ಯಾವುದೇ ವ್ಯಕ್ತಿಯ ನಡವಳಿಕೆ ಪ್ರಬುದ್ಧವಾಗಿಸುವ 20 ಸಂಗತಿಗಳು ಹೀಗಿವೆ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
- ಜವಾಬ್ದಾರಿ : ನಿಮ್ಮ ಕ್ರಿಯೆಗಳ ಜವಾಬ್ದಾರಿಯನ್ನ ನೀವೇ ಹೊತ್ತುಕೊಳ್ಳಿ ಮತ್ತು ನಿಮ್ಮ ತಪ್ಪುಗಳಿಗೂ ನೀವೇ ಉತ್ತರದಾಯಿಯಾಗಿರಿ.
- ಗೌರವ : ಇನ್ನೊಬ್ಬರಿಗಷ್ಟೇ ಅಲ್ಲ ಸ್ವತಃ ನಿಮ್ಮ ಬಗ್ಗೆ ಕೂಡ ನಿಮಗೆ ಗೌರವ ಇರಲಿ ಮತ್ತು ನಿಮಗಿಂತ ಭಿನ್ನವಾಗಿರುವವರ ಕುರಿತು ಕೂಡ.
- ಪ್ರಾಮಾಣಿಕತೆ : ನಿಮ್ಮ ಮಾತುಗಳಲ್ಲಿ ಮತ್ತು ಕ್ರಿಯೆಯಲ್ಲಿ ಪ್ರಾಮಾಣಿಕತೆ ಇರಲಿ.
- ಕಾರುಣ್ಯ : ಇನ್ನೊಬ್ಬರ ಅನುಭವ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳಿಗೆ ಸ್ಪಂದಿಸಲು ಪ್ರಯತ್ನ ಮಾಡಿ.
- ಸೆಲ್ಫ್ ಕಂಟ್ರೋಲ್ : ಸ್ವ ನಿಯಂತ್ರಣವನ್ನ ಪ್ರ್ಯಾಕ್ಟೀಸ್ ಮಾಡಿ ಮತ್ತು ಋಣಾತ್ಮಕ ತುಡಿತಗಳಿಗೆ ಕಡಿವಾಣ ಹಾಕಿ.
- ಪರಿಶ್ರಮ : ಎಷ್ಟೇ ಕಷ್ಟ ಇದ್ದರೂ ಪ್ರಯತ್ನ ಮಾಡುವುದನ್ನ ನಿಲ್ಲಿಸಬೇಡಿ.
- ಇನಿಶಿಯೇಟಿವ್ : ನಿಮ್ಮ ಗುರಿ ಮತ್ತು ಜವಾಬ್ದಾರಿಗಳ ಸಂಬಂಧದಲ್ಲಿ ನೀವೇ ಮೊದಲ ಹೆಜ್ಜೆ ಇಡಿ ಮತ್ತು ಈ ಕುರಿತು ಎಲ್ಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಿ.
- ಟೈಂ ಮ್ಯಾನೇಜಮೆಂಟ್ : ನಿಮ್ಮ ಸಮಯವನ್ನ ಜಾಣತನ ಮತ್ತು ದಕ್ಷತೆಯಿಂದ ಬಳಕೆ ಮಾಡಿ.
- ಉತ್ತಮ ಸಂವಹನ : ಇನ್ನೊಬ್ಬರ ಜೊತೆಗಿನ ನಿಮ್ಮ ಕಮ್ಯೂನಿಕೇಷನ್ ಸ್ಪಷ್ಟವಾಗಿರಲಿ ಮತ್ತು ಪರಿಣಾಮಕಾರಿಯಾಗಿರಲಿ.
- ಸಂಪನ್ಮೂಲವಂತಿಕೆ : ನಿಮ್ಮ ಸಂಪನ್ಮೂಲ ಮತ್ತು ಕೌಶಲ್ಯವನ್ನ ಸಾಧನೆಗಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.
- ಪ್ರಾಬ್ಲಂ ಸಾಲ್ವಿಂಗ್ : ಸವಾಲುಗಳನ್ನ ಪರಿಹರಿಸಿಕೊಳ್ಳಲು ತೀಕ್ಷ್ಣ ಆಲೋಚನೆ ಮತ್ತು ಪ್ರಾಬ್ಲಂ ಸಾಲ್ವಿಂಗ್ ಕೌಶಲ್ಯವನ್ನು ಬಳಸಿಕೊಳ್ಳಿ.
- ಸ್ವಾತಂತ್ರ್ಯ : ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಗಳನ್ನು ಮೈಗೂಡಿಸಿಕೊಳ್ಳಿ.
- ಪರಸ್ಪರ ಅವಲಂಬನೆ : ಟೀಂ ವರ್ಕ್ ನ ಮಹತ್ವವನ್ನ ಮತ್ತು ಸಹಯೋಗಿಗಳ ಮೇಲಿನ ಅವಲಂಬನೆಯನ್ನ ಗುರುತಿಸಿ.
- ಸೃಜನಶೀಲತೆ : ಹೊಸ ಐಡಿಯಾಗಳಿಗಾಗಿ ಮತ್ತು ಪರಿಹಾರಗಳಿಗಾಗಿ ನಿಮ್ಮ ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯ ಬಳಕೆ ಮಾಡಿ.
- ಹೊಂದಾಣಿಕೆ : ಫ್ಲೆಕ್ಸಿಬಲ್ ಆಗಿರಿ ಮತ್ತು ಬದಲಾವಣೆಗಳಿಗೆ ನಿಮ್ಮತನವನ್ನು ಕಾಂಪ್ರಮೈಸ್ ಮಾಡಿಕೊಳ್ಳದೆ ಹೊಂದಿಕೊಂಡು ಹೋಗುವ ಬಗ್ಗೆ ಪರಿಶೀಲಿಸಿ.
- ಎಮೋಷನಲ್ ಇಂಟಲಿಜೆನ್ಸ್ : ನಿಮ್ಮ ಮತ್ತು ಇತರರ ಭಾವನೆಗಳನ್ನು ನಿಭಾಯಿಸಲು ಸಾಧ್ಯವಾಗುವಂಥ ಎಮೋಷನಲ್ ಇಂಟಲಿಜೆನ್ಸ್ ನ ಬೆಳೆಸಿಕೊಳ್ಳಿ.
- ಆತ್ಮವಿಶ್ವಾಸ : ನಿಮ್ಮಲ್ಲಿ ಮತ್ತು ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಿರಿ.
- ಧೈರ್ಯ : ಧೈರ್ಯಶಾಲಿಗಳಾಗಿರಿ ಮತ್ತು ನೀವು ನಂಬಿರುವ ಸಂಗತಿಗಳ ಪರವಾಗಿ ಎದ್ದು ನಿಲ್ಲಿ.
- ನಮ್ರತೆ : ವಿನಯವಂತರಾಗಿರಿ ಮತ್ತು ಹೊಸ ಕಲಿಕೆ ಹಾಗು ಬದಲಾವಣೆಗಳಿಗೆ ಓಪನ್ ಆಗಿರಿ.
- ಕೃತಜ್ಞತೆ : ಕೃತಜ್ಞತೆಯನ್ನ ಪ್ರ್ಯಾಕ್ಟೀಸ್ ಮಾಡಿ ಮತ್ತು ನಿಮ್ಮ ಬಳಿ ಇರುವುದನ್ನ ಅಪ್ರಿಷಿಯೇಟ್ ಮಾಡಿ.

