ಪ್ರ್ಯಾಕ್ಟೀಸ್ ಮಾಡುವುದು ಸಾಧ್ಯವಾಗದೇ ಹೋದರೆ, ಯಾವ ಅರಿವೂ ಸಾಧ್ಯವಾಗದೇ ದಿನಗಳೂ ತಿಂಗಳುಗಳೂ ಹಾರಿ ಹೋಗುತ್ತವೆ. ಮತ್ತು ನಾವು ನಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡುಬಿಡುತ್ತೇವೆ. ಪೂರ್ಣವಾಗಿ ವರ್ತಮಾನದಲ್ಲಿ ಬದುಕಲು ನಮಗೆ ಸ್ಟಾಪಿಂಗ್ ಸಹಾಯ ಮಾಡುತ್ತದೆ ~ Thich Nhat Hanh । ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ
ಯಾರನ್ನೋ, ಯಾವುದನ್ನೋ
ಒಲಿಸಿಕೊಳ್ಳುವ ಪ್ರಯತ್ನವಲ್ಲ.
ಧ್ಯಾನ
ನಿಮ್ಮ ನಿಜದ ಹಾಜರಾತಿಯನ್ನು
ನಿಮಗೆ ಅರ್ಪಿಸಿಕೊಳ್ಳುವ ವಿಧಾನ
ಪ್ರತೀ ಕ್ಷಣ.
ಮೈಂಡ್ ಫುಲ್ ಆಗಿರುವುದು ಎಂದರೆ ನಮ್ಮ ನಮ್ಮ ಆಶ್ರಮಗಳಲ್ಲಿ, ವಿಶ್ರಾಂತಿ ತಾಣಗಳಲ್ಲಿ ಕುಶನ್ ಮೇಲೆ ಕುಳಿತುಕೊಂಡು ಗಂಟೆಗಟ್ಟಲೆ ಧ್ಯಾನ ಮಾಡುವುದು ಎಂದೇನೂ ಅಲ್ಲ. ಮೈಂಡ್ ಫುಲ್ ನೆಸ್ ನ ನಮ್ಮ ಬದುಕಿನ ಜೊತೆ ಸೇರಿಸಿಕೊಂಡು ಪ್ರ್ಯಾಕ್ಟೀಸ್ ಮಾಡಲು ಹಲವಾರು ವಿಧಾನಗಳಿವೆ.
ಪ್ರಜ್ಞಾಪೂರ್ವಕ ಉಸಿರಾಟದ ಹೊರತಾಗಿ ನಾವು ವಾಕಿಂಗ್ ಮೆಡಿಟೇಶನ್ ಮಾಡಬಹುದು, ಸಿಟಿಂಗ್ ಮೆಡಿಟೇಶನ್ ಮಾಡಬಹುದು, ಸ್ಮೈಲಿಂಗ್, ಮೈಂಡ್ ಫುಲ್ ಲಿಸನಿಂಗ್, ಮೈಂಡ್ ಫುಲ್ ಸ್ಪೀಕಿಂಗ್, ಮೈಂಡ್ ಫುಲ್ ವರ್ಕಿಂಗ್ ಹೀಗೆ ಹಲವಾರು ವಿಧಾನಗಳನ್ನು ಅನುಸರಿಸಬಹುದು. ನಮ್ಮ ಬದುಕಿನ ಪ್ರತಿ ಆ್ಯಕ್ಟಿವಿಟಿಯಲ್ಲೂ ಆಳವಾಗಿ ಏಕಾಗ್ರತೆಯಿಂದ ಭಾಗವಹಿಸುವುದರ ಮೂಲಕ ನಾವು ಮೈಂಡ್ ಫುಲ್ ನೆಸ್ ನ ಸಾಧಿಸಬಹುದು.
ವಾಕಿಂಗ್ ಮಾಡುವಾಗ ಕೂಡ ನಾವು ಸ್ಟಾಪಿಂಗ್ ನ ಪ್ರ್ಯಾಕ್ಟಿಸ್ ಮಾಡಬಹುದು. ನಾವು ಹೇಗೆ ವಾಕ್ ಮಾಡಬೇಕು ಎಂದರೆ ನಾವು ಪ್ರತಿ ಹೆಜ್ಜೆಯನ್ನಿಟ್ಟಾಗಲೂ ನಮ್ಮೊಳಗೆ ಬಂದು ತಲುಪಿದ ಭಾವ ಇರಬೇಕೇ ವಿನಹ ನಮ್ಮ ಹೆಜ್ಜೆ ಸುಮ್ಮನೇ ಎಲ್ಲೋ ಹೋಗುವ ಸಲುವಾಗಿನ ಹಾಗೆ ಇರಬಾರದು. ನಮ್ಮ ವಾಕ್ ಹೇಗಿರಬೇಕೆಂದರೆ ನಾವು ನಮ್ಮ ಪ್ರತಿ ಹೆಜ್ಜೆಯನ್ನೂ ಆನಂದದಿಂದ ಅನುಭವಿಸಬೇಕು. ನಾವು ಈ-ಮೇಲ್ ನೋಡುವಾಗ, ಇಂಟರ್ ನೆಟ್ ಸರ್ಫ್ ಮಾಡುವಾಗ, ಮೀಟಿಂಗ್ ಗಳನ್ನ, ಅಪೊಯಿಂಟ್ ಮೆಂಟ್ ಗಳನ್ನು ಅಟೆಂಡ್ ಮಾಡುವಾಗ, ಬಟ್ಟೆ ಮಡಿಚುವಾಗ, ಪಾತ್ರೆ ತೊಳೆಯುವಾಗ ಅಥವಾ ಸ್ನಾನ ಮಾಡುವಾಗ, ಸ್ಟಾಪಿಂಗ್ ನ ಪ್ರ್ಯಾಕ್ಟೀಸ್ ಮಾಡಬಹುದಾದರೆ ನಾವು ಬದುಕನ್ನ ಆಳವಾಗಿ ಬದುಕುತ್ತಿದ್ದೇವೆ.
ಹೀಗೆ ಪ್ರ್ಯಾಕ್ಟೀಸ್ ಮಾಡುವುದು ಸಾಧ್ಯವಾಗದೇ ಹೋದರೆ, ಯಾವ ಅರಿವೂ ಸಾಧ್ಯವಾಗದೇ ದಿನಗಳೂ ತಿಂಗಳುಗಳೂ ಹಾರಿ ಹೋಗುತ್ತವೆ. ಮತ್ತು ನಾವು ನಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡುಬಿಡುತ್ತೇವೆ. ಪೂರ್ಣವಾಗಿ ವರ್ತಮಾನದಲ್ಲಿ ಬದುಕಲು ನಮಗೆ ಸ್ಟಾಪಿಂಗ್ ಸಹಾಯ ಮಾಡುತ್ತದೆ.
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.
ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.
ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.
“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.
“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ” ಮೊದಲ ಶಿಷ್ಯ ಕೇಳಿದ.
“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.
“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.

