ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಅದು ಬೇಗಂ ಅಖ್ತರ್ ಅವರ ಸಂಗೀತ ಕಾರ್ಯಕ್ರಮ. ಅಂದು ಬೇಗಂ ಅಖ್ತರ್ ಅದ್ಭುತವಾಗಿ 2 ಗಂಟೆ ಹಾಡಿದರು. ಅವರು ಹಾಡು ಮುಗಿಸಿದ ಮೇಲೆ ಯಾರೊಬ್ಬರೂ ಚಪ್ಪಾಳೆ ಬಾರಿಸಲಿಲ್ಲ. ಇದನ್ನು ಗಮನಿಸಿದ ತಬಲಾವಾದಕನಿಗೆ ಬಹಳ ಕಸಿವಿಸಿ ಆಯಿತು. ಅವನು ಬೇಗಂ ಅವರನ್ನು ಪ್ರಶ್ನೆ ಮಾಡಿದ,
“ಎಂಥ ಸನ್ನಾಟಾ (ನಿರವ) ಇದು. ಇಲ್ಲಿಯ ಜನಕ್ಕೆ ಸಂಗೀತದ ಅಭಿರುಚಿ ಇಲ್ಲವೆ? ಒಬ್ಬರೂ ಚಪ್ಪಾಳೆ ಬಾರಿಸಲಿಲ್ಲ”
“ ಇಂಥ ಒಂದು ಗಾಢ ಮೌನಕ್ಕಾಗಿಯೇ ಅಲ್ಲವೇ ನಾವೆಲ್ಲ ಹಾಡೋದು. ಇಂದು ನನ್ನ ಹಾಡು ಸಾರ್ಥಕವಾಯಿತು” ಬೇಗಂ ಅಖ್ತರ್ ಆ ಸನ್ನಾಟಾ ದ ಅರ್ಥ ವಿವರಿಸಿ ಹೇಳಿದರು.

