಗೆ , ಅವನಿಗೆ ಹೆಂಗಸರ ಚಟ ಇತ್ತು, ಕುಡಿಯುತ್ತಿದ್ದ, ಸೇದುತ್ತಿದ್ದ ಹೀಗೆಲ್ಲ ಗಾಸಿಪ್ ಮಾಡುತ್ತಿದ್ದರು.

ಒಂದು ದಿನ ತುಂಬಾ ಜ್ಞಾನಿ ಎಂದು ಖ್ಯಾತಳಾಗಿದ್ದ ಒಬ್ಬಳು ಝೆನ್ ಮಾಸ್ಟರ್ ಆ ಆಶ್ರಮಕ್ಕೆ ಬಂದಳು. ಅವಳೆದುರು ಶಿಷ್ಯರು ತೀರಿಹೋಗಿದ್ದ ತಮ್ಮ ಮಾಸ್ಟರ್ ನ ಗುಣ – ಅವಗುಣಗಳನ್ನು ಬಣ್ಣಿಸಿ ಹೇಳಿದರು.

“ ಹೌದಾ? ಆದರೆ ಅವನಿಗೆ ಜ್ಞಾನೋದಯವಾಗಿದ್ದು ನಿಮಗೆ ಗೊತ್ತಾ? “ ಆಕೆ ಶಿಷ್ಯರನ್ನು ಕೇಳಿದಳು.

“ ಇಲ್ಲ, ಗೊತ್ತಿಲ್ಲ. ನಿಮಗೆ ಹೇಗೆ ಗೊತ್ತು? “ ಶಿಷ್ಯರು ಅವಳನ್ನು ಪ್ರಶ್ನೆ ಮಾಡಿದರು.

“ ನಿಮ್ಮ ನಡುವೆ ಅವನು ಬದುಕಿದ್ದ ಎಂದರೆ ಬೇರೆ ಯಾವ ಸಾಧ್ಯತೆಯನ್ನೂ ನನಗೆ ಊಹಿಸಲಿಕ್ಕೆ ಆಗದು” ಆಕೆ ಉತ್ತರಿಸಿದಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.