ಜಗತ್ತಿನಲ್ಲಿಯೇ ಈ ತತ್ವಜ್ಞಾನಿಗಳು, ಧರ್ಮಶಾಸ್ತ್ರಜ್ಞರು, ತರ್ಕಶಾಸ್ತ್ರಜ್ಞರು ಮಹಾ ಮೂರ್ಖ ಜನ. ಇದು ಎಂಥ ದುರಾದೃಷ್ಟ ಎಂದರೆ Dionysius ನಂಥ ಮಹಾ ಮೇಧಾವಿ ಕೂಡ, ಕ್ರಿಶ್ಚಿಯನ್ ತತ್ವಶಾಸ್ತ್ರ, ಧರ್ಮಶಾಸ್ತ್ರ, ಮತ್ತು ತರ್ಕಶಾಸ್ತ್ರದ ಭಾಷೆಯಲ್ಲಿ ಮಾತನಾಡಬೇಕಾಯಿತು… : ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
“ನನಗೆ ಒಂದು ಅರ್ಧ ಕೇಜಿ ಬರ್ಥ್ ಡೇ ಕೇಕ್ ಬೇಕು ಅದರ ಮೇಲೆ ಹ್ಯಾಪಿ ಬರ್ಥ್ ಡೇ ಅಂತ ಬರೆದಿರಬೇಕು. ಎಷ್ಟು ಹೊತ್ತು ಆಗಬಹುದು? “
ಒಬ್ಬ ತತ್ವಜ್ಞಾನಿ ಬೇಕರಿಗೆ ಹೋಗಿ ಒಂದು ಕೇಕ್ ಆರ್ಡರ್ ಮಾಡುತ್ತಾನೆ.
“ಒಂದು ಇಪ್ಪತ್ತು ನಿಮಿಷ ಆಗಬಹುದು” ಬೇಕರಿಯವ ಉತ್ತರಿಸಿದ.
ಇಪ್ಪತ್ತು ನಿಮಿಷದ ನಂತರ ತತ್ವಜ್ಞಾನಿ ಬೇಕರಿಗೆ ಬಂದಾಗ ಕೇಕ್ ರೆಡಿ ಇರುತ್ತದೆ. ಕೇಕ್ ನ ಸೂಕ್ಷ್ಮವಾಗಿ ನೋಡಿದ ತತ್ವಜ್ಞಾನಿ, “ಇನ್ನೂ ಸ್ವಲ್ಪ ಡೆಕೊರೇಷನ್ ಮಾಡಿ, ಹ್ಯಾಪಿ ಬರ್ಥ್ ಡೇ ಬದಲು, One thousand happiness ಅಂತ ಬರೆಯಿರಿ” ಎಂದು ಕರೆಕ್ಷನ್ ಹೇಳುತ್ತಾನೆ.
ಆಯ್ತು ಅರ್ಧ ಗಂಟೆ ಬಿಟ್ಟು ಬನ್ನಿ ರೆಡಿ ಮಾಡ್ತೀನಿ ಎಂದು ಬೇಕರಿಯವ ತತ್ವಜ್ಞಾನಿಯನ್ನ ಸಾಗಹಾಕುತ್ತಾನೆ.
ಅರ್ಧ ಗಂಟೆಯ ನಂತರ ತತ್ವಜ್ಞಾನಿ ಬೇಕರಿಗೆ ಹೋದಾಗ ಕೇಕ್ ರೆಡಿ ಇರುತ್ತದೆ. ಒಂದು ಹತ್ತು ನಿಮಿಷ ಕೇಕ್ ನ ಸೂಕ್ಷ್ಮವಾಗಿ ಗಮನಿಸಿದ ತತ್ವಜ್ಞಾನಿ, “ ಸೈಡ್ ಲ್ಲಿ ಇನ್ನೊಂದಿಷ್ಟು ಹೂವು ಇರಬೇಕಿತ್ತು. One thousand happiness ಬದಲು, Congratulations! Lots of Love ಅಂತ ಬರೆಯಲಿಕ್ಕಾಗತ್ತಾ?” ತತ್ವಜ್ಞಾನಿ ಮತ್ತೆ ಕರೆಕ್ಷನ್ ಹೇಳಿದ.
ಈ ಬಾರಿ ಬೇಕರಿಯವ ಸಿಡಿಮಿಡಿಗೊಂಡನಾದರೂ, “ಅರ್ಧಗಂಟೆ ಬಿಟ್ಟು ಬನ್ನಿ, ನೀವು ಹೇಳಿದ ಹಾಗೆ ಎಲ್ಲ ರೇಡಿ ಮಾಡ್ತೀನಿ” ಅಂತ ಹೇಳಿ, ಮತ್ತೆ ಕೇಕ್ ಮೇಲೆ ಕೆಲಸ ಶುರು ಮಾಡಿದ.
ಅರ್ಧ ಗಂಟೆಯ ನಂತರ ತತ್ವಜ್ಞಾನಿ ಬೇಕರಿಗೆ ಬಂದಾಗ ಕೇಕ್ ರೆಡಿಯಾಗಿತ್ತು, “ಓಹ್ ಈಗ ಅದ್ಭುತವಾಗಿದೆ ಕೇಕ್. ಬಹಳ ಸುಂದರವಾಗಿದೆ” ಎಂದು ತತ್ವಜ್ಞಾನಿ ಕೇಕ್ ನ ಪ್ರಶಂಸೆ ಮಾಡಿದ. “ಹಾಗಾದರೆ ಕೇಕ್ ಪ್ಯಾಕ್ ಮಾಡಲೆ” ಎಂದು ಬೇಕರಿಯವ ಕೇಳಿದಾಗ, “ಪ್ಯಾಕ್ ಏನೂ ಬೇಕಿಲ್ಲ, ನಾನು ಇಲ್ಲೇ ಕೇಕ್ ತಿನ್ನುತ್ತೇನೆ “ ಎಂದು ತತ್ವಜ್ಞಾನಿ ಕೇಕ್ ತಿನ್ನಲು ಮುಂದಾದ.
ಜಗತ್ತಿನಲ್ಲಿಯೇ ಈ ತತ್ವಜ್ಞಾನಿಗಳು, ಧರ್ಮಶಾಸ್ತ್ರಜ್ಞರು, ತರ್ಕಶಾಸ್ತ್ರಜ್ಞರು ಮಹಾ ಮೂರ್ಖ ಜನ. ಇದು ಎಂಥ ದುರಾದೃಷ್ಟ ಎಂದರೆ Dionysius ನಂಥ ಮಹಾ ಮೇಧಾವಿ ಕೂಡ, ಕ್ರಿಶ್ಚಿಯನ್ ತತ್ವಶಾಸ್ತ್ರ, ಧರ್ಮಶಾಸ್ತ್ರ, ಮತ್ತು ತರ್ಕಶಾಸ್ತ್ರದ ಭಾಷೆಯಲ್ಲಿ ಮಾತನಾಡಬೇಕಾಯಿತು. ಆದರೆ ಒಬ್ಬ ಝೆನ್ ಮಾಸ್ಟರ್ ಈ ಎಲ್ಲವನ್ನೂ ಯಾವ ಅಲಂಕಾರಿಕ ಭಾಷೆ ಬಳಸಲಾರದೆ, ಯಾವ ದೇವರ ಹೆಸರನ್ನೂ ತೆಗೆದುಕೊಳ್ಳದೇ, ಇವರಿಗಿಂತ ವಿಭಿನ್ನವಾಗಿ, ಸ್ಪಷ್ಟವಾಗಿ, ನಿಖರವಾಗಿ ಹೇಳಬಲ್ಲ.

