ಸಾಂಗತ್ಯದ ಸೌಹಾರ್ದಕ್ಕೆ 9 ಟಿಪ್ಸ್

ಸಾಂಗತ್ಯದಲ್ಲಿ ಸೌಹಾರ್ದ ಬಹಳ ಮುಖ್ಯ. ಮತ್ತು ಈ ಸೌಹಾರ್ದ ಉಳಿಯೋದು ಸಂವಹನದಿಂದ. ನಾವು ನಮ್ಮ ಸಂಗಾತಿಯೊಡನೆ ಎಷ್ಟು ಉತ್ತಮವಾಗಿ, ನಾಜೂಕಾಗಿ ಸಂವಹನ ನದೆಸುತ್ತೀವೋ ನಮ್ಮ ಸಾಂಗತ್ಯ ಅಷ್ಟು ಗಟ್ಟಿಯಾಗಿರುತ್ತದೆ, ದೀರ್ಘವಾಗಿರುತ್ತದೆ. ಇದನ್ನು ಸಾಧ್ಯವಾಗಿಸಲು ಇಲ್ಲಿದೆ 9 ಪುಟ್ಟ ಟಿಪ್ಸ್… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ಅತ್ಯುತ್ತಮ ಸಂಗಾತಿಗಳು ಯಾವಾಗಲೂ ಬಳಸುವ ಮಾತುಗಳು.

  1. ನಿನ್ನ ಬಗ್ಗೆ ಊಹೆ ಮಾಡುವುದಕ್ಕೆ ನನಗೆ ಇಷ್ಟವಿಲ್ಲ ಆದ್ದರಿಂದ ಮೊದಲು ನಿನ್ನನ್ನೇ ಈ ಕುರಿತು ಕೇಳಿಬಿಡುತ್ತೇನೆ.
  2. ಈಗ ಟೆಕ್ಸ್ಟ್ ಮಾಡಲಿಕ್ಕಾಗಲಾರದು ಬಹುಶಃ. ಆದರೆ ಸಾಧ್ಯವಾದಷ್ಟು ಬೇಗ ಟೆಕ್ಸ್ಟ್ ಮಾಡುತ್ತೇನೆ, ಪ್ರಾಮಿಸ್.
  3. ನನಗೆ ಒಂದು ಗಂಟೆ ಸಮಯ ಬೇಕು. ನಮ್ಮ ಈ ಸಂಭಾಷಣೆಗೆ ನನ್ನ ಕೊಡುಗೆ ಅತ್ಯುತ್ತಮವಾಗಿರಬೇಕು.
  4. ನೀನು ಮಾತನಾಡಿದ್ದು ಒಳ್ಳೆಯದಾಯ್ತು. ಈ ವಿಷಯ ನಿನ್ನ ಕಾಡುತ್ತಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಥ್ಯಾಂಕ್ಯೂ.
  5. ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ನನಗೆ ಗೊತ್ತಿಲ್ಲ. ಇಬ್ಬರೂ ಕೂಡಿ ಪ್ರಯತ್ನ ಮಾಡೋಣ.
  6. Ok. ನನಗೆ ಗೊತ್ತಾಯ್ತು ಯಾಕೆ ಈ ವಿಷಯ ನಿನಗೆ ಸಿಟ್ಟು ತರಿಸುತ್ತದೆ ಎನ್ನುವುದು.
  7. ಬೇರೆ ಏನು ಮಾಡಬಹುದು ನಾವು ಈ ಸಮಸ್ಯೆ ಮತ್ತೆ ರಿಪೀಟ್ ಆಗದಿರುವಂತೆ.
  8. ಈ ಪರಿಹಾರದ ಕುರಿತು ನಮ್ಮಿಬ್ಬರಿಗೂ ಖುಶಿ ಇರಬೇಕು.
  9. ಈ ಪರಿಹಾರ ಒಬ್ಬರಿಗೆ ಇಷ್ಟವಿಲ್ಲವಾದರೂ ಇಬ್ಬರೂ ಸೇರಿ ಇನ್ನೊಂದು ಪರಿಹಾರದ ಬಗ್ಗೆ ಯೋಚಿಸೋಣ.

ಈ ಮಾತುಗಳು ಆದಷ್ಟು ಹೆಚ್ಚು ಬಳಸಿ. ಇವು ನಿಮ್ಮ ಸಂಬಂಧವನ್ನು ಇನ್ನೂ ಹೆಚ್ಚು ಗಟ್ಟಿಗೊಳಿಸುತ್ತವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.