ಈ ನಿರ್ಧಾರಕ್ಕಾಗಿ ಬಹಳಷ್ಟು ಜನ ನಿನ್ನನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ ಆದರೆ, ಬಿಡುಗಡೆಯನ್ನು ಬಯಸಿರುವ ನೀನು, ಕೆಟ್ಟ ವ್ಯಕ್ತಿ ಅಲ್ಲ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಕೆಲವೊಮ್ಮೆ ತುಂಬ ನೋವು ತಂದುಕೊಡುವ ನಿರ್ಧಾರಗಳೇ ಸರಿಯಾದ ನಿರ್ಧಾರಗಳಾಗಿರುತ್ತವೆ. ಸಂಬಂಧವನ್ನು ಕೊನೆ ಮಾಡುತ್ತಿರುವುದು ನೀನು ಆದ್ದರಿಂದ ಅದು ನಿನ್ನ ನೋವಿಗೆ ಗುರಿ ಮಾಡುತ್ತಿಲ್ಲ ಎನ್ನುವುದು ಸುಳ್ಳು.
ಕೆಲವೊಮ್ಮೆ ಅದು ಏಷ್ಟೇ ನೋವಿನ ಸಂಗತಿಯಾದರೂ, ಇಬ್ಬರನ್ನೂ ಬಿಡುಗಡೆಗೊಳಿಸುವುದಕ್ಕಾಗಿ ನೀನು ಹೆಜ್ಜೆ ಮುಂದಿಡಲೇಬೇಕಾಗುತ್ತದೆ.
ಈ ನಿರ್ಧಾರಕ್ಕಾಗಿ ಬಹಳಷ್ಟು ಜನ ನಿನ್ನನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಾರೆ ಆದರೆ, ಬಿಡುಗಡೆಯನ್ನು ಬಯಸಿರುವ ನೀನು, ಕೆಟ್ಟ ವ್ಯಕ್ತಿ ಅಲ್ಲ.
ನೋವು-ನಿಂದನೆಗಳಿಂದ ಮುಕ್ತವಾಗುವುದು, ಯಾವ ಸಂಬಂಧದಲ್ಲಿ ನಿಮ್ಮ ಹೃದಯ ನೆಲೆಗೊಳ್ಳುತ್ತಿಲ್ಲವೋ ಅದರಿಂದ ಬಿಡುಗಡೆ ಹೊಂದುವುದು ನೀವು ನಿಮಗಷ್ಟೇ ಅಲ್ಲ ನಿಮ್ಮ ಸಂಗಾತಿಗೂ ಮಾಡುತ್ತಿರುವ ಸಹಾಯ ಹೌದು.
ಸಂಬಂಧಕ್ಕೆ ಅಂಟಿಕೊಳ್ಳದೆ ಬಿಡುಗಡೆ ಬಯಸುವುದು ನಿಮ್ಮನ್ನು ಕೆಟ್ಟ ವ್ಯಕ್ತಿಯಾಗಿಸುವುದಿಲ್ಲ.
ದುಃಖ ಪಡುವ ಸಂದಿಗ್ಧ ಅಷ್ಟೇ ಅಲ್ಲ ನಿಮಗೆ ಅದರಿಂದ ಆರೋಗ್ಯಪೂರ್ಣವಾಗಿ ಹೊರಗೆ ಬರುವ ಅವಕಾಶವೂ ಉಂಟು.
ಈ ಬರಹ ಬಹಳ ಜನರಿಗೆ ರಿಲೇಟ್ ಆಗಲಿಕ್ಕಿಲ್ಲ ಎನ್ನುವುದು ನನಗೆ ಗೊತ್ತು ಆದರೆ, ಅಪರಾಧಿ ಭಾವವನ್ನು ತುಂಬಿಕೊಂಡ ಇನ್ನೂ ಕೆಲವು ಜನರು ಸಂಬಂಧಗಳ ಸರಪಳಿಯಲ್ಲಿ ನರಳುತ್ತಿದ್ದಾರೆ, ತಾವು ಕೂಡ ಸಮಾಧಾನಕ್ಕೆ, ಪ್ರೀತಿಗೆ ಅರ್ಹರು ಎನ್ನುವುದನ್ನ ಅವರು ಗುರುತು ಮಾಡಿಕೊಳ್ಳಲಿ.
Source : That break up can also be a breakthrough | Titus Durkwa David (FB) page

