ಚೇನ್ ರಿಯಾಕ್ಷನ್: ಓಶೋ 365 Day#12


ಎಲ್ಲ ಸಂಗತಿಗಳು ಕೂಡಿಯೇ ಸಂಭವಿಸುತ್ತಿರುತ್ತವೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಯಾವಾಗ ನಿಮಗೆ ನೀವು ಕಡಿಮೆ ತಪ್ಪಿತಸ್ಥ ಅನ್ನಿಸುತ್ತದೆಯೋ ಆ ತಕ್ಷಣ ನೀವು ಹೆಚ್ಚು ಖುಶಿಯನ್ನು ಅನುಭವಿಸುತ್ತೀರಿ.  ಯಾವಾಗ ನೀವು ಹೆಚ್ಚು ಖುಶಿಯಾಗಿರುತ್ತೀರೋ ಆಗ ನೀವು  ಕಡಿಮೆ ಬಿಕ್ಕಟ್ಟುಗಳನ್ನು ಅನುಭವಿಸುತ್ತಿರಿ, ಇನ್ನೊಬ್ಬರ ಜೊತೆ ಹೆಚ್ಚು ಸೌಹಾರ್ದತೆಯನ್ನು ಹೊಂದುತ್ತೀರಿ. ಯಾವಾಗ ಇನ್ನೊಬ್ಬರ ಜೊತೆ ನಿಮಗೆ ಸೌಹಾರ್ದ ಸಾಧ್ಯವಾಗುತ್ತದೆಯೋ ಆಗ ನೀವು ನಿಮ್ಮ ಸುತ್ತಲೂ ಒಂದು ಬಗೆಯ ಗ್ರೇಸ್ ನ ಅನುಭವಿಸುತ್ತೀರಿ. ಈ ಸಂಗತಿಗಳು ಸಂಭವಿಸುವುದು ಒಂದು ರೀತಿಯ chain reaction ನ ಹಾಗೆ.  ಒಂದು ಇನ್ನೊಂದನ್ನು ಸ್ಟಾರ್ಟ್ ಮಾಡುತ್ತದೆ ಮತ್ತು ಇನ್ನೊಂದು ಮತ್ತೊಂದನ್ನ : ಮತ್ತು ಅವು ಹರಡಿಕೊಳ್ಳುತ್ತಲೇ ಹೋಗುತ್ತವೆ.

ನಿಮಗೆ ಕಡಿಮೆ ತಪ್ಪಿತಸ್ಥ ಭಾವ ಇರುವುದು ಬಹಳ ಮಹತ್ವದ್ದು. ಇದನ್ನು ಮಾಡಬೇಕು, ಅದನ್ನು ಮಾಡಬಾರದು ಎಂದು ಶತಮಾನಗಳ ಕಂಡಿಷನಿಂಗ್ ಮಾನವತೆಯನ್ನು ತಪ್ಪಿತಸ್ಥ ಭಾವಕ್ಕೆ ದೂಡಿದೆ. ಅಷ್ಟೇ ಅಲ್ಲ, ನೀವು ಏನಾದರೂ ಮಾಡಿದರೆ ಅದು ಚರ್ಚ್ ಗೆ ಒಪ್ಪಿತವಲ್ಲ, ಸಮಾಜಕ್ಕೆ ಒಪ್ಪಿತವಲ್ಲ, ಆಗ ನೀವು ಪಾಪಿಗಳು ಎಂದು ಎಂದು ಜನರ ಮೇಲೆ ಒತ್ತಾಯ ಹೇರಲಾಗುತ್ತದೆ. ಚರ್ಚ ಮತ್ತು ಸಮಾಜಕ್ಕೆ ಒಪ್ಪಿತವಾದದ್ದನ್ನು ನೀವು ಮಾಡುವಿರಾದರೆ ಆಗ ನಿಮ್ಮನ್ನು ಸಂತರು ಎಂದು ಗೌರವಿಸಲಾಗುತ್ತದೆ. ಹಾಗಾಗಿ ಸಮಾಜ ಮಾಡು ಎನ್ನುವುದನ್ನ ಮಾಡುವ ಮೂರ್ಖತನಕ್ಕೆ ಜನ ಒಳಗಾಗಿದ್ದಾರೆ. ಯಾರೂ ನಿಮಗೆ ಏನು ಮಾಡಬೇಕು ಎಂದು ಅನಿಸುತ್ತದೆ ಎನ್ನುವ ಬಗ್ಗೆ ಕಾಳಜಿ ಮಾಡುವುದಿಲ್ಲ. ವ್ಯಕ್ತಿ ವಿಶೇಷದ (individual) ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ತಪ್ಪಿತಸ್ಥ ಭಾವದಿಂದ ಪೂರ್ತಿಯಾಗಿ ಹೊರಬರಲು, ಹೊಸ ಬೆಳಕಿಗೆ, ಹೊಸ ಪ್ರಜ್ಞೆಗೆ  ತೆರೆದುಕೊಳ್ಳಿ. ಆಗ ಇನ್ನೂ ಹೆಚ್ಚಿನ ಮಹತ್ವದ ಸಂಗತಿಗಳು ಸಂಭವಿಸುತ್ತವೆ.

ಒಂದು ದಿನ ಕೆಡುಕಿನ ಅಧಿಪತಿ ಮಾರ ತನ್ನ ಸೇವಕರೊಡನೆ ಭಾರತ ದೇಶದ ಹಳ್ಳಿಯೊಂದರ ಮೂಲಕ ಹಾಯ್ದು ಪ್ರಯಾಣ ಮಾಡುತ್ತಿದ್ದ.

ಹೀಗೆ ಪ್ರಯಾಣ ಮಾಡುವಾಗ,  ಧ್ಯಾನದಲ್ಲಿ ತಲ್ಲೀನನಾಗಿದ್ದ ಒಬ್ಬ ಮನುಷ್ಯ ಅವನ ಕಣ್ಣಿಗೆ ಬಿದ್ದ. ಅವರು ನೋಡ ನೋಡುತ್ತಿದ್ದಂತೆಯೇ, ಧ್ಯಾನಿಯ ಮುಖ ಪ್ರಖರ ತೇಜಸ್ಸಿನಿಂದ ಹೊಳೆಯತೊಡಗಿತು.

ಯಾಕೆ ಆ ಮನುಷ್ಯನ ಮುಖದ ಸುತ್ತ ಈ ದಿವ್ಯ ಪ್ರಭಾವಳಿ ಎಂದು ಸೇವಕರು ಮಾರನನ್ನು ಕೇಳಿದರು.

“ ಅವನು ಈಗ ತಾನೇ ಸತ್ಯವೊಂದನ್ನು ಕಂಡು ಕೊಂಡಿದ್ದಾನೆ” ಮಾರ ಉತ್ತರಿಸಿದ.

“ಓ ! ಕೆಡಕಿನ ಅಧಿಪತಿ, ಅವನು ಸತ್ಯವೊಂದನ್ನು ಕಂಡುಕೊಂಡಿದ್ದಾನೆ ಎಂದರೆ ನಿನಗೆ ಇನ್ನು ಚಿಂತೆ ಶುರು “
ಸೇವಕನೊಬ್ಬ ಕೇಳಿದ.

“ ಬಹುತೇಕ ಸತ್ಯವನ್ನು ಕಂಡುಕೊಂಡ ಜನ ಮರು ಘಳಿಗೆಯಲ್ಲೇ ಅದರಿಂದ ನಂಬಿಕೆಯೊಂದನ್ನು ಹುಟ್ಟು ಹಾಕುತ್ತಾರೆ, ಹಾಗಾಗಿ ನನಗೇನು ಭಯವಿಲ್ಲ “ ಮಾರ ನಗುತ್ತ ಉತ್ತರಿಸಿದ.


ನೆನ್ನೆಯ ಕಂತು ಇಲ್ಲಿದೆ : https://aralimara.com/2025/01/29/osho-453/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.