ನಸ್ರುದ್ದೀನನ ಕತ್ತೆ ಸವಾರಿಯ ಫಜೀತಿಯ ಕತೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಅದು ಸಂತೆಯ ದಿನ, ಊರಿನ ಮಾರುಕಟ್ಟೆ ಗಿಜಿಗುಡುತ್ತಿತ್ತು.
ಆಗ ಅಚಾನಕ್ ಆಗಿ ಅಲ್ಲಿಗೆ ಎಲ್ಲಿಂದಲೋ ಬಂತು ನಾಗಾಲೋಟದಲ್ಲಿ ನಸ್ರುದ್ದೀನ್ ನ ಸವಾರಿ. ನಸ್ರುದ್ದೀನ್ ಸವಾರಿ ಮಾಡುತ್ತಿದ್ದ ಕತ್ತೆ ಸಿಕ್ಕಾಪಟ್ಟೆ ವೇಗದಿಂದ ಓಡುತ್ತಿತ್ತು. ನಸ್ರುದ್ದೀನ್ ಕತ್ತೆಯನ್ನು ನಿಯಂತ್ರಣದಲ್ಲಿಡಲು ಬಹಳ ಕಷ್ಟಪಡುತ್ತಿದ್ದ.
ನಸ್ರುದ್ದೀನ್ ನನ್ನಾಗಲೀ ಅಥವಾ ಅವನ ಕತ್ತೆಯನ್ನಾಗಲೀ ಇಷ್ಟು ವೇಗದ ಚಲನೆಯಲ್ಲಿ ಹಿಂದೆ ಯಾರೂ ನೋಡಿರಲಿಲ್ಲ.
“ಏಯ್ ನಸ್ರುದ್ದೀನ್” ಗೆಳೆಯನೊಬ್ಬ ಕೂಗಿದ, “ಇಷ್ಟು ಅವಸರದಲ್ಲಿ ಎಲ್ಲಿಗೆ ಹೊರಟಿದ್ದೀ?”.
ಕತ್ತೆಯ ಸವಾರಿ ಮುಂದುವರೆಸುತ್ತಲೇ ನಸ್ರುದ್ದೀನ್ ಕೂಗಿ ಉತ್ತರಿಸಿದ, “ಖಂಡಿತ ನನಗೆ ಗೊತ್ತಿಲ್ಲ, ನೀನು ಕತ್ತೆಯನ್ನೇ ಕೇಳಬೇಕು”.

