ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಸಂದರ್ಶಕ : ಮಹಮ್ಮದ್ , ಒಬ್ಬ ನಿಗ್ರೋ ಹುಡುಗನಾಗಿ…..
ಮಹಮ್ಮದ್ ಅಲಿ : (ಸಂದರ್ಶಕನ ಮಾತು ಕಟ್ ಮಾಡುತ್ತ) ನಿಗ್ರೋ ಅಲ್ಲ, ಕಪ್ಪು ಹುಡುಗ ಅಂತ ಬೇಕಾದರೆ ಹೇಳಿ.
ಸಂದರ್ಶಕ : ಸರಿ, ಆದರೆ ಎರಡೂ ಒಂದೇ ಅಲ್ಲವೆ?
ಮಹಮ್ಮದ್ ಅಲಿ : ಜನರನ್ನ ಅವರ ದೇಶದ ಮೂಲಕ ಗುರುತಿಸಲಾಗುತ್ತದೆ. ಅಮೇರಿಕನ್ನರನ್ನ ಅಮೇರಿಕೆಯಿಂದ ಗುರುತಿಸಲಾಗುತ್ತದೆ, ಜಪಾನಿಯರನ್ನ ಜಪಾನ್ ನಿಂದ ಗುರುತಿಸಲಾಗುತ್ತದೆ, ಐರಿಶ್ ರನ್ನ ಐರ್ಲೆಂಡ್ ಮೂಲಕ ಗುರುತಿಸಲಾಗುತ್ತದೆ, ಫ್ರೆಂಚರನ್ನ ಫ್ರಾನ್ಸ್ ಮೂಲಕ ಗುರುತಿಸಲಾಗುತ್ತದೆ, ಕ್ಯೂಬನ್ಸ್ ನ ಕ್ಯೂಬಾ ಕಾರಣವಾಗಿ ಗುರುತಿಸಲಾಗುತ್ತದೆ ಆದರೆ ನಿಗ್ರೋ ಅಂತ ಯಾವ ದೇಶವೂ ಇಲ್ಲ.
ಸಂದರ್ಶಕ : ಮಹಮ್ಮದ್ ನೀನು ಹೇಳ್ತಾ ಇರೋದು ಅರ್ಥ ಆಯ್ತು. ಕ್ಷಮಿಸು.

