ಸಂಕೀರ್ಣ ಬದುಕನ್ನು ಸರಳಗೊಳಿಸಲು ಒಂದು ಸಣ್ಣ ಪಾಠ ಇಲ್ಲಿದೆ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
- ಒಬ್ಬರು ತಮ್ಮ 22 ನೇ ವಯಸ್ಸಿಗೆ ಪದವೀಧರರಾಗುತ್ತಾರೆ ಆದರೆ ಅವರು 5 ವರ್ಷ ಕಾಯಬೇಕಾಗುತ್ತದೆ ಒಂದು ಒಳ್ಳೆಯ ಕೆಲಸ ಹುಡುಕಿಕೊಳ್ಳಲು.
- ಒಬ್ಬರು ತಮ್ಮ 25 ನೇ ವಯಸ್ಸಿಗೆ ಕಂಪನಿಯ CEO ಆಗುತ್ತಾರೆ ಆದರೆ ತಮ್ಮ 50 ನೇ ವಯಸ್ಸಿಗೆ ತೀರಿಕೊಂಡುಬಿಡುತ್ತಾರೆ.
- ಇನ್ನೊಬ್ಬರು 50 ನೇ ವಯಸ್ಸಿಗೆ CEO ಆಗಿ, ತಮ್ಮ 90 ನೇ ವಯಸ್ಸಿನವರೆಗೆ ಬದುಕುತ್ತಾರೆ.
- ಒಬ್ಬರಿಗೆ ಇನ್ನೂ ಮದುವೆಯಾಗಿಲ್ಲ ಆದರೆ ಅವರದೇ ಬ್ಯಾಚಿನ ಇನ್ನೊಬ್ಬರು ಈಗ ಅಜ್ಜ ಆಗಿದ್ದಾರೆ.
- ಓಬಾಮಾ 55 ಕ್ಕೆ ನಿವೃತ್ತರಾದರು, ಟ್ರಂಪ್ ತಮ್ಮ 70 ನೇ ವಯಸ್ಸಿಗೆ ಅಧಿಕಾರ ವಹಿಸಿಕೊಂಡರು.
- ಈ ಜಗತ್ತಿನ ಪ್ರತಿಯೊಬ್ಬರೂ ತಮ್ಮ ತಮ್ಮ ಟೈಂ ಝೋನ್ ಲ್ಲಿ ವರ್ಕ್ ಮಾಡುತ್ತಿದ್ದಾರೆ.
- ನಿಮ್ಮ ಸುತ್ತಲಿನ ಕೆಲವರು ನಿಮಗಿಂತ ಮುಂದೆ ಇರುವಂತೆ ಕಂಡರೆ ಇನ್ನೂ ಕೆಲವರು ಹಿಂದೆ ಇರುವಂತೆ ಕಾಣಿಸಿಕೊಳ್ಳುತ್ತಾರೆ.
- ಯಾರ ಬಗ್ಗೆಯೂ ಅಸೂಯೆ ಬೇಡ.
- ಯಾರ ಬಗ್ಗೆಯೂ ತಾತ್ಸಾರ ಬೇಡ
- ಅವರು ತಮ್ಮ ಟೈಂ ಝೋನ್ ಲ್ಲಿದ್ದಾರೆ ಮತ್ತು ನೀವು ನಿಮ್ಮ ಟೈಂ ಝೋನ್ ಲ್ಲಿ.
ರಿಲ್ಯಾಕ್ಸ್ ಆಗಿರಿ…….
ನೀವು ತಡ ಅಲ್ಲ.
ನೀವು ಮುಂಚೆ ಕೂಡ ಅಲ್ಲ.
ನೀವು ನಿಮ್ಮ ಸಮಯದಲ್ಲಿ ಸರಿಯಾಗಿದ್ದೀರಿ ಮತ್ತು ನೀವು ಅಂದುಕೊಂಡ ಗುರಿಗಳನ್ನು ಸಾಧಿಸಲಿದ್ದೀರಿ. ಧೈರ್ಯವಾಗಿರಿ

