ನಿಮ್ಮ ಎಪ್ಪತ್ತು ವರ್ಷದ ಬದುಕಿನ ಅವಧಿಯಲ್ಲಿ, ನೀವು ಕೇವಲ ಏಳು ಬುದ್ಧನ ಬದುಕನ್ನು ಬದುಕಿದರೂ ಸಾಕು. ಆದರೆ ದುರದೃಷ್ಟವಶಾತ್ ಈ ಏಳು ನಿಮಿಷಗಳೂ ಸಾಧ್ಯವಾಗುವುದಿಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಏಳು ನಿಮಿಷ ಬುದ್ಧನ ಬದುಕನ್ನು ಬದುಕಿ ಸಾಕು. ಒಬ್ಬ ಗ್ರೇಟ್ ಮಾಸ್ಟರ್ ಹೇಳಿರುವ ಮಾತುಗಳು ಇವು. ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ನೀವು ಪರಿಪೂರ್ಣ ಮೌನವನ್ನು ಧಾರಣೆ ಮಾಡಬೇಕಾಗುತ್ತದೆ. ನಿಮ್ಮ ಸಂಪೂರ್ಣ ಅನುಪಸ್ಥಿತಿಯನ್ನು ಪ್ರಸ್ತುತ ಪಡಿಸುತ್ತಿರಬೇಕು ಮೌನ. ಏನೂ ಮಾಡದೇ ಸುಮ್ಮನೇ ಕೂಡುವುದು ಕಷ್ಟಕರ, ನೀವು ಮೌನವಾಗಿದ್ದೀರಾದರೂ, ನಿಮ್ಮ ಮೈಂಡ್ ಅನವಶ್ಯಕ ವಿಚಾರ ಸರಣಿಯನ್ನು ಹೆಣೆಯುತ್ತಿದೆ. ಮತ್ತು ಈ ವಿಚಾರ ಸರಣಿ ನಾವು ಈಗ ಮಾಡುತ್ತಿರುವುದನ್ನ ಅರ್ಥ ಮಾಡಿಕೊಳ್ಳುವುದಕ್ಕೆ ಅಡ್ಡ ಗೋಡೆಯಾಗುತ್ತದೆ. ಇದು ಕೇವಲ ಉಪನ್ಯಾಸ ಅಲ್ಲ, ಒಳಗಿನ ತಿರುಳನ್ನು ಅರ್ಥಮಾಡಿಕೊಳ್ಳಲು ನಾವು ಇಬ್ಬರೂ ಕೂಡಿ ಮಾಡುತ್ತಿರುವ ಪ್ರಯತ್ನ.
ಯಾರೂ ಪರಿಪೂರ್ಣವಾಗಿ ಸಧ್ಯದಲ್ಲಿ ಇರುವುದಿಲ್ಲ. ಏಕೆಂದರೆ, ಪರಿಪೂರ್ಣವಾಗಿ ಸಧ್ಯದಲ್ಲಿ ಇದ್ದಾಗ ನೀವು ಮಾಯವಾಗುತ್ತೀರಿ ಹಾಗು ನಿಮ್ಮ ಜಾಗದಲ್ಲಿ ಬುದ್ಧ ಅವತರಿಸುತ್ತಾನೆ. ನೀವು ನಿಮ್ಮನ್ನ ಮೋಡದಂತೆ ಮಾಯವಾಗುವುದನ್ನು ಅನುಭವಿಸುತ್ತೀರ, ಮತ್ತು ಒಂದು ಹೊಸ ಇಮೇಜ್, ಪೂರ್ಣ ಅರಿವಿನ ಬಂಗಾರದ ಇಮೇಜ್ ನಿಮ್ಮೊಳಗೆ ಹುಟ್ಟಿಕೊಳ್ಳಲು ಶುರುವಾಗುತ್ತದೆ, ಥೇಟ್ ಪರ್ವತದ ಶಿಖರದಂತೆ.
ನಿಮ್ಮ ಎಪ್ಪತ್ತು ವರ್ಷದ ಬದುಕಿನ ಅವಧಿಯಲ್ಲಿ, ನೀವು ಕೇವಲ ಏಳು ಬುದ್ಧನ ಬದುಕನ್ನು ಬದುಕಿದರೂ ಸಾಕು. ಆದರೆ ದುರದೃಷ್ಟವಶಾತ್ ಈ ಏಳು ನಿಮಿಷಗಳೂ ಸಾಧ್ಯವಾಗುವುದಿಲ್ಲ. ಮನಸ್ಸು ಸ್ಟಕ್ ಆದ ಕ್ಯಾಸೆಟ್ ನಂತೆ ಮತ್ತೆ ಅದೇ ಅದೇ ಹಾಡುತ್ತ ಹೋಗುತ್ತದೆ. ಓರಿಜಿನಲ್ ಆಗಿರುವುದು ಮೈಂಡ್ ಗೆ ಸಾಧ್ಯವಾಗುವುದೇ ಇಲ್ಲ, ಅದು ಮತ್ತೆ ಮತ್ತೆ ಅದದನ್ನೇ ರಿಪೀಟ್ ಮಾಡುತ್ತಲೇ ಹೋಗುತ್ತದೆ.
ಎಮ್ಮೆ ಸದಾ ಮೆಲ್ಲುವುದನ್ನು ನೋಡಿದ್ದೀರಾ, ಮೈಂಡ್ ಕೂಡ ಹಾಗೆಯೇ ಸದಾ ರಿಪೀಟ್ ಮಾಡುತ್ತಲೇ ಇರುತ್ತದೆ. ಇದು ಒಂದು ರೀತಿಯಲ್ಲಿ ಚ್ಯೂಯಿಂಗ್ ಗಮ್ ನ ಚ್ಯೂ ಮಾಡಿದ ಹಾಗೆ ನಿರರ್ಥಕ. ಬಿದಿರುಗಳಿಗೂ ಇದನ್ನೆಲ್ಲ ನೋಡಿ ನಗು ಬರುತ್ತದೆ, ಏಕೆಂದರೆ ಅವುಗಳಿಗೆ ಎಲ್ಲರೂ ತಾವು ಸೈಲೆಂಟ್ ಆಗಿದ್ದೇವೆ ಎಂದುಕೊಳ್ಳುತ್ತಾರಾದರೂ ಎಲ್ಲೂ ಜ್ವಾಲಾಮುಖಿಯ ಮೇಲೆ ಕೂತಿದ್ದಾರೆ ಎನ್ನುವುದು ಗೊತ್ತು.
Source: Osho; Zen The Diamond Thunderbolt, Chapter: 11

