ಹಾಡುಗಾರ ಜುಬೀನ್ ನೌತಿಯಾಲ್ ಒಂದು ವಿಚಿತ್ರ ಆದರೂ ಅಪರೂಪದ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಒಮ್ಮೆ ಪ್ರಸಿದ್ಧ ಗಜಲ್ ಹಾಡುಗಾರ ಮೆಹದಿ ಹಸನ್ ಮದ್ಯಪಾನ ಮಾಡಿ ಹಾಡಲು ಸ್ಟೇಜ್ ಮೇಲೆ ಹೋಗಿದ್ದರು. ಇದು ಪ್ರೇಕ್ಷಕರಿಗೆ ಗೊತ್ತಾಗಿ ದೊಡ್ಡ ಗೊಂದಲ ಉಂಟಾಗಿತ್ತು. ಈ ಘಟನೆಯ ನಂತರ ಮೆಹದಿಯವರಿಗೆ ತುಂಬ ಕಷ್ಟಗಳು ಎದುರಾದವು. ಈ ವಿಷಯ ಇಟ್ಟುಕೊಂಡು ಕೆಲ ಜನ ಅವರ ವಿರುದ್ಧ ಮುಂದೆ ಮಸಲತ್ತು ಮಾಡತೊಡಗಿದರು.
ಈ ವಿಷಯ ಇನ್ನೊಬ್ಬ ಪ್ರಸಿದ್ಧ ಗಜಲ್ ಹಾಡುಗಾರ ಗುಲಾಂ ಅಲಿಯವರಿಗೆ ಗೊತ್ತಾಯಿತು. ಆ ಕಾಲದಲ್ಲಿ ಮೆಹದಿ ಹಸನ್ ಮತ್ತು ಗುಲಾಂ ಅಲಿಯವರನ್ನು ಸ್ಪರ್ಧಿಗಳು ಎಂದೇ ಬಿಂಬಿಸಲಾಗುತ್ತಿತ್ತು. ಆದರೆ ಗುಲಾಂ ಅಲಿಯವರಿಗೆ ಮೆಹದಿ ಹಸನ್ ಎಂಥ ದೊಡ್ಡ ಕಲಾವಿದ ಎನ್ನುವುದು ಗೊತ್ತಿತ್ತು. ಮೆಹದಿ ಅವರನ್ನು ಗುಲಾಂ ಅಲಿ ತಮ್ಮ ಆದರ್ಶ ಎಂದು ತಿಳಿದುಕೊಂಡಿದ್ದರು.
ಮೆಹದಿ ಅವರ ಬಗ್ಗೆ ಜನ ಕೆಟ್ಟದಾಗಿ ಮಾತನಾಡಿಕೊಳ್ಳುವುದನ್ನ ಕೇಳಿ ಗುಲಾಂ ಅಲಿಯವರಿಗೆ ಬಹಳ ನೋವಾಯಿತು. ಈ ಜನರ ಬಾಯಿ ಮುಚ್ಚಿಸುವುದಕ್ಕಾಗಿಯೇ ಗುಲಾಂ ಅಲಿ, ಅಕ್ಬರ್ ಅಲಹಾಬಾದಿಯವರ ಗಜಲ್ ಒಂದನ್ನು ಕಂಪೋಸ್ ಮಾಡಿ ಮನದುಂಬಿ ಹಾಡಿದರು. ಅದು ಅವರು ತಮ್ಮ ಆರಾಧ್ಯ ದೈವಕ್ಕೆ ಸಲ್ಲಿಸಿದ ಮರ್ಯಾದೆ ಆಗಿತ್ತು. ಗುಲಾಂ ಅಲಿ ಕಂಪೋಸ್ ಮಾಡಿ ಹಾಡಿದ ಆ ಗಜಲ್ ಯಾವುದು ಗೊತ್ತೆ?
ಹಂಗಾಮಾ ಹೈ ಕ್ಯೂಂ ಬರ್ಪಾ ಥೋಡಿ ಸಿ ಜೋ ಪೀ ಲೀ ಹೈ
ಡಾಕಾ ತೋ ನಹೀ ಮಾರಾ ಚೋರಿ ತೋ ನಹೀಂ ಕೀ ಹೈ
ಕನ್ನಡದಲ್ಲಿ ಸರಳ ಅನುವಾದ ಹೀಗಿದೆ……
ಯಾಕಿಷ್ಟು ಸದ್ದು ಗದ್ದಲ ಕೊಂಚ ಮಾತ್ರ ಕುಡಿದಿದ್ದೇನೆ ನಾನು
ದರೋಡೆ ಅಲ್ಲ , ಯಾವ ಕಳ್ಳತನವನ್ನೂ ಮಾಡಿಲ್ಲ ನಾನು

