ಥಿಯರಿ ಸತ್ಯಕ್ಕೆ ಹತ್ತಿರವಾಗುವಷ್ಟು ಕ್ರೇಝಿ ಆಗಿದೆಯಾ? ಕೇಳಿದರು ನೀಲ್ಸ್ ಬೋರ್! ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಫ್ರೀಮನ್ ಡೈರನ್ ಹೇಳಿದ ಸತ್ಯಕಥೆಯೊಂದು ಹೀಗಿದೆ.
ಕೆಲವು ತಿಂಗಳುಗಳ ಹಿಂದೆ Werner Heisenberg ಮತ್ತು Wolfgang Pauli ಮೂಲಭೂತ ಕಣಗಳ ಸಿದ್ಧಾಂತದ ವಿಷಯದಲ್ಲಿ ತಾವು ಅವಶ್ಯಕ ಹೊಸ ಸಂಶೋಧನೆಯನ್ನು ಮಾಡಿದ್ದೇವೆ ಎಂದು ನಂಬಿದ್ದರು. Heisenberg and Pauli ಎರಡೂ ಹೆಸರುಗಳು ವಿಜ್ಞಾನ ಕ್ಷೇತ್ರದ ಬಹುದೊಡ್ಡ ಹೆಸರುಗಳು. ಇಬ್ಬರೂ ಮಹಾಮೇಧಾವಿಗಳು. ಕಣಗಳ ರಚನೆಯ ಬಗ್ಗೆ ಮೂಲಭೂತವಾದ ಥಿಯರಿಯನ್ನ ತಾವು ರೂಪಿಸಿದ್ದೇವೆ ಎನ್ನುವುದು ಅವರ ವಾದವಾಗಿತ್ತು.
ಒಂದು ದಿನ Pauli ನ್ಯೂಯಾರ್ಕ ಲ್ಲಿ ಇದ್ದಾಗ ಅವರನ್ನು ಒಂದು ವಿಜ್ಞಾನದ ಸಮ್ಮೇಳನ ಕ್ಕೆ ಆಹ್ವಾನಿಸಿ ಅವರು ರೂಪಿಸಿದ ಥಿಯರಿಯ ಬಗ್ಗೆ ವಿವರಿಸುವಂತೆ ಕೇಳಿಕೊಳ್ಳಲಾಯಿತು. ಆ ದಿನ ಸಭೆಯಲ್ಲಿ Niels Bohr ನಂಥ ದೊಡ್ಡ ವಿಜ್ಞಾನಿಯ ಜೊತೆ ಇನ್ನೂ ಹಲವಾರು ಘಟಾನುಘಟಿ ವಿಜ್ಞಾನಿಗಳು ಸೇರಿದ್ದರು. Mr. Wolfgang Pauli ಒಂದು ಗಂಟೆಯಷ್ಟು ಸುದೀರ್ಘವಾಗಿ ಉಪನ್ಯಾಸ ಮಾಡಿ ಸಭಿಕರಿಗೆ ತಾವು ರೂಪಿಸಿದ್ದು ಎನ್ನಲಾದ ಥಿಯರಿಗೆ ಬಗ್ಗೆ ವಿವರಣೆ ನೀಡಿದರು. ನಂತರ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಯುವ ವಿಜ್ಞಾನಿಗಳು Heisenberg – Pauli ಥಿಯರಿಯನ್ನ ಕಟುವಾಗಿ ಟೀಕಿಸಿದರು.
ನಂತರ ಹಿರಿಯ ವಿಜ್ಞಾನಿ Niels Bohr ರನ್ನ ನಡೆದ ಎಲ್ಲ ಚರ್ಚೆಯನ್ನ ಸಂಕ್ಷೇಪಿಸಿ ಮಾತನಾಡಲು ವೇದಿಕೆಯ ಮೇಲೆ ಆಹ್ವಾನಿಸಲಾಯಿತು.
“ನಿಮ್ಮ ಥಿಯರಿ ಕ್ರೇಝಿ ಆಗಿದೆ ಎನ್ನುವುದರಲ್ಲಿ ಇಲ್ಲಿ ಸೇರಿರುವ ಯಾರಿಗೂ ಅನುಮಾನವಿಲ್ಲ. ಆದರೆ ನಿಮ್ಮ ಥಿಯರಿ ಸತ್ಯಕ್ಕೆ ಹತ್ತಿರವಾಗುವಷ್ಟು ಕ್ರೇಝಿ ಆಗಿದೆಯಾ ಎನ್ನುವ ಬಗ್ಗೆ ಅಷ್ಟೇ ಇಲ್ಲಿ ಸೇರಿದವರ ಆಕ್ಷೇಪ. ನನ್ನ ಪ್ರಕಾರ ಕೂಡ ನಿಮ್ಮ ಥಿಯರಿ ಅಷ್ಟು ಕ್ರೇಝಿ ಆಗಿಲ್ಲ”. ವಿಜ್ಞಾನಿ Niels Bohr ಸ್ಪಷ್ಟವಾಗಿ ಮಾತನಾಡಿದರು.
Source:
Osho – Divine Melody

