ಒಮ್ಮೆ ನೀವು ನಿರೀಕ್ಷೆ ಮಾಡಲು ಶುರು ಮಾಡುವಿರಾದರೆ, ಎಲ್ಲವೂ ನಾಶವಾಗುತ್ತ ಹೋಗುತ್ತದೆ. Drop the past ; ಇದು ಪ್ರತಿಕ್ಷಣ ಸಾಯುವ ಏಕೈಕ ಮಾರ್ಗ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್ ತಬ್ರೀಝಿ
***********************
ಯಾವಾಗ ಎಲ್ಲವೂ ಅಚಾನಕ್ ಆಗಿ ಸಂಭವಿಸಲು ಶುರು ಆಗುತ್ತದೆಯೋ ಆಗ ಎಲ್ಲವೂ ಹೊಸತಾಗಿ ಕಾಣಲು ಆರಂಭವಾಗುತ್ತದೆ. ಇದು ಬದುಕಿಗೆ ತಾಜಾತನವನ್ನು ತಂದುಕೊಡುತ್ತದೆ ; ತಾಜಾ ಗಾಳಿ ನಿರಂತರವಾಗಿ ಬೀಸುತ್ತ ಬದುಕಿನ ಮೇಲೆ ಧೂಳು ಕೂಡಲು ಅವಕಾಶ ಮಾಡಿಕೊಡುವುದಿಲ್ಲ. ಯಾವಾಗ ನಿಮ್ಮ ಬಾಗಿಲುಗಳು, ಕಿಟಕಿಗಳು ಸದಾ ತೆರೆದಿರುತ್ತವೆಯೋ ಆಗ ಬೆಳಕು ಒಳಗೆ ಬರುತ್ತದೆ, ಗಾಳಿ ಒಳಗೆ ಬರುತ್ತದೆ, ಪರಿಮಳ ಒಳಗೆ ಬರುತ್ತದೆ, ಎಲ್ಲವೂ ಅಚಾನಕ್ ಆಗಿ. ಇವುಗಳಿಗಾಗಿ ನೀವು ಯಾವತ್ತೂ ಕೇಳಿಕೊಂಡಿರಲಿಲ್ಲ ಆದರೆ ಅಸ್ತಿತ್ವ ನಿಮ್ಮ ಮೇಲೆ ಅವುಗಳ ಮಳೆಗರೆಯುತ್ತ ಹೋಗುತ್ತದೆ.
ಬದುಕು ಎಷ್ಟು ಸುಂದರ, ಎಷ್ಟು ಅದ್ಭುತ, ಎಷ್ಟು ಹೊಸತು, ಎಷ್ಟು ಅಪರೂಪ ಎಂದರೆ ಇದನ್ನ ನೀವು ಕನಸು ಮನಸಿನಲ್ಲೂ ಯೋಚಿಸಿರುವುದು ಸಾಧ್ಯವಿರುವುದಿಲ್ಲ. ಹೌದು, ನೀವು ಕಲ್ಪಿಸಿಕೊಳ್ಳುವ ಯಾವ ಸಾಹಸಕ್ಕಿಂತಲೂ ಬದುಕು ಹೆಚ್ಚಿನಮಟ್ಟದ ಸಾಹಸ. ಬದುಕು ಯಾವಾಗಲೂ ಅಜ್ಞಾತವನ್ನು ತನ್ನ ಗರ್ಭದಲ್ಲಿ ಹೊತ್ತುಕೊಂಡ ಗರ್ಭಿಣಿ.
ಒಮ್ಮೆ ನೀವು ನಿರೀಕ್ಷೆ ಮಾಡಲು ಶುರು ಮಾಡುವಿರಾದರೆ, ಎಲ್ಲವೂ ನಾಶವಾಗುತ್ತ ಹೋಗುತ್ತದೆ. Drop the past ; ಇದು ಪ್ರತಿಕ್ಷಣ ಸಾಯುವ ಏಕೈಕ ಮಾರ್ಗ. ಯಾವತ್ತೂ ಭವಿಷ್ಯಕ್ಕಾಗಿ ಪ್ಲಾನ್ ಮಾಡಬೇಡಿ ; ಇದು ಮಾತ್ರ ಬದುಕಿಗೆ ನಿಮ್ಮ ಮೂಲಕ ಹರಿದು ಹೋಗಲು ಅವಕಾಶ ಮಾಡಿಕೊಡುವ ವಿಧಾನ. ಆಗ ಮಾತ್ರ ನೀವು unfrozen ಆದ ಸದಾ ಹರಿವಿನ ಸ್ಥಿತಿಯಲ್ಲಿ ಇರುತ್ತೀರಿ. ಒಬ್ಬ ಧ್ಯಾನಸ್ಥ ಮನುಷ್ಯ ಬದುಕುವುದು ಹೀಗೆ – ಎಲ್ಲ ಭೂತ ಭವಿಷ್ಯಗಳಿಂದ ಹೊರತಾಗಿ, ಕೇವಲ ಈ ಕ್ಷಣದಲ್ಲಿ ಮಾತ್ರ ಬದುಕುತ್ತ, ತೀವ್ರ ಜೀವಂತಿಕೆಯಿಂದ, ಎರಡೂ ಬದಿಯಿಂದ ಉರಿಯುತ್ತಿರುವ ಜ್ವಾಲೆಯಂತೆ, ಎರಡೂ ತುದಿಯಲ್ಲಿ ಹೊತ್ತಿಕೊಂಡಿರುವ ಟಾರ್ಚ್ ನಂತೆ. This is what let-go is.
ಜುವಾಂಗ್-ತ್ಸೆ ಇಬ್ಬರು ಕುರಿಗಾಹಿಗಳ ಕುರಿತಾದ ಕಥೆಯೊಂದನ್ನ ಹೇಳುತ್ತಾನೆ.
ಹಳೆಯ ಚೈನಾದಲ್ಲಿ ಇಬ್ಬರು ಕುರಿಗಾಹಿ ಗೆಳೆಯರಿದ್ದರು. ಒಬ್ಬನ ಹೆಸರು ಝಾಂಗ್ ಇನ್ನೊಬ್ಬನ ಹೆಸರು ಗೂ.
ಝಾಂಗ್ ಗೆ ಜೂಜಿನ ಹುಚ್ಚು. ಕುರಿಗಳನ್ನು ಮೇಯಲು ಬಿಟ್ಟು ಗೆಳೆಯರೊಡನೆ ಜೂಜಾಟಕ್ಕೆ ಕುಳಿತುಬಿಡುತ್ತಿದ್ದ.
ಗೂ, ತುಂಬಾ ಗಂಭೀರ ಮನುಷ್ಯ. ಅವನಿಗೆ ಹೊಸ ಹೊಸ ವಿಷಯಗಳನ್ನು ಓದಿ ತಿಳಿದುಕೊಳ್ಳುವ ಹುಚ್ಚು. ಅವನು ಕುರಿಗಳನ್ನು ಮೇಯಲು ಬಿಟ್ಟು ಪುಸ್ತಕ ಓದುತ್ತ ಕಾಲ ಕಳೆಯುತ್ತಿದ್ದ.
ಒಂದು ದಿನ ಝಾಂಗ್ ಗೆಳೆಯರೊಡನೆ ಜೂಜಾಟದಲ್ಲಿ ಮೈಮರೆತುಬಿಟ್ಟಿದ್ದ. ಅಂದು ಸಂಜೆ ಅವನ ಒಂದು ಕುರಿ ವಾಪಸ್ ಬರಲೇ ಇಲ್ಲ. ಎಲ್ಲೋ ದಾರಿ ತಪ್ಪಿಸಿಕೊಂಡುಬಿಟ್ಟಿತ್ತು.
ಅದೇ ದಿನ, ಗೂ ತನ್ನ ಬದುಕನ್ನು ಸುಧಾರಿಸುವ ಒಂದು ಒಳ್ಳೆಯ ಪುಸ್ತಕದ ಓದಿನಲ್ಲಿ ಮಗ್ನನಾಗಿಬಿಟ್ಟಿದ್ದ
ಅವನ ಒಂದು ಕುರಿಯೂ ವಾಪಸ್ ಬರಲಿಲ್ಲ.

