ಬಹುತೇಕರು ಕೆಲಸ ಕಠಿಣವಾಗತೊಡಗಿದಾಗ ದಣಿದು ಹತಾಶರಾಗಿ ಸಹನೆ ಕಳೆದುಕೊಂಡು ಕೈಚೆಲ್ಲಿಬಿಡುತ್ತಾರೆ. ತಾವು ವರ್ಷಗಟ್ಟಲೇ ಕಾಣುತ್ತಿದ್ದ ಕನಸು ಇನ್ನೇನು ಸ್ವಲ್ಪ ದೂರದಲ್ಲಿರುವುದು ಗೊತ್ತಾಗದೆ ನಿರಾಶರಾಗಿ ತಮ್ಮ ಪ್ರಯತ್ನ ನಿಲ್ಲಿಸಿಬಿಡುತ್ತಾರೆ. ಇದರಿಂದ ಯಾವ ಸಾಧನೆಯೂ ಆಗುವುದಿಲ್ಲ… । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಅಮೇರಿಕೆಯ ಗೋಲ್ಡ್ ರಶ್ ಸಮಯದಲ್ಲಿ ಬಂಗಾರಕ್ಕಾಗಿ ಮೈನಿಂಗ್ ಮಾಡುತ್ತಿದ್ದ ಒಬ್ಬ ವ್ಯಕ್ತಿ ತುಂಬ ದಿನಗಳಾದರೂ ಯಾವ ಭರವಸೆ ಕಾಣಿಸುತ್ತಿಲ್ಲವಾದ್ದರಿಂದ ಬೇಸರದಲ್ಲಿ ನಿತ್ರಾಣನಾಗಿ ತನ್ನ ಕೆಲಸ ನಿಲ್ಲಿಸಿಬಿಟ್ಟ. ಅವನು ತನ್ನ ಮೈನಿಂಗ್ ಸಲಕರಣೆಗಳನ್ನ ಇನ್ನೊಬ್ಬ ವ್ಯಕ್ತಿಗೆ ಮಾರಿಬಿಟ್ಟ. ಸಲಕರಣೆಗಳನ್ನು ಕೊಂಡ ವ್ಯಕ್ತಿ, ಹಿಂದಿನ ವ್ಯಕ್ತಿ ಬಿಟ್ಟಲ್ಲಿಂದ ತನ್ನ ತನ್ನ ಮೈನಿಂಗ್ ಕೆಲಸ ಮುಂದುವರೆಸಿದ.
ಸ್ಥಳವನ್ನು ಪರಿಶೀಲನೆ ಮಾಡಿದ ಹೊಸ ಮೈನರ್ ನ ಇಂಜಿನಿಯರ್, ಮೊದಲ ಮೈನರ್ ಎಲ್ಲಿ ನಿಲ್ಲಿಸಿದ್ದನೋ ಅಲ್ಲಿಂದ ಕೇವಲ ಮೂರು ಅಡಿ ಆಳದಲ್ಲಿ ಬಂಗಾರ ಇರುವುದಾಗಿ ವಿಷಯ ತಿಳಿಸಿದ.
ಇಂಜಿನಿಯರ್ ಹೇಳಿದ್ದು ಸರಿಯಾಗಿತ್ತು. ಮೊದಲ ಮೈನರ್ ಬಂಗಾರ ಕೇವಲ ಮೂರು ಅಡಿ ದೂರದಲ್ಲಿದ್ದಾಗ ಗೊತ್ತಾಗದೇ ಸುಸ್ತಾಗಿ ದಣಿದು ತನ್ನ ಮೈನಿಂಗ್ ಕೆಲಸ ಹತಾಶೆಯಲ್ಲಿ ನಿಲ್ಲಿಸಿಬಿಟ್ಟಿದ್ದ.
ಯಾವಾಗ ಸಂಗತಿಗಳು ಕಠಿಣ ಆಗತೊಡಗುತ್ತವೆಯೋ ಆಗ ಸಹನೆ ಬೆಳೆಸಿಕೊಳ್ಳಿ . ಬಹುತೇಕರು ಕೆಲಸ ಕಠಿಣವಾಗತೊಡಗಿದಾಗ ದಣಿದು ಹತಾಶರಾಗಿ ಸಹನೆ ಕಳೆದುಕೊಂಡು ಕೈಚೆಲ್ಲಿಬಿಡುತ್ತಾರೆ. ತಾವು ವರ್ಷಗಟ್ಟಲೇ ಕಾಣುತ್ತಿದ್ದ ಕನಸು ಇನ್ನೇನು ಸ್ವಲ್ಪ ದೂರದಲ್ಲಿರುವುದು ಗೊತ್ತಾಗದೆ ನಿರಾಶರಾಗಿ ತಮ್ಮ ಪ್ರಯತ್ನ ನಿಲ್ಲಿಸಿಬಿಡುತ್ತಾರೆ. ಇಂಥ ಸಮಯದಲ್ಲಿ ನಿಮ್ಮ ಧೃಡತೆಯನ್ನು ಕೂಡಿಟ್ಟುಕೊಂಡು ನಿಮ್ಮನ್ನು ನೀವು ಇನ್ನೂ ಸ್ವಲ್ಪ ಪುಶ್ ಮಾಡುವುರಾದರೆ ಯಶಸ್ಸು ನಿಮ್ಮ ಪಾಲಾಗುವುದರಲ್ಲಿ ಸಂಶಯವೇ ಇಲ್ಲ

