ಉದ್ಯಮಶೀಲತೆ ಹಣದ ವಿಷಯದಲ್ಲಿ ಅಷ್ಟೇ ಅಲ್ಲ, ಅದು ನಿಮ್ಮ ವ್ಯಕ್ತಿತ್ವವನ್ನು ಅರಳಿಸಲು ಕೂಡ ಸಹಾಯ ಮಾಡಬಲ್ಲದು. ಎಷ್ಟೇ ಚಿಕ್ಕದಾಗಿಯಾದರೂ ಉದ್ಯಮಶೀಲತೆಯನ್ನು ಪ್ರ್ಯಾಕ್ಟೀಸ್ ಮಾಡಿ. ಉದ್ಯಮಶೀಲತೆ ಎಂದರೆ ನೀವು business ನ್ನೇ ಮಾಡಬೇಕಿಲ್ಲ, ನಿಮ್ಮ ಕೆಲಸಗಳನ್ನು ನೀವೇ ಮಾಡುವುದನ್ನ ಕಲಿಯುವುದು, ಇದು ನಿಮ್ಮ ಆತ್ಮವಿಶ್ವಾಸವನ್ನ ಹೆಚ್ಚು ಮಾಡುತ್ತದೆ… | ಸಂಗ್ರಹಾನುವಾದ: ಚಿದಂಬರ ನರೇಂದ್ರ
ಚೈನಾದ ಪ್ರಸಿದ್ಧ ಕೈಗಾರಿಕೋದ್ಯಮಿ ಜ್ಯಾಕ್ ಮಾ ಒಮ್ಮೆ ಹೇಳಿದ ಮಾತು,
“ ಕೋತಿಯ ಎದುರು ಹಣ ಮತ್ತು ಬಾಳೆ ಹಣ್ಣು ಇಟ್ಟರೆ ಅದು ಬಾಳೆಹಣ್ಣಿಗೆ ಕೈ ಹಾಕುತ್ತದೆ”.
ಕೋತಿ ಬಾಳೆಹಣ್ಣು ಯಾಕೆ ಆಯ್ಕೆ ಮಾಡಿಕೊಳ್ಳುತ್ತದೆ ಎಂದರೆ ಹಣದಿಂದ ಬೇಕಾದಷ್ಟು ಬಾಳೆಹಣ್ಣು ಕೊಳ್ಳಬಹುದು ಎನ್ನುವುದು ಅದಕ್ಕೆ ಗೊತ್ತಿಲ್ಲ.
ಹಾಗೆಯೇ ನೀವು ಜನರಿಗೆ ಎದುರು work ಮತ್ತು business ಗಳನ್ನು ಆಫರ್ ಮಾಡಿದರೆ ಅವರು ವರ್ಕ್ ನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಅಕೆಂದರೆ ಬಹುತೇಕ ಜನರಿಗೆ business ನಿಂದ ಸಂಬಳಕ್ಕಿಂತ ಜಾಸ್ತಿ ಹಣ ಗಳಿಸಬಹುದು ಎನ್ನುವುದು ಗೊತ್ತಿಲ್ಲ.
ನಮ್ಮ ಬಳಿ ಸಾಕಷ್ಟು ಹಣ ಇಲ್ಲ ಏಕೆಂದರೆ ನಮಗೆ ಉದ್ಯಮಶೀಲತೆ ಸಾಧ್ಯಮಾಡುವ ಅವಕಾಶಗಳನ್ನು ಗೊತ್ತುಮಾಡಿಕೊಳ್ಳುವ ಬಗೆಯನ್ನು ಕಲಿಸಲಾಗಿಲ್ಲ.
ನಮ್ಮ ಶಿಕ್ಷಣ ಪದ್ಧತಿ ಬಹುತೇಕ ಇನ್ನೊಬ್ಬರಿಗಾಗಿ ಕೆಲಸ ಮಾಡಿ ಸಂಬಳ ಪಡೆಯುವ ಜನರನ್ನು ತಯಾರು ಮಾಡುತ್ತದೆಯೇ ಹೊರತು, ಜನರು ತಮಗಾಗಿ ಕೆಲಸ ಮಾಡುವ, ಮತ್ತು ಹೆಚ್ಚು ಜನರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸುವ ತಿಳುವಳಿಕೆಯನ್ನು ಸಾಧ್ಯಮಾಡುವುದಿಲ್ಲ.
ವೇತನ ಒಳ್ಳೆಯದೇನೋ ಸರಿ, ಅದು ನಮ್ಮ ಬದುಕಿಗೆ ಸಪೋರ್ಟ್ ಮಾಡುತ್ತದೆ ನಿಜ ಆದರೆ ಪ್ರಾಫಿಟ್ ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ ಅಷ್ಟೇ ಅಲ್ಲ ನೀವು ಇನ್ನೂ ಸಾಕಷ್ಟು ಜನರ ಅದೃಷ್ಟಕ್ಕೆ ಕಾರಣರಾಗಬಹುದು.
ಉದ್ಯಮಶೀಲತೆ ಹಣದ ವಿಷಯದಲ್ಲಿ ಅಷ್ಟೇ ಅಲ್ಲ, ಅದು ನಿಮ್ಮ ವ್ಯಕ್ತಿತ್ವವನ್ನು ಅರಳಿಸಲು ಕೂಡ ಸಹಾಯ ಮಾಡಬಲ್ಲದು. ಎಷ್ಟೇ ಚಿಕ್ಕದಾಗಿಯಾದರೂ ಉದ್ಯಮಶೀಲತೆಯನ್ನು ಪ್ರ್ಯಾಕ್ಟೀಸ್ ಮಾಡಿ. ಉದ್ಯಮಶೀಲತೆ ಎಂದರೆ ನೀವು business ನ್ನೇ ಮಾಡಬೇಕಿಲ್ಲ, ನಿಮ್ಮ ಕೆಲಸಗಳನ್ನು ನೀವೇ ಮಾಡುವುದನ್ನ ಕಲಿಯುವುದು, ಇದು ನಿಮ್ಮ ಆತ್ಮವಿಶ್ವಾಸವನ್ನ ಹೆಚ್ಚು ಮಾಡುತ್ತದೆ.
ಝೆನ್ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಇಬ್ಬರು ಸನ್ಯಾಸಿಗಳು ತಮ್ಮ ಮುಂದಿನ ಸಾಧನೆಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಬೆಳೆಸಿದರು.
ಹಿರಿಯ ಸನ್ಯಾಸಿ, ತಂತ್ರ ಸಾಧನೆಯಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡು ವಿಶೇಷ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡ.
ಕಿರಿಯ ಸನ್ಯಾಸಿ ಸಹಜ ಕೃಷಿಯಲ್ಲಿ ತೊಡಗಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ.
ಇಬ್ಬರೂ ಸನ್ಯಾಸಿಗಳು ಹಳೆಯ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಿ ತಮ್ಮ ತಮ್ಮ ಸಾಧನೆಗಳ ಬಗ್ಗೆ ಗುರುಗಳಿಗೆ ತಿಳಿಸಬೇಕೆಂದು ನಿಶ್ಚಯಿಸಿದರು.
ಆಶ್ರಮ ಮಾರ್ಗವಾಗಿ ಹೋಗುತ್ತಿದ್ದಾಗ, ಸನ್ಯಾಸಿಗಳಿಗೆ ಒಂದು ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ನದಿ ದಾಟುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ದೋಣಿಯೊಂದು ದಂಡೆಗೆ ಬಂತು.
ಹಿರಿಯ ಸನ್ಯಾಸಿ ತನ್ನ ತಂತ್ರ ಶಕ್ತಿಯನ್ನು ಬಳಸಿ, ನಾವಿಕನಿಗೆ ಮಂಕು ಕವಿಸಿ ದೋಣಿ ಎತ್ತಿಕೊಂಡು ಕ್ಷಣಾರ್ಧದಲ್ಲಿ ಆಚೆ ದಡ ಸೇರಿದ.
ಕಿರಿಯ ಸನ್ಯಾಸಿ, ಕೊಂಚ ಹೊತ್ತು ಕಾಯ್ದು, ಇನ್ನೊಂದು ದೋಣಿಯಲ್ಲಿ ಆಚೆ ದಡ ಸೇರಿದ. ದಡ ಸೇರಿದ ಮೇಲೆ ನಾವಿಕನಿಗೆ ಒಂದು ರೂಪಾಯಿ ಬಾಡಿಗೆ ಕೊಟ್ಟ.
ಸನ್ಯಾಸಿಗಳು ಮಾತನಾಡಿಕೊಳ್ಳುತ್ತ ತಮ್ಮ ಮುಂದಿನ ದಾರಿ ಕ್ರಮಿಸತೊಡಗಿದರು.
ಹಿರಿಯ ಸನ್ಯಾಸಿ : ನೀನು ಸಮಯವನ್ನೆಲ್ಲ ಹಾಳು ಮಾಡಿಕೊಂಡುಬಿಟ್ಟೆ. ನಿನ್ನ ಕಂಡರೆ ನನಗೆ ಅನುಕಂಪ. ನಾನು ನೋಡು ತಂತ್ರ ಸಾಧನೆ ಮಾಡಿ ಎಷ್ಟು ಅತೀಂದ್ರಿಯ ಶಕ್ತಿಗಳನ್ನು ಗಳಿಸಿದ್ದೇನೆ.
ಕಿರಿಯ ಸನ್ಯಾಸಿ : ಅಯ್ಯೋ ! ನಾನು ನೋಡಲಿಲ್ವಾ, ಒಂದು ರೂಪಾಯಿ ಬೆಲೆ ಬಾಳುವ ತಂತ್ರ ಶಕ್ತಿಗಳಿಗಾಗಿ ನೀನು ಇಷ್ಟು ಸಮಯ ವ್ಯರ್ಥ ಮಾಡಿದ್ದೀಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ.

