ಸಂಸ್ಕೃತದ ಅಗಾಧ ಪ್ರೇಮಕಾವ್ಯದ ಸಾಗರದಿಂದ ಹೆಕ್ಕಲಾದ ಸುಂದರ ಸಾಲುಗಳ ಗುಚ್ಛವೊಂದು ಇಂಗ್ಲೀಶಿನಲ್ಲಿ ಪುಸ್ತಕವಾಗಿದೆ. ಈ ಪುಸ್ತಕದ ಕೆಲವು ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳಲ್ಲಿ ಏಳನೇ ಕಂತು ಇಲ್ಲಿದೆ… । ಆಕರ : How to love in sanskrit; ಕನ್ನಡದಲ್ಲಿ: ಚಿದಂಬರ ನರೇಂದ್ರ
1.

2.
ಅವಳು ಕರಗಿ ಹೋಗಿದ್ದಾಳೆಯೇ
ನನ್ನ ಹೃದಯದಲ್ಲಿ?
ಅಥವಾ ಅಲ್ಲಿ ಕಾಣುತ್ತಿರುವುದು
ಕೇವಲ ಅವಳ ಪ್ರತಿಬಿಂಬವೆ?
ಬಹುಶಃ ಚಿತ್ರಿಸಲಾಗಿದೆ ಅವಳನ್ನ ಅಲ್ಲಿ,
ಅಥವಾ ಕುಸುರಿ ಕೆತ್ತಲಾಗಿದೆಯಾ
ನನ್ನ ಎದೆಯ ಮೇಲೆ?
ಅಥವಾ ಜೋಡಿಸಲಾಗಿದೆಯಾ
ಬಹುಮೂಲ್ಯ ರತ್ನಗಳಂತೆ ನಾಜೂಕಾಗಿ?
ಅಥವಾ ಪ್ರತಿಷ್ಠಾಪಿಸಲಾಗಿದೆಯಾ
ದೇವಿಯಂತೆ ಪೀಠದ ಮೇಲೆ?
ಅಥವಾ ಮುಚ್ಚಿಡಲಾಗಿದೆಯಾ ನೆಲದಲ್ಲಿ
ಅಪೂರ್ವ ನಿಧಿಯಂತೆ ?
ಅಥವಾ ಕಾಮದೇವನ ಐದು ಬಾಣಗಳಿಂದ
ಅಂಟಿಸಲಾಗಿದೆಯಾ ನನ್ನ ಎದೆಯ ಮೇಲೆ?
ಅಥವಾ ಹೊಲಿಗೆ ಹಾಕಲಾಗಿದೆಯಾ
ಎದೆಯ ಹರವಿನ ಮೇಲೆ
ನನ್ನ ಯೋಚನೆಯ ಎಳೆಗಳಿಂದ ಹೊಲಿದು
ಗಟ್ಟಿಯಾಗಿ.
Malati Madhava, Bhavabhuti, 700 CE, Kanyakubja
3.

4.

5.

6.
ಉತ್ಕಟತೆಯ ಬೆಂಕಿ
ಅವಳ ದೇಹವನ್ನು ಹೇಗೆ ತನ್ನ
ವೈಭವದೊಂದಿಗೆ
ಹಂಚಿಕೊಂಡಿದೆಯೆಂದರೆ;
ಅವಳ ತುಟಿಗಳಲ್ಲಿ
ಕೆಂಪು ಕೆಂಡ ತುಂಬಿಕೊಂಡಂತೆ,
ಅವಳ ಮೊಲೆಗಳನ್ನು
ಹದುಳಗೊಳಿಸಿದ ಅಕ್ಕರೆ ಆವರಿಸಿಕೊಂಡಂತೆ,
ಅವಳ ದಟ್ಟ ಕೂದಲಿನಲ್ಲಿ
ಕಪ್ಪು ಕತ್ತಲು ಅಡಗಿಕೊಂಡಂತೆ,
ಅವಳ ವಿಶಾಲ ಎದೆಯಲ್ಲಿ
ಉನ್ಮತ್ತ ಹೆಮ್ಮೆ ಮನೆ ಮಾಡಿಕೊಂಡಂತೆ,
ಅವಳ ಕಣ್ಣ ಕಾಡಿಗೆಯಲ್ಲಿ
ಜಗದ ಅಂಧಕಾರ ಕಳೆದುಹೋದಂತೆ.
Ascent of King Kapphina, Shivasvami, 800 CE, Kashmir.
7.

8.

9.

10.


