ಸೈಕಲ್ ಬಳಸುವುದು, ಪಬ್ಲಿಕ್ ಟ್ರಾನ್ಸಪೋರ್ಟ್ ಬಳಸುವುದು ಹೆಚ್ಚು ಅಧ್ಯಾತ್ಮಿಕ ಎಂದು ನಿಮಗೆ ಅನಿಸತೊಡಗಿದೆಯೆಂದರೆ, ನೀವು ಇದನ್ನೆಲ್ಲ ಯಾರು ಬಳಸುವುದಿಲ್ಲವೋ, ಐಷಾರಾಮಿ ಕಾರುಗಳನ್ನ ಬಳಸುತ್ತಾರೋ ಅವರನ್ನು ಜಡ್ಜ್ ಮಾಡಲು ಶುರು ಮಾಡುತ್ತೀರಿ. ಇದು ಅಹಂ ನ ಟ್ರ್ಯಾಪ್ ನಲ್ಲಿ ಸಿಲುಕಿಹಾಕಿಕೊಂಡಂತೆ… ~ Mooji | ಚಿದಂಬರ ನರೇಂದ್ರ
ಲೌಕಿಕದ ಆಮಿಷ
ನಿನ್ನ ಸೆಳೆಯುತ್ತಿದ್ದರೆ
ನೀನು ಕೇವಲ ಒಬ್ಬ ನೌಕರ.
ಅಲೌಕಿಕದ ತುಡಿತ
ನಿನ್ನ ಜಗ್ಗುತ್ತಿದೆಯಾದರೆ
ನೀನೊಬ್ಬ ಪಕ್ಕಾ ಸುಳ್ಳುಗಾರ.
ಎರಡೂ ಮೂರ್ಖ ಆಸೆಗಳೇ.
ಪ್ರೀತಿ ತಂದಿಡುವ
ಗೊಂದಲಕರ
ಅಮಾಯಕ ಆನಂದವೊಂದೆ
ನಿನ್ನ ಪರಮ ಅಗತ್ಯ.
ನೀನು ಮರೆತದ್ದನ್ನು
ಅವರು ಕ್ಷಮಿಸಿಬಿಡುತ್ತಾರೆ.
– ರೂಮಿ
*******************
ವೆಜಿಟೇರಿಯನ್ ಆಗುವುದು, ಆರ್ಗ್ಯಾನಿಕ್ ಆಹಾರ ಬಳಸುವುದು, ಯೋಗ ಮಾಡುವುದು, ಧ್ಯಾನ ಮಾಡುವುದು, ಇವೆಲ್ಲ ಹೆಚ್ಚು ಅಧ್ಯಾತ್ಮಿಕ ಎಂದು ಯೋಚಿಸಲು ಶುರು ಮಾಡಿರುವಿರಾದರೆ, ಈ ಎಲ್ಲವನ್ನೂ ಯಾರು ಮಾಡುವುದಿಲ್ಲವೋ ಅವರನ್ನು ಜಡ್ಜ್ ಮಾಡಲು ಶುರು ಮಾಡಿರುತ್ತೀರಿ, ಈಗ ನೀವು ಅಹಂ ನ ಜಾಲದಲ್ಲಿ ಸಿಲುಕಿಹಾಕಿಕೊಂಡಿರುವಿರಿ.
ಸೈಕಲ್ ಬಳಸುವುದು, ಪಬ್ಲಿಕ್ ಟ್ರಾನ್ಸಪೋರ್ಟ್ ಬಳಸುವುದು ಹೆಚ್ಚು ಅಧ್ಯಾತ್ಮಿಕ ಎಂದು ನಿಮಗೆ ಅನಿಸತೊಡಗಿದೆಯೆಂದರೆ, ನೀವು ಇದನ್ನೆಲ್ಲ ಯಾರು ಬಳಸುವುದಿಲ್ಲವೋ, ಐಷಾರಾಮಿ ಕಾರುಗಳನ್ನ ಬಳಸುತ್ತಾರೋ ಅವರನ್ನು ಜಡ್ಜ್ ಮಾಡಲು ಶುರು ಮಾಡುತ್ತೀರಿ. ಇದು ಅಹಂ ನ ಟ್ರ್ಯಾಪ್ ನಲ್ಲಿ ಸಿಲುಕಿಹಾಕಿಕೊಂಡಂತೆ.
ಟಿ.ವಿ ನೋಡುವುದನ್ನ ನಿಲ್ಲಿಸುವುದು ಹೆಚ್ಚು ಅಧ್ಯಾತ್ಮಿಕ, ಟ.ವಿ ನೋಡುವುದರಿಂದ ನಿಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ ಎಂದು ನೀವು ಆಲೋಚಿಸುತ್ತಿರುವಿರಾದರೆ, ಯಾರು ಟಿ.ವಿ ನೋಡುತ್ತಾರೋ ಅವರನ್ನು ನೀವು ಜಡ್ಜ್ ಮಾಡಲು ಶುರು ಮಾಡುತ್ತೀರಿ. ಆಗ ನೀವು ಈಗೋ ದ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ.
ಗಾಸಿಪ್ ಮ್ಯಾಗಜಿನ್ ಗಳನ್ನು ಓದುವುದನ್ನ ನಿಲ್ಲಿಸುವುದು ಹೆಚ್ಚು ಅಧ್ಯಾತ್ಮಿಕ ಎಂದು ನೀವು ನಂಬಿರುವುರಾದರೆ, ಯಾರು ಇಂಥವನ್ನು ಓದುತ್ತಾರೋ ಅಂಥವರ ಬಗ್ಗೆ ನೀವು ಓಪಿನಿಯನ್ ಕಟ್ಟಿಕೊಳ್ಳುತ್ತೀರಿ. ಹೀಗೆ ಮಾಡುವ ಮೂಲಕ ಮತ್ತೊಮ್ಮೆ ಅಹಂ ನ ಖೆಡ್ಡಾಕ್ಕೆ ಬೀಳುತ್ತೀರಿ.
ಶಾಸ್ತ್ರೀಯ ಸಂಗೀತ ಕೇಳುವುದು, ಪ್ರಕೃತಿಯ ಧ್ವನಿಗಳನ್ನು ಆಲಿಸುವುದು ಹೆಚ್ಚು ಸ್ಪಿರಿಚ್ಯುಅಲ್ ಎಂದು ನೀವು ತಿಳಿದುಕೊಂಡಿರುವುರಾದರೆ, ಯಾರು ಕಮರ್ಶಿಯಲ್ ಮ್ಯೂಸಿಕ್ ಇಷ್ಟಪಡುತ್ತಾರೋ ಅವರನ್ನು ಆಡಿಕೊಳ್ಳಲು ಶುರು ಮಾಡುತ್ತೀರಿ. ಇದು ಕೂಡ ಅಹಂನ ಬಲೆಗೆ ಸಿಲುಕಿಹಾಕಿಕೊಳ್ಳುವ ಇನ್ನೊಂದು ಬಗೆ.
ಜನಪ್ರಿಯ ಸಿನೆಮಾ ನೋಡುವುದು, ಜನಪ್ರಿಯ ಕತೆ ಕಾದಂಬರಿಗಳನ್ನು ಓದುವುದೆಂದರೆ ಅಧ್ಯಾತ್ಮಿಕತೆಯಿಂದ ದೂರವಾಗುವುದು ಎನ್ನುವುದು ನಿಮ್ಮ ತಲೆಯೊಳಗೆ ಬಂತೆಂದರೆ, ನೀವು ಅಂಥ ಸಿನೆಮಾ ನೋಡುವ, ಅಂಥ ಪುಸ್ತಕಗಳನ್ನು ಓದುವವರನ್ನು ಜಡ್ಜ್ ಮಾಡಲು ಮುಂದಾಗುತ್ತೀರಿ ಮತ್ತು ಆಗ ಅಹಂ ನಿಮ್ಮನ್ನು ಮತ್ತೊಮ್ಮೆ ತನ್ನ ವಶ ಮಾಡಿಕೊಡಿಕೊಂಡಿರುತ್ತದೆ.
ಈ “ಸುಪೀರಿಯಾರಿಟಿ” ಯ ಭಾವನೆಯ ಬಗ್ಗೆ ನಾವು ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ಇದು, ಅಹಂ ನ ಟ್ರ್ಯಾಪ್ ಗೆ ನಾವು ಸಿಕ್ಕಿಹಾಕಿಕೊಳ್ಳುತ್ತಿದ್ದೇವೆ ಎನ್ನುವುದರ ಬಗ್ಗೆ ಸ್ಪಷ್ಟ ಸುಳಿವು ನೀಡುತ್ತದೆ. ಸಾತ್ವಿಕ ಜೀವನಕ್ಕೆ ವೆಜಿಟೇರಿಯನ್ ಡಯಟ್ ಉತ್ತಮ, ಕ್ಲಾಸಿಕಲ್ ಮ್ಯೂಸಿಕ್ ಕೇಳುವುದು ಉತ್ತಮ, ಐಷಾರಾಮಿ ಒಳ್ಳೆಯದಲ್ಲ ಎಂದು ತಿಳಿಯುವ, ನಮಗೆ ನೋಬಲ್ ಅನಿಸಬಹುದಾದ ಥಾಟ್ ಗಳ ಒಳಗೆ ಗುಪ್ತವಾಗಿ ನಮ್ಮ ಅಹಂ ಅಡಗಿಕೊಂಡಿರುತ್ತದೆ. ಮತ್ತು ಈ ಎಲ್ಲವನ್ನೂ ಯಾರು ಪಾಲಿಸುವುದಿಲ್ಲವೋ ಅವರಿಗಿಂತ ನಾವು ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿ ಗಟ್ಟಿಗೊಳ್ಳುತ್ತ ಹೋಗುತ್ತದೆ. ನಮ್ಮನ್ನು ಅಧ್ಯಾತ್ಮಿಕತೆಯತ್ತ ಕರೆದೊಯ್ಯಬಹುದಾಗಿದ್ದ ಈ ಎಲ್ಲ ಒಳ್ಳೆಯ ವಿಚಾರಗಳು, ಇದರ ಹಿಂದೆ ಇರುವ ಶ್ರೇಷ್ಠತೆಯ ಕಲ್ಪನೆಯಿಂದಾಗಿ ನಮ್ಮನ್ನು ಅಧ್ಯಾತ್ಮಿಕತೆಯಿಂದ ದೂರ ಮಾಡುತ್ತ ಹೋಗುತ್ತವೆ.
ಒಂದು ದಿನ ನಸ್ರುದ್ದೀನ್ ಡಾಕ್ಟರ್ ಬಳಿ ತನ್ನ ತೊಂದರೆ ಹೇಳಿಕೊಂಡ.
“ ಡಾಕ್ಟರ್ ಮೈಯಲ್ಲಿ ಎಲ್ಲಿ ಮುಟ್ಟಿದರೂ ನೋವು “
“ ಸರಿಯಾಗಿ, ವಿವರವಾಗಿ ಹೇಳು “
ಡಾಕ್ಟರ್ ನಸ್ರುದ್ದೀನ್ ಮೇಲೆ ರೇಗಿದರು.
ನಸ್ರುದ್ದೀನ್ ತನ್ನ ತೋರು ಬೆರಳನಿಂದ ಹಣೆ, ಮೂಗು, ಕತ್ತು, ಎದೆ, ಮೂಣಕಾಲು ಮುಟ್ಟಿ ತೋರಿಸಿದ,
“ ಎಲ್ಲಿ ಮುಟ್ಟಿದರೂ ನೋವಾಗುತ್ತದೆ ಡಾಕ್ಟರ್ “
ಡಾಕ್ಟರ್ ಗೆ ಸಂಶಯ ಬಂದು ನಸ್ರುದ್ದೀನ್ ನ ತೋರು ಬೆರಳಿನ ಎಕ್ಸರೇ ಮಾಡಿದರು, ಅವನ ತೋರು ಬೆರಳು ಫ್ರ್ಯಾಕ್ಚರ್ ಆಗಿತ್ತು.

