ಧನಾತ್ಮಕ ವ್ಯಕ್ತಿಯ ಲಕ್ಷಣಗಳು

ಅಂತಃಕರಣ, ಕಾರುಣ್ಯ, ಔದಾರ್ಯ ಈ ಎಲ್ಲವೂ ಧನಾತ್ಮಕ ವ್ಯಕ್ತಿಗಳ ಗುಣಲಕ್ಷಣಗಳು. ಏಕೆಂದರೆ ಧನಾತ್ಮಕತೆ ಎನ್ನುವುದು ಹಂಚಿಕೊಳ್ಳಲಿಕ್ಕೆ ಇರುವುದೆಂದು ಅವರಿಗೆ ಗೊತ್ತು… ~ ಸಂಗ್ರಹಾನುವಾದ । ಚಿದಂಬರ ನರೇಂದ್ರ

ಅಂತಃಕರಣ ಎನ್ನುವುದು ಒಂದು ತೋರು ಕ್ರಿಯೆಗಿಂತ ಹೆಚ್ಚಾಗಿ ಒಂದು ವೈಯಕ್ತಿಕ ಸ್ವಭಾವ. ನೀವು ಸದಾಕಾಲ ಅಂತಃಕರುಣಿ ಆಗಿರಬಹುದು ಅಥವಾ ನಿಮ್ಮ ಅನುಕೂಲದ ಸಂದರ್ಭದಲ್ಲಿ ಮಾತ್ರ ಅಂತಃಕರಣದ ಮನುಷ್ಯರಾಗಬಹುದು. ನಾವು ಬಹುತೇಕ ಜನ ಸದಾ ಅಂತಃಕರಣದ ಮನುಷ್ಯರಾಗಲು ಬಯಸುವುದು ಒಂದು ಭರವಸೆಯ ವಿಷಯ. ಏಕೆಂದರೆ ಅಂತಃಕರಣದ ಮನುಷ್ಯರಾಗಲು ನಾವು ಯಾವತ್ತು ವೇಟ್ ಮಾಡಬಾರದು.

ಅಂತಃಕರಣ, ಕಾರುಣ್ಯ, ಔದಾರ್ಯ ಈ ಎಲ್ಲವೂ ಧನಾತ್ಮಕ ವ್ಯಕ್ತಿಗಳ ಗುಣಲಕ್ಷಣಗಳು. ಏಕೆಂದರೆ ಧನಾತ್ಮಕತೆ ಎನ್ನುವುದು ಹಂಚಿಕೊಳ್ಳಲಿಕ್ಕೆ ಇರುವುದೆಂದು ಅವರಿಗೆ ಗೊತ್ತು. ಯಾವಾಗ ಜನ ಬದುಕಿನ ಬ್ರೈಟರ್ ಸೈಡ್ ಬಗ್ಗೆ ಆಶಾವಾದಿಯಾಗಿರುತ್ತಾರೋ ಆಗ ಅವರು ಇತರರನ್ನು ಯಾರೋ random ಅಪರಿಚಿತರು ಎಂದು ನೋಡದೇ ತಮ್ಮಂತೆ, ಎಲ್ಲರಂತೆ ಬದುಕಿನಲ್ಲಿ ಅತ್ಯುತ್ತಮವನ್ನು ಸಾಧಿಸಲು ಪ್ರಯತ್ನಪಡುವ ಸಹ ಮನುಷ್ಯರು ನೋಡುತ್ತಾರೆ.

ಧನಾತ್ಮಕರಾಗಲು, ಸವಾಲುಗಳನ್ನ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದವರಾಗಲು ನಾವು ಯಾವಾಗಲೂ ಬದುಕಿನಲ್ಲಿನ ನಮ್ಮ ನಮ್ಮ ಜಾಗಗಳ ಬಗ್ಗೆ ಮೈಂಡಫುಲ್ ಆಗಿರಬೇಕು, ಹಾಗೆಂದರೆ ನಾವು ಮಾತನಾಡುವ ಬಗ್ಗೆ , ನಮ್ಮ ಕ್ರಿಯೆಯ ಬಗ್ಗೆ, ನಾವು ಇನ್ನೊಬ್ಬರನ್ನು ಟ್ರೀಟ್ ಮಾಡುವ ಬಗ್ಗೆ. ನಿಕ್ಕಿ ಬನಾಸ್ ಹೇಳುವ ಈ ಮಾತು ಈ ವಿಷಯದಲ್ಲಿ ನಮಗೆ ಅದ್ಭುತ ನೆನಪಿನೋಲೆಯಂತಿದೆ.

“ನಿಮ್ಮ ಸುತ್ತಲಿನವರ ಮೇಲೆ ನಿಮ್ಮ ಪ್ರಭಾವ ಎಂತಹದು ಎನ್ನುವುದು ನಿಮಗೆ ನಿಜವಾಗಿ ಗೊತ್ತಾಗುವುದಿಲ್ಲ.

ನೀವು ಕೊಟ್ಟ ಸ್ಮೈಲ್ ಅವರಿಗೆ ಎಷ್ಟು ಅವಶ್ಯಕವಾಗಿತ್ತು ಎನ್ನುವುದು ನಿಮಗೆ ನಿಜವಾಗಿ ಗೊತ್ತಾಗುವುದಿಲ್ಲ.

ನೀವು ತೋರಿಸಿದ ಅಂತಃಕರಣ ಅವರ ಬದುಕನ್ನ ಹೇಗೆ ಪೂರ್ಣವಾಗಿ ಬದಲಾಯಿಸಿತು ಎನ್ನುವುದು ನಿಮಗೆ ನಿಜವಾಗಿ ಗೊತ್ತಾಗುವುದಿಲ್ಲ.

ನಿಮ್ಮ ಒಂದು ಆಪ್ತ ಅಪ್ಪುಗೆ ಮತ್ತು ಆಳವಾದ ಮಾತುಕತೆಯ ಅವಶ್ಯಕತೆ ಅವರಿಗೆ ಎಷ್ಟಿತ್ತು ಎನ್ನುವುದು ನಿಮಗೆ ನಿಜವಾಗಿ ಗೊತ್ತಾಗುವುದಿಲ್ಲ.

ಆದ್ದರಿಂದ ಅಂತಃಕರಣದ ಮನುಷ್ಯರಾಗಲು ಕಾಯಬೇಡಿ.
ಇನ್ನೊಬ್ಬರು ಮೊದಲು ಅಂತಃಕರಣ ತೋರಿಸಲಿ ಎಂದು ವೇಟ್ ಮಾಡಬೇಡಿ.
ಸಮ್ಮನೇ ನಿಮ್ಮ ಸಹಜ ಅಂತಃಕರಣದ ಸ್ವಭಾವದ ತೆಕ್ಕೆಗೆ ಅವರನ್ನು ತೆಗೆದುಕೊಂಡುಬಿಡಿ, ಅವರಿಗೆ ಅದರ ಅವಶ್ಯಕತೆ ಎಷ್ಟಿದೆ ಎನ್ನುವುದು ನಿಮಗೆ ಗೊತ್ತಿಲ್ಲ”.

ಎಷ್ಟು ನಿಜದ ಮಾತು ಇದು : “ Just be kind, ನಿಮಗೆ ನಿಜವಾಗಿಯೂ ಗೊತ್ತಿಲ್ಲ ಅದರ ಅವಶ್ಯಕತೆ ಜನರಿಗೆ ಎಷ್ಟಿದೆ ಎಂದು”. ಆದ್ದರಿಂದ ಅಂತಃಕರುಣದ ಮನುಷ್ಯರಾಗಲು ಕಾಯಬೇಕಿಲ್ಲ. ಸದಾಕಾಲ ನಾವು ಅಂತಃಕರುಣದ ಮನುಷ್ಯರಾಗಲು ನಿರ್ಧರಿಸಿದೆವಾದರೆ, ಅದು ನಮ್ಮ ಸಹಜ ಸ್ವಭಾವವಾಗಿಬಿಡುತ್ತದೆ. ಆಗ ನಮ್ಮಿಂದ ಹರಿಯುತ್ತ ಹೊರಟ ಅಂತಃಕರಣ ಪವಾಡಸದೃಶ್ಯವಾಗಿ ಜಗತ್ತಿನ ಮೇಲೆ ಪ್ರಭಾವ ಬೀರುತ್ತ ನಮ್ಮ ಬದುಕನ್ನೂ ಧನಾತ್ಮಕಗೊಳಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.