ಸಂಕಟ ನೀಗಿಕೊಳ್ಳುವ ಬಗೆ…

ಸಂಕಟವನ್ನು ಪೋಷಣೆ ಮಾಡುವ ಪೋಷಕಾಂಶಗಳ ಮೂಲವನ್ನು ನೀವು ಅರಿತಾಗ, ಮತ್ತು ಪೋಷಕಾಂಶಗಳನ್ನು cut off ಮಾಡುವ ಬಗೆಯನ್ನು ನೀವು ತಿಳಿದುಕೊಂಡಾಗ ಸಂಕಟ ತಾನೇ ತಾನಾಗಿ ನಾಶವಾಗುತ್ತದೆ. ~ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ

ಸಂಕಟದಿಂದ ದೂರ ಓಡಿ ಹೋಗದಿರುವುದನ್ನ ನಮಗೆ ಬುದ್ಧಿಸಂ ಕಲಿಸುತ್ತದೆ. ಸಂಕಟದ ಕಾರಣ ಮತ್ತು ಅಗರ ರಚನೆಯನ್ನು ಅರ್ಥ ಮಾಡಿಕೊಳ್ಳಲು ನಾವು ಸಂಕಟದ ಪ್ರಕೃತಿಯನ್ನು (nature) ಆಳವಾಗಿ ಪರಿಶೀಲಿಸಬೇಕಾಗುತ್ತದೆ. ಒಮ್ಮೆ ನೀವು ಸಂಕಟದ ಬೇರುಗಳನ್ನ ಅರ್ಥಮಾಡಿಕೊಂಡರೆ, ಸಂಕಟದ ಬದಲಾವಣೆಯ (transformation) ದಾರಿ ಅನಾವರಣಗೊಳ್ಳುತ್ತ ಹೋಗುತ್ತದೆ.

ಬುದ್ಧ ಆಹಾರದ ಭಾಷೆಯಲ್ಲಿ ಸಂಕಟವನ್ನು ವಿವರಿಸುತ್ತಾನೆ. ಆಹಾರವಿಲ್ಲದೆ ಯಾವುದು ಬದುಕಿರಲಾರದು, ನಿಮ್ಮ ಪ್ರೀತಿ ಕೂಡ. ನಿಮ್ಮ ಪ್ರೀತಿ ಗೆ ನೀವು ಸರಿಯಾಗಿ ಫೀಡ್ ಮಾಡದೇ ಹೋದರೆ ಅದು ಬಹಳ ದಿನ ಬದುಕಿರಲಾರದು. ಸಂಕಟ ಇರುವುದು ನೀವು ಅದನ್ನು ಪೋಷಣೆ ಮಾಡುತ್ತಿದ್ದೀರಿ ಎನ್ನುವ ಕಾರಣಕ್ಕೆ. ಹಿಂಸೆ, ದ್ವೇಷ, ದುಗುಡ, ಮತ್ತು ಭಯ ನಿಮ್ಮೊಳಗೆ ಇವೆ ಎಂದರೆ, ನೀವು ಅವುಗಳನ್ನ unmindful ಆಗಿ ಬಳಕೆ ಮಾಡುತ್ತ ಪೋಷಣೆ ಮಾಡುತ್ತಿದ್ದೀರಿ ಎಂದು ಅರ್ಥ.

ಆದ್ದರಿಂದ ಸಂಕಟವನ್ನು ಪೋಷಣೆ ಮಾಡುವ ಪೋಷಕಾಂಶಗಳ ಮೂಲವನ್ನು ನೀವು ಅರಿತಾಗ, ಮತ್ತು ಪೋಷಕಾಂಶಗಳನ್ನು cut off ಮಾಡುವ ಬಗೆಯನ್ನು ನೀವು ತಿಳಿದುಕೊಂಡಾಗ ಸಂಕಟ ತಾನೇ ತಾನಾಗಿ ನಾಶವಾಗುತ್ತದೆ. ಇದು ನಮ್ಮ ಕಾಲದ ಬಹುಮುಖ್ಯವಾದ ತಿಳುವಳಿಕೆ ಏಕೆಂದರೆ, ನಮ್ಮೊಳಗಿನ ಮತ್ತು ನಮ್ಮ ಮಕ್ಕಳೊಳಗಿನ ಹಿಂಸೆಯ ಪ್ರಮಾಣ ಮತ್ತು ಅದರ ಕುರಿತಾದ ಲಾಲಸೆಗೆ ಕಾರಣ ನಮ್ಮ unmindful ಬಳಕೆಯ ಪ್ರ್ಯಾಕ್ಟೀಸ್ ಗಳು.

ನಾವು ಹಲವಾರು ವಿಷಗಳನ್ನ, ವಿಷಕಾರಿ ಸಂಗತಿಗಳನ್ನ ನಮ್ಮ ದೇಹದೊಳಗೆ, ನಮ್ಮ ಪ್ರಜ್ಞೆಯೊಳಗೆ ಸೇರಿಸಿಕೊಳ್ಳುತ್ತಿದ್ದೇವೆ. ನಾವು ಈ ವಿಷಕಾರಿ ಸಂಗತಿಗಳನ್ನ ಹುಟ್ಟುಹಾಕುವುದನ್ನ ನಿಲ್ಲಿಸದ ಹೊರತು, ಮತ್ತು mindful ಬಳಕೆಯ ಮೂಲಕ ಈ ಸಂಗತಿಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನ ತಿಳಿದುಕೊಳ್ಳದ ಹೊರತು ನಮಗೆ ಬಿಡುಗಡೆಯ ದಾರಿಯಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.