ಅತ್ತ ಶರ್ಮರಿಗೆ, ಇತ್ತ ಲಂಕೇಶರಿಗೆ, ಇಬ್ಬರಿಗೂ ಸಲಹೆ ಕೊಟ್ಟ ವರಕವಿ ಬೇಂದ್ರೆ! ~ ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಹಿಂದೊಮ್ಮೆ ಧಾರವಾಡದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯಲ್ಲಿ ಒಂದು ಕವಿಗೋಷ್ಟಿ ನಡೆಯಿತಂತೆ. ನವ್ಯದ ಪ್ರಖರ ಕವಿಗಳಾದ ರಾಮಚಂದ್ರ ಶರ್ಮ ಮತ್ತು ಲಂಕೇಶ್, ಬೇಂದ್ರೆಯವರ ಸಮ್ಮುಖದಲ್ಲಿ ಕವನ ವಾಚನ ಮಾಡ್ತಾರೆ.
ಕವಿಗೋಷ್ಟಿ ಮುಗಿದ ನಂತರ ಬೇಂದ್ರೆಯವರು, ಶರ್ಮ ಮತ್ತು ಲಂಕೇಶ್ ರನ್ನು ಕರೆದು ಹೀಗೆ ಪ್ರತಿಕ್ರಯಿಸುತ್ತಾರೆ.
“ನೋಡು ಲಂಕೇಶಪ್ಪ, ಈ ಶರ್ಮ ಎಷ್ಟ್ ಛಂದ ಕವಿತಾ ಓದ್ತಾನ, ಅವ್ನ್ ನೋಡಿ ಒಂದಿಷ್ಟು ಕಲಿ “. ಲಂಕೇಶ್ ರ ಮುಖ ಸಪ್ಪಗಾಯಿತು. ಶರ್ಮರ ಕಣ್ಣಲ್ಲಿ ತುಂಟ ನಗೆ.
ಬೇಂದ್ರೆ ಮುಂದುವರೆದು ಶರ್ಮರಿಗೆ ಹೇಳಿದರಂತೆ, “ನೋಡು ಶರ್ಮ, ಈ ಲಂಕೇಶಾ ಎಷ್ಟ ಛಂದ ಕವಿತಾ ಬರಿತಾನ, ಅವ್ನ ನೋಡಿ ಒಂದಿಷ್ಟು ಕಲಿ” ಈಗ ಖುಶಿಪಡುವ ಸರದಿ ಲಂಕೇಶರದ್ದು.
ಬೇಂದ್ರೆಯವರ ಸುತ್ತ ನೂರಾರು ದಂತ ಕಥೆಗಳಿವೆ. ಈ ಕಥೆ ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೂ ಒಂದ್ ಥರ ಮಜವಾಗಿದೆ.

