ನಮ್ಮನ್ನೂ ನಾವು ಹುರಿದುಂಬಿಸಿಕೊಳ್ಳಬೇಕು!

ಬಹಳಷ್ಟು ಬಾರಿ ನಾವು ನಮ್ಮ ಬಗ್ಗೆ ತುಂಬ ಸೆಲ್ಫ್ ಕ್ರಿಟಿಕಲ್ ಆಗಿಬಿಡುತ್ತೇವೆ, ಇದನ್ನ ನಾನು ಪ್ರಜ್ಞಾಪೂರ್ವಕವಾಗಿ ಅವಾಯ್ಡ್ ಮಾಡಬೇಕಿದೆ. ನಮ್ಮನ್ನು ನಾವು ನಾಶ ಮಾಡಿಕೊಳ್ಳುವುದು ನಮಗೆ ಒಮ್ಮೆ ಅಭ್ಯಾಸವಾಗಿಬಿಟ್ಟಿತೆಂದರೆ ಅದು ವಿಷಕಾರಿಯಾಗಿ ನಮ್ಮೊಳಗಿನ ಸಕಾರಾತ್ಮಕತೆಗೆ ಹಾನಿಯುಂಟು ಮಾಡುತ್ತದೆ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ

ಇನ್ನೊಬ್ಬರನ್ನು ಹೊಗಳುವಾಗ ನಮಗೆ ಇರುವ ಆಸ್ಥೆ ನಮ್ಮನ್ನು ಕುರಿತು ಮಾತನಾಡುವಾಗ ಯಾಕೆ ನಮಗೆ ಇರುವುದಿಲ್ಲ? ಯಾಕೆ ನಾವು ನಮ್ಮ ತೀಕ್ಷ್ಣ ಟೀಕಾಕಾರರಾಗಿಬಿಡ್ತೀವಿ? ಸ್ವಂತದ ಬಗ್ಗೆ ಅಹಂಕಾರ ಬೆಳೆಸಿಕೊಳ್ಳಬಾರದು ನಿಜ ಆದರೆ ನಮ್ಮ ಮಹತ್ವದ ಬಗ್ಗೆ ನಮಗೆ ಗೊತ್ತಿರಬೇಕು. ನಾವು ಆಗಿಂದಾಗ್ಗೆ ನಮ್ಮಲ್ಲಿನ ಸಕಾರಾತ್ಮಕ ಅಂಶಗಳನ್ನು ಗುರುತಿಸಿಕೊಳ್ಳುತ್ತ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದು ನಮ್ಮ ಬೆಳವಣಿಗೆಗೆ ಬಹಳ ಸಹಕಾರಿ. ಇದನ್ನು ಮಾಡಲು ಒಂದು ಉತ್ತಮ ದಾರಿ ಎಂದರೆ positive affirmation ಗಳನ್ನು ಬಳಸುವುದು, ಇದು ನಮ್ಮೊಳಗಿನ ಧನಾತ್ಮಕತೆಯನ್ನ ಗಟ್ಟಗೊಳಿಸಲು ಸಹಾಯ ಮಾಡುತ್ತದೆ. ಯಾವುದು ನಿಜವಾಗಿ ಮುಖ್ಯ ಎಂದರೆ, ನಾವು ಈ ಸಮಾಜಕ್ಕೆ ಬೇಕಾದವರು ಮತ್ತು ನಮ್ಮಿಂದ ಬಹಳಷ್ಟು ಉತ್ತಮ ಕೆಲಸ ಆಗಬೇಕಿದೆ ಎನ್ನುವುದನ್ನ ಧೃಡವಾಗಿ ನಂಬುವುದು ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸುವುದು.

ಈ ಕೆಳಗೆ ಸೂಚಿಸಿರುವ ಐದು ಸಂಗತಿಗಳನ್ನ ನಾವು ಪ್ರತಿದಿನ ಹೇಳಿಕೊಳ್ಳಬೇಕು ಅಷ್ಟೇ ಅಲ್ಲ ಈ ಮಾತುಗಳಲ್ಲಿ ನಂಬಿಕೆ ಬೆಳೆಸಿಕೊಳ್ಳಬೇಕು.

I am good enough.
ಯಾರೂ ಪರಿಪೂರ್ಣರಲ್ಲ, ಪ್ರತಿಯೊಬ್ಬರೂ ಒಮ್ಮಿಲ್ಲ ಒಮ್ಮೆ ತಪ್ಪು ಮಾಡುವುದು ಸಹಜ. ಆದರೂ ನಾನು ಸಾಕಷ್ಟು ಒಳ್ಳೆಯವನು. ಒಳ್ಳೆಯ ಕೆಲಸಗಳನ್ನು ಮಾಡುವುದು ನನ್ನಿಂದ ಸಾಧ್ಯವಿದೆ.

I will keep trying
ಎಲ್ಲ ಬಾರಿ ನಾನು ಸರಿ ಇರದಿರಬಹುದು ಆದರೆ ಸರಿಯಾಗಿರಲು ನಾನು ಸದಾ ಪ್ರಯತ್ನ ಮುಂದುವರೆಸುತ್ತೇನೆ.

I will stay positive
ನಾನು ಯಾವಾಗಲೂ ನನ್ನ ಬದುಕಿನೊಳಗಿನ ಧನಾತ್ಮಕತೆಯ ಬಗ್ಗೆ ಫೋಕಸ್ ಮಾಡುತ್ತೇನೆ ಮತ್ತು ನನ್ನ ಬಳಿ ಇರುವುದರ ಬಗ್ಗೆ ನಾನು ಸದಾ ಕೃತಜ್ಞನಾಗಿರುತ್ತೇನೆ.

I will become better
ಇನ್ನೊಬ್ಬರಿಗಿಂತ ಉತ್ತಮ ಅಲ್ಲ, ನಿನ್ನೆಯ ನನಗಿಂತ ನಾನು ಇಂದು ಉತ್ತಮನಾಗಲು ಬಯಸುತ್ತೇನೆ. ನಾನು ಬೆಳವಣಿಗೆಯಾಗುತ್ತ ನನಗೆ ಗೊತ್ತಿರುವ ನನ್ನ ಹಾಗೆ ಇವೊಲ್ವ್ ಆಗಬಯಸುತ್ತೇನೆ.

I choose happiness
ಪ್ರತಿದಿನ ಎಷ್ಟೇ ಕಷ್ಟ ಇದ್ದರೂ ನಾನು ಖುಶಿಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತೇನೆ. ನೆಲಕ್ಕೆ ಹತ್ತಿರವಾಗಿರುತ್ತ ನನ್ನ ಕಲ್ಪನೆಯ ಬದುಕನ್ನ ಬದುಕಲು ಪ್ರಯತ್ನಿಸುತ್ತೇನೆ.

ಬಹಳಷ್ಟು ಬಾರಿ ನಾವು ನಮ್ಮ ಬಗ್ಗೆ ತುಂಬ ಸೆಲ್ಫ್ ಕ್ರಿಟಿಕಲ್ ಆಗಿಬಿಡುತ್ತೇವೆ, ಇದನ್ನ ನಾನು ಪ್ರಜ್ಞಾಪೂರ್ವಕವಾಗಿ ಅವಾಯ್ಡ್ ಮಾಡಬೇಕಿದೆ. ನಮ್ಮನ್ನು ನಾವು ನಾಶ ಮಾಡಿಕೊಳ್ಳುವುದು ನಮಗೆ ಒಮ್ಮೆ ಅಭ್ಯಾಸವಾಗಿಬಿಟ್ಟಿತೆಂದರೆ ಅದು ವಿಷಕಾರಿಯಾಗಿ ನಮ್ಮೊಳಗಿನ ಸಕಾರಾತ್ಮಕತೆಗೆ ಹಾನಿಯುಂಟು ಮಾಡುತ್ತದೆ. ಖಂಡಿತ ನಮ್ಮ ಕೊರತೆಗಳ ಬಗ್ಗೆ ನಮಗೆ ಅರಿವು ಇರಬೇಕು ಆದರೆ ಈ ವಿಮರ್ಶೆ ನಮ್ಮ ಧನಾತ್ಮಕತೆಯನ್ನ ನಾಶ ಮಾಡಿಕೊಳ್ಳುವ ಮಟ್ಟಕ್ಕೆ ಇರಬಾರದು. ನಾವು ಸಾಕಷ್ಟು ಒಳ್ಳೆಯದನ್ನು ಮಾಡುತ್ತ ಈ ಜಗತ್ತಿನಲ್ಲಿ ಒಂದು ತೃಪ್ತಿದಾಯಕ ಜೀವನವನ್ನು ಬದುಕಲು ಪ್ರಯತ್ನಿಸುತ್ತಿರುವವರು. ಹಾಗಾಗಿ ನಮ್ಮ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತ ನಮ್ಮನ್ನು ನಾವೇ ಹುರಿದುಂಬಿಸಿಕೊಳ್ಳೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.