ಪ್ರತಿ ಹುಲ್ಲಿನ ಗರಿಕೆ, ಪ್ರತಿ ಮರ, ಪ್ರತಿ ಸಸ್ಯ, ಪ್ರತಿಯೊಂದು ಪ್ರಾಣಿ ಪ್ರಭೇದ ಎಲ್ಲಕ್ಕೂ ಬುದ್ಧ ನೇಚರ್ ಇದೆ. ಸ್ವತಃ ಭೂಮಿ ತಾಯಿ ಬುದ್ಧ ನೇಚರ್ ಹೊಂದಿದವಳಾಗಿದ್ದಾಳೆ ಮತ್ತು ಆಕೆಯ ಚೇತನದ ಭಾಗವಾಗಿರುವ ಎಲ್ಲಕ್ಕೂ ಬುದ್ಧ ನೇಚರ್ ಇದೆ ~ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ
ಎಲ್ಲವೂ ಬುದ್ಧ ಎನ್ನುವುದನ್ನ ಕೇಳಿದಾಗ
ಬಹಳಷ್ಟು ಬುದ್ಧರಿರುವರು ಎಂದುಕೊಳ್ಳಬೇಡಿ,
ಇರುವುದೊಂದೇ ಬುದ್ದ.
Zen Graffiti
ನನ್ನ ಪ್ರಕಾರ ದೇವರು ಎನ್ನುವುದು ಏನಾದರೂ ಇದ್ದರೆ ಅದು ಇರುವುದು ಈ ಭೂಮಿಯ ಮೇಲೆಯೇ, ಪ್ರತಿಯೊಂದು ಜೀವಿಯ ಒಳಗೆ. ನಾವು ಯಾವುದನ್ನ ದೈವಿಕ ಎನ್ನುತ್ತೇವೆಯೋ ಅದು ಬೇರೆ ಏನೂ ಅಲ್ಲ, ಅದು ನಮ್ಮ ಎಚ್ಚರಿಕೆಯ ಸಾಮರ್ಥ್ಯ , ಶಾಂತಿಯ ಕುರಿತು, ತಿಳುವಳಿಕೆಯ ಕುರಿತು, ಪ್ರೀತಿಯ ಬಗ್ಗೆ, ಮತ್ತು ಇದು ಇರುವುದು ಕೇವಲ ಮನುಷ್ಯ ಜಾತಿಯೊಳಗಷ್ಟೇ ಅಲ್ಲ, ಭೂಮಿಯ ಮೇಲಿನ ಪ್ರತಿಯೊಂದು ಜೀವ ಪ್ರಬೇಧದಲ್ಲಿಯೂ ಇದನ್ನು ಕಾಣಬಹುದು.
ಬುದ್ಧಿಸಂ ನಲ್ಲಿ ನಾವು ಹೇಳುವಂತೆ ಪ್ರತಿಯೊಂದು ಚೇತನಾತ್ಮಕ ಜೀವಿಗೂ ಅವೇಕನಿಂಗ್ ಸಾಮರ್ಥ್ಯ, ಮತ್ತು ಅದನ್ನು ಆಳವಾಗಿ ಅರ್ಥ ಮಾಡಿಕೊಳ್ಳುವ ಅವಕಾಶ ಇದೆ. ಜಿಂಕೆ, ನಾಯಿ, ಬೆಕ್ಕು, ಅಳಿಲು, ಹಕ್ಕಿ ಎಲ್ಲಕ್ಕೂ ಬೌದ್ಧ ಪ್ರಕೃತಿ (Buddha nature) ಇದೆ.
ಚೇತನಾರಹಿತ ವಸ್ತುಗಳಿಗೂ ಬುದ್ಧ ನೇಚರ್ ಇದೆಯಾ? : ನಮ್ಮ ಮನೆಯ ಅಂಗಳದಲ್ಲಿರುವ ಪೈನ್ ಮರ, ಹುಲ್ಲಿನ ಗರಿಕೆ, ಅಥವಾ ಹೂವುಗಳಿಗೆ? ಭೂಮಿಯ ಚೇತನದ ಭಾಗವಾಗಿರುವ ಎಲ್ಲಕ್ಕೂ ಬುದ್ಧ ನೇಚರ್ ಇದೆ. ಈ ಶಕ್ತಿಶಾಲಿ ಅರಿವು ನಮಗೆ ಅಪಾರ ಆನಂದವನ್ನು ಸಾಧ್ಯಮಾಡುತ್ತದೆ.
ಪ್ರತಿ ಹುಲ್ಲಿನ ಗರಿಕೆ, ಪ್ರತಿ ಮರ, ಪ್ರತಿ ಸಸ್ಯ, ಪ್ರತಿಯೊಂದು ಪ್ರಾಣಿ ಪ್ರಭೇದ ಎಲ್ಲಕ್ಕೂ ಬುದ್ಧ ನೇಚರ್ ಇದೆ. ಸ್ವತಃ ಭೂಮಿ ತಾಯಿ ಬುದ್ಧ ನೇಚರ್ ಹೊಂದಿದವಳಾಗಿದ್ದಾಳೆ ಮತ್ತು ಆಕೆಯ ಚೇತನದ ಭಾಗವಾಗಿರುವ ಎಲ್ಲಕ್ಕೂ ಬುದ್ಧ ನೇಚರ್ ಇದೆ.
ನಮಗೆಲ್ಲರಿಗೂ ಬುದ್ಧ ನೇಚರ್ ಪ್ರಾಪ್ತವಾಗಿರುವಾಗ ಪ್ರತಿಯೊಬ್ಬರಿಗೂ ಈ ಭೂಮಿಯ ಕುರಿತಾಗಿ ನಮ್ಮ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತ ಆನಂದದಿಂದ ಬದುಕುವ ಸಾಮರ್ಥ್ಯ ಇದೆ.
ಒಂದು
ಕಪ್ಪೆಯನ್ನು ತಟ್ಟೆಯಲ್ಲಿಟ್ಟಾಗ
ಕೆಲ ಕ್ಷಣಗಳ ನಂತರ ಕಪ್ಪೆ
ಜಿಗಿಯುತ್ತದೆ ತಟ್ಟೆಯಿಂದ ಆಚೆ.
ಮತ್ತೆ ಆ ಕಪ್ಪೆಯನ್ನು ತಂದು
ತಟ್ಟೆಯ ಮಧ್ಯೆ ಇಟ್ಟಾಗ
ಮತ್ತೆ ಜಿಗಿಯುತ್ತದೆ ಕಪ್ಪೆ
ತಟ್ಟೆಯಿಂದ ಆಚೆಗೆ.
ನಿಮ್ಮ ಯೋಜನೆಗಳು ಸಾಕಷ್ಟು,
ಏನೋ ಆಗಬೇಕೆಂದುಕೊಂಡಿದ್ದೀರಿ
ಹಾಗಾಗಿಯೇ ನೀವು
ದಾಟಿ ಹೋಗಬಯಸುತ್ತೀರಿ,
ಎದುರು ನೋಡುತ್ತಿದ್ದೀರಿ
ದೊಡ್ಡದೊಂದು ಹಾರುವಿಕೆಯನ್ನ.
ಕಪ್ಪೆಯನ್ನು
ತಟ್ಟೆಯ ನಡುವೆ ಸುಮ್ಮನಿರಿಸುವುದು
ಸಾಧ್ಯವಿಲ್ಲದ ಮಾತು
ನಿಮ್ಮಲ್ಲಿ ಮತ್ತು
ನನ್ನಲ್ಲಿ ಬುದ್ಧ ಸ್ವಭಾವವಿದೆ,
ಇದು ಧೈರ್ಯ ತುಂಬುವ ವಿಷಯ.
ಆದರೆ ನನ್ನಲ್ಲಿ ಮತ್ತು ನಿಮ್ಮಲ್ಲಿ ಇದೆ
ಕಪ್ಪೆಯ ಸ್ವಭಾವವೂ.
ಹಾಗಾಗಿ ಸಾಧನೆ
ಬುದ್ಧನಾಗುವುದಲ್ಲ ಕಪ್ಪೆಯಾಗದಿರುವುದು.
ಬುದ್ಧ ಅಲ್ಲೇ ಇರುತ್ತಾನೆ,
ಹೋಗುವುದಿಲ್ಲ ಎಲ್ಲಿಯೂ.

