ರಾಜ್ ಕುಮಾರ್ ರ ನಿಷ್ಕಲ್ಮಷ ಮುಗ್ಧ ಮನಸ್ಸನ್ನು ವಿವರಿಸುತ್ತ ಜಯಂತ್ ಕಾಯ್ಕಿಣಿ ಅವರು ನೆನಪಿಸಿಕೊಂಡ ಪ್ರಸಂಗ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ರಾಜ್ ಅವರ ಪ್ರೊಡಕ್ಷನ್ ಕಾರಂತರ ಚಿಗುರಿದ ಕನಸು ಸಿನೆಮಾ ಮಾಡಬೇಕು ಅಂತ ಯೋಚಿಸಿದಾಗ ಅದಕ್ಕೆ ಸ್ರಿಪ್ಟ್ ರೆಡಿ ಮಾಡಲು ಜಯಂತ್ ಅವರನ್ನ ಕೇಳಿಕೊಳ್ಳುತ್ತಾರೆ. ಕಾದಂಬರಿಯಲ್ಲಿ ಹೀರೋ ಅಪ್ಪನ ಪಾತ್ರ (ಅನಂತ್ ನಾಗ್ ನಟಿಸಿದ್ದು) ಕುರುಡಿಯೊಬ್ಬಳನ್ನು ಮದುವೆಯಾಗಲು ನಿರಾಕರಿಸಿ ದಿಲ್ಲಿಗೆ ಓಡಿಹೋಗುತ್ತಾನೆ. ಇದು ಪಾತ್ರಕ್ಕೆ ಅಷ್ಟು ಸೂಕ್ತ ಆಗಲ್ಲ ಬೇರೆ ಏನಾದರೂ ಥಿಂಕ್ ಮಾಡಿ ಅಂತ ಜಯಂತ್ ಅವರನ್ನ ಕೇಳಿಕೊಳ್ಳಲಾಗತ್ತೆ.
ಮರುದಿನ ಜಯಂತ್ ಗೆ ಒಂದು ಐಡಿಯಾ ಹೊಳೆದು ಅವರು ಅದನ್ನ ರಾಜ್ ಗೆ ಹೇಳುತ್ತಾರೆ. ಹುಡುಗಿನ ಕುರುಡಿ ಮಾಡೋದು ಬೇಡ. ಅವಳನ್ನ ಪುಟ್ಟ ಹುಡುಗಿ ಮಾಡೋಣ, ಅನಂತ್ ನಾಗ್ ಪಾತ್ರ ಆ ಹುಡುಗಿನ ಚಿಕ್ಕಂದಿನಿಂದ ಆಡಿಸಿ ಬೆಳೆಸುವ ಹಾಗೆ. ತಾನೇ ಎತ್ತಿ ಆಡಿಸಿ ಬೆಳೆಸಿದ ಹುಡುಗಿನ ಮದುವೆ ಆಗಲಿಕ್ಕೆ ಒತ್ತಾಯ ಮಾಡಿದಾಗ ಆ ಪಾತ್ರ ಮದುವೆಗೆ ನಿರಾಕರಿಸಿ ದಿಲ್ಲಿಗೆ ಓಡಿ ಹೋಗುವಂತೆ ಮಾಡೋಣ ಅಂತ.
ಈ ಐಡಿಯಾ ಕೇಳಿದ ಕೂಡಲೇ ರಾಜ್ ಬಹಳ ಭಾವುಕರಾಗಿಬಿಟ್ಟರಂತೆ, “ ಆಹಾ ಎಂಥ ಒಳ್ಳೆಯ ಕೆಲಸ ಮಾಡಿದಿರಿ, ಇಲ್ದೇ ಹೋಗಿದ್ರೆ ಆ ಕುರುಡು ಹುಡುಗಿ ಬದುಕಿನಲ್ಲಿ ಬಹಳ ಕಷ್ಟಪಟ್ಟಿರೋಳು” ಅಂತ ಕಣ್ತುಂಬಿಕೊಂಡರಂತೆ.

