ಮನೋಮಗ್ನತೆಗೆ 15 ಸೂತ್ರಗಳು

ಕೆಲಸದಲ್ಲಿ ಮನೋಮಗ್ನತೆಯನ್ನು (mindfulness) ಸಾಧಿಸಲು ಸಂತ ತಿಚ್ ನ್ಹಾತ್ ಹಾನ್ ಸೂಚಿಸುವ ಹದಿನೈದು ಪ್ರ್ಯಾಕ್ಟಿಕಲ್ ನಡೆಗಳು ಇಲ್ಲಿವೆ… ಚಿದಂಬರ ನರೇಂದ್ರ

ಅರಳುವುದೆಂದರೆ ಮರಳುವುದು
ನಿಮ್ಮ ಆರೈಕೆಗಾಗಿ, ನಿಮ್ಮ ಸಾಂತ್ವನಕ್ಕಾಗಿ.

ನಿಮ್ಮ ಅವಶ್ಯಕತೆ ಇದೆ ನಿಮ್ಮ ದೇಹಕ್ಕೆ,
ನೀವು ಬೇಕಾಗಿದ್ದೀರಿ ನಿಮ್ಮ ಭಾವನೆಗಳಿಗೆ,
ನಿಮಗಾಗಿ ಕಾಯುತ್ತಿವೆ ನಿಮ್ಮ ಗ್ರಹಿಕೆಗಳು,
ನಿಮ್ಮ ಅಂಗೀಕಾರಕ್ಕಾಗಿ ಉತ್ಸುಕವಾಗಿವೆ
ನಿಮ್ಮ ಸಂಕಟಗಳು ,

ಮರಳಿ ನಿಮ್ಮತನಕ್ಕೆ, ನಿಮ್ಮ ಮನೆಗೆ
ಕಾಯುತ್ತಿದ್ದಾರೆ ನಿಮ್ಮವರು
ನಿಮಗಾಗಿ.


ಕೆಲಸದಲ್ಲಿ ಮನೋಮಗ್ನತೆಯನ್ನು (mindfulness) ಸಾಧಿಸಲು ಸಂತ ತಿಚ್ ನ್ಹಾತ್ ಹಾನ್ ಸೂಚಿಸುವ ಹದಿನೈದು ಪ್ರ್ಯಾಕ್ಟಿಕಲ್ ನಡೆಗಳು ಇವು ..



1. ನಿಮ್ಮ ದಿನವನ್ನು ಕೊನೆಪಕ್ಷ ೧೦ ನಿಮಿಷ ಮೆಡಿಟೇಶನ್ ನಲ್ಲಿ ಕೂರುವ ಮೂಲಕ ಆರಂಭಿಸಿ.


2. ಮನೆಯಲ್ಲಿ ಸಾವಧಾನವಾಗಿ ಒಂದೆಡೆ ಕುಳಿತು ಬೆಳಗಿನ ಬ್ರೆಕ್ ಫಾಸ್ಟ್ ಎಂಜಾಯ್ ಮಾಡಿ.


3. ನೀವು ಈಗ ಜೀವಂತ ಇರುವುದಕ್ಕೆ ಹಾಗು ಬದುಕಲು ನಿಮಗೆ ಹೊಚ್ಚ ಹೊಸ ೨೪ ಗಂಟೆಗಳು ದೊರೆತಿರುವುದರ ಕುರಿತಾಗಿ ನಿಮಗೆ ಇರುವ ಕೃತಜ್ಞತಾ ಭಾವವನ್ನು ನೆನಪಿಸಿಕೊಳ್ಳಿ


4. ನಿಮ್ಮ ಸಮಯವನ್ನ “my time” ಮತ್ತು “work” ಎಂದು ಭಾಗ ಮಾಡಬೇಡಿ. ನೀವು ಪ್ರತಿಕ್ಷಣವನ್ನು ಬದುಕುತ್ತಿರುವಿರಾದರೆ, ನಿಮ್ಮ body ಮತ್ತು ಮೈಂಡ್ ನಲ್ಲಿ ಏನಾಗುತ್ತಿದೆ ಎನ್ನುವುದರ ಕುರಿತು ನಿರಂತರವಾಗಿ ಟಚ್ ಲ್ಲಿ ಇರುವಿರಾದರೆ ಎಲ್ಲ ಸಮಯವೂ your time ಆಗಬಲ್ಲದು. ನಿಮ್ಮ ಸ್ವಂತದ ಸಮಯ ನಿಮ್ಮ ಕೆಲಸದ ಸಮಯಕ್ಕಿಂತ ಸುಖದಾಯಕವಾಗಿರುವ ಯಾವ ಕಾರಣಗಳು ನನಂಗತೂ ಗೊತ್ತಿಲ್ಲ.


5. ಕೆಲಸಕ್ಕೆ ಅಥವಾ ಯಾವುದೇ ಅಪೊಯಿಂಟ್ಮೆಂಟ್ ಗೆ ಹೋಗುವಾಗ ಸೆಲ್ ಫೋನ್ ಲ್ಲಿ ಮಾತನಾಡುವ ಒತ್ತಡವನ್ನು ರೆಸಿಸ್ಟ್ ಮಾಡಿ. ಈ ಸಮಯವನ್ನ ನಿಮ್ಮೊಂದಿಗೆ, ನಿಮ್ಮ ಸುತ್ತಲಿನ ಪ್ರಕೃತಿ, ಅಥವಾ ಜಗತ್ತಿನೊಂದಿಗೆ ಕಳೆಯಿರಿ.


6. ನಡು ನಡುವೆ ಮತ್ತೆ ಪ್ರಶಾಂತತೆಯನ್ನ, ಸಮಾಧಾನವನ್ನು ಗಳಿಸಿಕೊಳ್ಳಲು ನಿಮ್ಮ ಕೆಲಸದ ಪರಿಸರದಲ್ಲಿ ಸಾಧ್ಯವಾದರೆ breathing area ಆರೇಂಜ್ ಮಾಡಿಕೊಳ್ಳಿ. ರೆಗ್ಯುಲರ್ ಆಗಿ breathing breaks ತೆಗೆದುಕೊಳ್ಳುತ್ತ ನಿಮ್ಮ ದೇಹ ಮತ್ತು ಮೈಂಡ್ ನ ಮತ್ತೆ ಸದ್ಯದ ವರ್ತಮಾನಕ್ಕೆ ತಂದುಕೊಳ್ಳುವ ಪ್ರಯತ್ನ ಮಾಡಿ.


7. ಲಂಚ್ ಟೈಂ ನಲ್ಲಿ ಕೇವಲ ನಿಮ್ಮ ಆಹಾರವನ್ನು ಮಾತ್ರ ಸೇವಿಸಿ ನಿಮ್ಮ ಭಯ ಮತ್ತು ಚಿಂತೆಗಳನ್ನಲ್ಲ. ನಿಮ್ಮ ವರ್ಕ ಡೆಸ್ಕ ಮೇಲೆ ಲಂಚ್ ತೆಗೆದುಕೊಳ್ಳಬೇಡಿ. ಬೇರೆ ಪರಿಸರವನ್ನ ಆಯ್ಕೆ ಮಾಡಿಕೊಳ್ಳಿ, ವಾಕ್ ಗೆ ಹೋಗಿ.


8. ಚಹಾ ಟೈಂ ನಲ್ಲಿ ಚಹಾ ಕುಡಿಯುವುದನ್ನ ಒಂದು ವಿಧಿವತ್ತಾದ ಆಚರಣೆಯಂತೆ ಸಂಭ್ರಮಿಸಿ. ಚಹಾ ಕುಡಿಯುತ್ತ ಯಾವ ಕೆಲಸವನ್ನೂ ಮಾಡಬೇಡಿ. ಚಹಾ ಕುಡಿಯುವಾಗ, ನಿಮ್ಮ ಕೈಯಲ್ಲಿರುವ ಚಹಾ ನ ದಿಟ್ಟಿಸುತ್ತ, ಈ ಚಹಾ ದ ಹಿಂದಿರುವ ಎಲ್ಲವನ್ನೂ ನೆನಪು ಮಾಡಿಕೊಳ್ಳಿ : ಆ ಮೋಡ, ಆ ಮಳೆ, ಆ ಚಹಾ ತೋಟ, ಆ ತೋಟದಲ್ಲಿ ಕೆಲಸ ಮಾಡುವವರು ಎಲ್ಲರೂ ನಿಮ್ಮ ನೆನಪಿನಲ್ಲಿ ಬಂದು ಹೋಗಲಿ.


9. ಯಾವುದೇ ಮೀಟಿಂಗ್ ಗೆ ಹೋಗುವಾಗ, ನಿಮ್ಮೊಡನೆ ಒಬ್ಬರು peaceful, skilful ಮತ್ತು mindful ಆಗಿರುವ ವ್ಯಕ್ತಿ ಇರುವುದನ್ನ ಕಲ್ಪಿಸಿಕೊಳ್ಳಿ. ಮೀಟಿಂಗ್ ನ ಹೊತ್ತಿನಲ್ಲಿ ನೀವು ಶಾಂತವಾಗಿರಲು, ಸಮಾಧಾನದಿಂದಿರಲು ಈ ಕಲ್ಪಿತ ವ್ಯಕ್ತಿಯಲ್ಲಿ ಶರಣಾಗತಿಯನ್ನ ಬಯಸಿ.


10. ನಿಮಗೆ ಕೋಪ ಬರುತ್ತಿದೆಯೆಂದರೆ, ಇರಿಟೇಟ್ ಆಗುತ್ತಿದೆಯೆಂದರೆ ನೇರವಾಗಿ ಅದನ್ನು ವ್ಯಕ್ತಪಡಿಸುವುದರಿಂದ ಹಿಂದೆ ಸರಿಯಿರಿ. ಒಂದಿಷ್ಟು ಮೈಂಡ್ ಫುಲ್ ಆಗಿ ಉಸಿರಾಟ ಮಾಡಿ ಮತ್ತೆ ನಿಮ್ಮ ಸಮಾಧಾನವನ್ನ ಗಳಿಸಿಕೊಳ್ಳಿ.


11. ನಿಮ್ಮ ಸುಪಿರಿಯರ್ಸ್ ನ , ನಿಮ್ಮ ಕಲೀಗ್ಸ್ ನ, ನಿಮ್ಮ ಕೆಳಗೆ ಕೆಲಸ ಮಾಡುವವರನ್ನ ನಿಮ್ಮ ವೈರಿಗಳಂತೆ ನೋಡಬೇಡಿ, ಅವರನ್ನ ನಿಮ್ಮ ಬೆಂಬಲಿಗರಂತೆ ಪರಿಗಣಿಸಿ. ಒಬ್ಬರೇ ಕೆಲಸ ಮಾಡುವುದಕ್ಕಿಂತ ಗುಂಪಿನ ಜೊತೆ ಸೇರಿ ಕೆಲಸ ಮಾಡುವುದು ಹೆಚ್ಚು ತೃಪ್ತಿಯನ್ನ ಹೆಚ್ಚು ಆನಂದವನ್ನ ಸಾಧ್ಯಮಾಡುತ್ತದೆ ಎನ್ನುವುದನ್ನ ಗುರುತಿಸಿ. ಎಲ್ಲರ ಯಶಸ್ಸು ಮತ್ತು ಆನಂದವೇ ನಿಮ್ಮ ಯಶಸ್ಸು ಎನ್ನುವುದನ್ನ ತಿಳಿದುಕೊಳ್ಳಿ.


12. ನಿಮ್ಮ ಸಹೋದ್ಯೋಗಿಗಳ ಧನಾತ್ಮಕ ಗುಣ ಸ್ವಭಾವಗಳಿಗಾಗಿ ರೆಗ್ಯುಲರ್ ಆಗಿ ಅವರಿಗೆ ಕೃತಜ್ಞತೆ ಹೇಳಿ, ಅವರನ್ನು ಅಪ್ರಿಶಿಯೇಟ್ ಮಾಡಿ. ಇದು ಎಲ್ಲರಿಗೂ ಕೆಲಸದ ಪರಿಸರವನ್ನ ಹೆಚ್ಚು ಸೌಹಾರ್ದಮಯವಾಗಿ ಹೆಚ್ಚು ಆನಂದದಾಯಕವಾಗಿ ಬದಲಾಯಿಸುತ್ತದೆ.


13. ಸಂಜೆ ಮನೆಗೆ ವಾಪಸ್ ಆಗುವ ಮೊದಲು ರಿಲ್ಯಾಕ್ಸ್ ಆಗುವುದನ್ನ, ನಿಮ್ಮನ್ನ ಮತ್ತೆ restore ಮಾಡಿಕೊಳ್ಳುವುದನ್ನ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಜೊತೆ ಇರಬಹುದಾದ negative energy ಮತ್ತು frustration ನ ನಿಮ್ಮ ಮನೆಗೆ ಕೊಂಡೊಯ್ಯುವುದು ತಪ್ಪುತ್ತದೆ.


14. ಮನೆಗೆ ವಾಪಸ್ ಆದ ಮೇಲೆ ಮತ್ತೆ ಮನೆಯ ಕೆಲಸಗಳನ್ನ ಮುಂದುವರೆಸುವ ಮೊದಲು ಸ್ವಲ್ಪ ರಿಲ್ಯಾಕ್ಸ ಮಾಡಿ, ನಿಮ್ಮ ನೈಜ ನಿಮ್ಮತನವನ್ನ ಮತ್ತೆ ಮರಳಿ ಪಡೆದುಕೊಳ್ಳಿ. Multitasking ಎಂದರೆ ಯಾವ ಒಂದಕ್ಕೂ ನಿಮ್ಮ ಪೂರ್ಣ ಗಮನವನ್ನು ನೀಡದಿರುವುದು ಎನ್ನುವುದನ್ನ ಗುರುತಿಸಿಕೊಳ್ಳಿ. ಒಂದು ಸಮಯದಲ್ಲಿ ಒಂದು ಕೆಲಸ ಮಾತ್ರ ಮಾಡುತ್ತ, ಆ ಕೆಲಸಕ್ಕೆ ನಿಮ್ಮ ಸಂಪೂರ್ಣ ಗಮನವನ್ನ ಮೀಸಲಾಗಿಡಿ.


15. ದಿನದ ಕೊನೆಗೆ, ಆ ದಿನ ನೀವು ಅನುಭವಿಸಿದ ಎಲ್ಲ ಒಳ್ಳೆಯ ಕ್ಷಣಗಳ ಲೆಕ್ಕ ಇಡಿ. ನಿಮ್ಮೊಳಗಿರುವ ಆನಂದ ಮತ್ತು ಕೃತಜ್ಞತೆಯ ಬೀಜಗಳನ್ನ ನಿರಂತರವಾಗಿ ಪೋಷಿಸುತ್ತ ಅವು ಹೆಮ್ಮರವಾಗಿ ಬೆಳೆಯುವತ್ತ ನಿಮ್ಮ ಸಹಕಾರವನ್ನು ಸಾಧ್ಯ ಮಾಡಿ.


Source – Thich Nhat Hanh
“15 Practical Ways To Find Your Zen At Work”

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.