ಧಾರವಾಡ ಸಾಹಿತ್ಯ ಸಂಭ್ರಮದ ವಿಡಿಯೋ ನೋಡ್ತಾ ಇದ್ದೆ. ಎಚ್ ಎಸ್ ವಿ ಮತ್ತು ಕಣವಿಯವರು ಕಾವ್ಯ ಕಟ್ಟುವ ಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದರು. ಅದರಲ್ಲಿ ಎಚ್ ಎಸ್ ವಿ ಯವರು ಹೇಳುವ ಈ ಮಾತು ಕೇಳಿ… । ಚಿದಂಬರ ನರೇಂದ್ರ
“ಕವಿ, ತನ್ನ ಕವಿತೆಯಲ್ಲಿ ಡೈರೆಕ್ಟಾಗಿ ಕೋಗಿಲೆಯನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಬಾರದು, ಕೋಗಿಲೆ ಉಸಿರುಗಟ್ಟಿ ಸತ್ತು ಹೋಗುತ್ತದೆ. ಅದರ ಬದಲಿಗೆ ಕವಿತೆ ಅನ್ನೊ ಒಂದು ಮರವನ್ನು, ಫಲವತ್ತಾಗಿ ಬೆಳೆಸಬೇಕು. ಆಗ ಕೋಗಿಲೆ ತಾನೇ ಆ ಮರದಲ್ಲಿ ಬಂದು ಕೂತು ಹಾಡುತ್ತದೆ”
ತುಂಬಾ ಇಂಟರೆಸ್ಟಿಂಗ್ ಅನಿಸ್ತು ಈ ಮಾತು ಅಲ್ವಾ?

