ವಿನೋದ ಪ್ರಜ್ಞೆ ಶೋಷಕರ ಕೈಯಲ್ಲಿದ್ದಾಗ ಭಯಂಕರ ಹಿಂಸೆಯ ಅಸ್ತ್ರವಾಗಬಲ್ಲದಾದರೆ ಶೋಷಿತರಿಗೆ ಉತ್ಸಾಹ ತುಂಬುವ ಸಂಜೀವಿನಿ… | ಚಿದಂಬರ ನರೇಂದ್ರ
ವಿನೋದ ಪ್ರಜ್ಞೆ ( sense of humour) ಬದುಕಿಗೆ ಬಹಳ ಅವಶ್ಯಕವಾದದ್ದು. ಆದರೆ ಇದರ ಗಡಿಗಳು ಬಹಳ ಸೂಕ್ಷ್ಮ. ಯಾವಾಗ ಯಾವುದು ಯಾರಿಗೆ ಇದು ಪ್ರಿಯವಾಗುತ್ತದೆ ಯಾರಿಗೆ ನೋವುಂಟು ಮಾಡುತ್ತದೆ ಎನ್ನುವುದನ್ನ ಹೇಳುವುದು ಬಹಳ ಕಷ್ಟ. ಇಲ್ಲಿ ವಿವೇಕದ ಪಾತ್ರ ಬಹಳ ದೊಡ್ಡದು. ಶೋಷಕರ ಕೈಯಲ್ಲಿದ್ದಾಗ ಭಯಂಕರ ಹಿಂಸೆಯ ಅಸ್ತ್ರವಾಗಬಲ್ಲದಾದರೆ ಶೋಷಿತರಿಗೆ ಉತ್ಸಾಹ ತುಂಬುವ ಸಂಜೀವಿನಿ. ಮೊನ್ನೆ ಒಂದು ವಿಡಿಯೋ ನೋಡುತ್ತಿದ್ದಾಗ ಕವಿ ಜಾವೇದ್ ಅಖ್ತರ್ ಹೇಳಿದ ಮಾತು ಮುಖ್ಯ ಅನಿಸಿದ್ದರಿಂದ ಇಲ್ಲಿ ಅದನ್ನ ಹಂಚಿಕೊಳ್ಳುತ್ತಿದ್ದೇನೆ.
ಜಾವೇದ್ ಹೇಳುತ್ತಾರೆ…
ಸೆನ್ಸ್ ಆಫ್ ಹ್ಯೂಮರ್ ಎನ್ನುವುದು ವಾಹನದ shock absorber ಇದ್ದ ಹಾಗೆ, ಸರಳ ಸುಗಮ ರಸ್ತೆಯಲ್ಲಿ ಇದರ ಅವಶ್ಯಕತೆ ಇರುವುದಿಲ್ಲ. ಯಾವಾಗ ರಸ್ತೆ ಕಠಿಣವಾಗತೊಡಗುತ್ತದೆಯೋ, ಯಾವಾಗ ರಸ್ತೆಯಲ್ಲಿ ಹಳ್ಳ ದಿನ್ನೆಗಳು ಕಾಣಿಸತೊಡಗುತ್ತದೆಯೋ ಆಗ shock absorber ಕಾರ್ಯಾಚರಣೆಗೆ ಇಳಿಯುತ್ತದೆ. Sense of humour ಕೂಡ ಹಾಗೆಯೇ. ಬದುಕು ಕಠಿಣವಾಗತೊಡಗಿದಾಗ ನಮ್ಮ ಸಹಾಯಕ್ಕೆ ಬರುತ್ತದೆ, ನಮ್ಮ ಮೇಲಿನ ಬದುಕಿನ ಕಷ್ಟಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ.

