ಪರಿಮಿತಿ ದಾಟಿಸುವ ನಾಲ್ಕು ಅಭ್ಯಾಸಗಳು…


ನಮ್ಮ ಹೃದಯ ಚಿಕ್ಕದಾಗಿರುವಾಗ, ಇನ್ನೊಬ್ಬರು ಅಥವಾ ಸುತ್ತಲಿನ ಸಮಾಜ ನಮಗೆ ನೀಡಿದ ನೋವು ಮತ್ತು ಸಂಕಟವನ್ನು ನಮಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ… ~ Thich Nhat Hanh | Reconciliation: Healing the Inner Child; ಕನ್ನಡಕ್ಕೆ: ಚಿದಂಬರ ನರೇಂದ್ರ

‘ಕಾರಣ’
ದಯವಿಟ್ಟು ಜಾಗ ಖಾಲಿ ಮಾಡು
ನಿನಗಿಲ್ಲಿ ಜಾಗ ಇಲ್ಲವೇ ಇಲ್ಲ.
ಉಹೂಂ, ನೀನು ಒಂದೇ ಒಂದು ಕೊದಲಿನಷ್ಟು
ಸೂಕ್ಷ್ಮವಾಗುತ್ತೇನೆಂದರೂ
ನಾನು ಒಪ್ಪುವುದಿಲ್ಲ.

ಮುಂಜಾನೆ ಆಗುತ್ತದೆ ನಿಜ
ಆದರೆ
ನಿನ್ನ ಕೈಯಲ್ಲಿರುವ
ಮೇಣದ ಬತ್ತಿಯನ್ನು ನೋಡಿ
ಸೂರ್ಯ
ಬಿದ್ದು ಬಿದ್ದು ನಗುತ್ತಾನೆ.

ನನಗೆ ಅಪಮಾನವಾಗುತ್ತದೆ.

– ರೂಮಿ

*************

ಬುದ್ಧ ಅಪರಿಮಿತ ಹೃದಯವನ್ನು ಈ ಸಾಮತಿಯ ಮೂಲಕ ವಿವರಿಸುತ್ತಾನೆ.

ನಮ್ಮ ಕುಡಿಯುವ ನೀರಿನ ಗ್ಲಾಸ್ ನಲ್ಲಿ ಏನಾದರೂ ಕೊಳೆ ಬಿದ್ದರೆ, ನಮಗೆ ಆ ನೀರನ್ನು ಕುಡಿಯಲು ಆಗುವುದಿಲ್ಲ. ಇಡೀ ನೀರನ್ನು ಚೆೆಲ್ಲಿಬಿಡಬೇಕಾಗುತ್ತದೆ.

ಆದರೆ ಅದೇ ಕೊಳೆಯನ್ನು ಒಂದು ದೊಡ್ಡ ನದಿಯಲ್ಲಿ ಹಾಕಿದಾಗ, ನಮಗೆ ಆ ನದಿಯ ನೀರು ಕುಡಿಯಲು ಯಾವ ತೊಂದರೆಯೂ ಆಗುವುದಿಲ್ಲ. ನದಿ ವಿಶಾಲವಾದದ್ದು, ಅದು ಆ ಕೊಳೆಯನ್ನು ಸ್ವೀಕರಿಸಬಲ್ಲದು, ಮತ್ತು ನದಿಯ ನೀರಿನ ಶುದ್ಧತೆಯಲ್ಲಿ ಹಾಗು ರುಚಿಯಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ.

ನಮ್ಮ ಹೃದಯ ಚಿಕ್ಕದಾಗಿರುವಾಗ, ಇನ್ನೊಬ್ಬರು ಅಥವಾ ಸುತ್ತಲಿನ ಸಮಾಜ ನಮಗೆ ನೀಡಿದ ನೋವು ಮತ್ತು ಸಂಕಟವನ್ನು ನಮಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆದರೆ ನಮ್ಮ ಹೃದಯ ವಿಶಾಲವಾಗಿದ್ದಾಗ, ನಾವು ಆ ನೋವನ್ನ ಅಪ್ಪಿಕೊಳ್ಳಬಹುದು ಮತ್ತು ನಮಗೆ ಯಾವ ಯಾತನೆಯ ಅನುಭವವೂ ಆಗುವುದಿಲ್ಲ.

ಯಾವುದೇ ಒಂದು ಸಂಗತಿಯನ್ನು ಆಳವಾಗಿ ಗಮನಿಸುವ ಪ್ರ್ಯಾಕ್ಟೀಸ್ ಒಂದೇ ನಮ್ಮ ಹೃದಯವನ್ನು ಅಪರಿಮಿತದವರೆಗೆ ಹಿಗ್ಗಿಸಿಕೊಳ್ಳಲು ಸಹಾಯ ಮಾಡುತ್ತದೆ.

ಯಾವ ಹೃದಯವನ್ನು ಅಳತೆ ಮಾಡಬಹುದೋ ಅದು ಅಪರಿಮಿತ ಹೃದಯ ಆಗಲಾರದು.

ನಿಜವಾದ ಪ್ರೀತಿ ನಾಲ್ಕು ಅಂಶಗಳನ್ನು ಒಳಗೊಂಡಿರುತ್ತದೆ, ನಾಲ್ಕು ಅಪರಿಮಿತ ಮನಸ್ಸುಗಳನ್ನ.

ಆ ನಾಲ್ಕು ಅಂಶಗಳು ಯಾವವು ಎಂದರೆ, ಮೊದಲನೇಯದು ಮೈತ್ರಿ (living kindness), ಎರಡನೇಯದು ಕರುಣ (compassion), ಮೂರನೇಯದು ಮುದಿತ (joy) ಹಾಗು ನಾಲ್ಕನೇಯದು ಉಪೇಕ್ಷಾ ( equanimity, nondiscrimination)

ನಮ್ಮ ಹೃದಯಗಳನ್ನು ಅಪರಿಮಿತಗೊಳಿಸಿಕೊಳ್ಳಲು ಈ ನಾಲ್ಕು ಅಂಶಗಳನ್ನು ಪ್ರ್ಯಾಕ್ಟೀಸ್ ಮಾಡುವುದು ಬಹಳ ಅವಶ್ಯಕ.

ನಮ್ಮ ಹೃದಯ ವಿಸ್ತಾರಗೊಳ್ಳುತ್ತಿದ್ದಂತೆಯೇ ಅದಕ್ಕೆ ಯಾವುದೇ ತರನಾದ ನೋವನ್ನು ಭರಿಸುವುದು ಸುಲಭ ಸಾಧ್ಯವಾಗುತ್ತದೆ.

ನಮ್ಮ ಒಳಗಿನ ಯಾತನೆಯನ್ನು ನಾವು ಅಪ್ಪಿಕೊಂಡಾಗ , ನಮ್ಮನ್ನು ಯಾವ ಸಂಕಟವೂ ಬಾಧಿಸುವುದಿಲ್ಲ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.