ನಾಕುತಂತಿ ಮತ್ತು ಚಂಪಾ! : Coffeehouse ಕತೆಗಳು

ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ

ಅದು ಧಾರವಾಡದ ಕರ್ನಾಟಕ ಯುನಿವರ್ಸಿಟಿಯ ಇಂಗ್ಲಿಷ್ ಡಿಪಾರ್ಟಮೆಂಟ್ ನ ಸ್ಟಾಫ್ ರೂಂ. ಅಂದು ಅಲ್ಲಿದ್ದವರೆಲ್ಲ ಕನ್ನಡ ಸಾಹಿತ್ಯದ ಘಟಾನುಘಟಿಗಳು.ಶಾಂತಿನಾಥ ದೇಸಾಯಿ, ಶಂಕರ ಮೊಕಾಶಿ, ಗಿರಡ್ಡಿ ಗೋವಿಂದ ರಾಜ್ , ಚಂಪಾ ಮುಂತಾದವರು.

ಒಂದು ದಿವಸ ಚಂಪಾ ಅವಸರದಿಂದ ಸ್ಟಾಫ್ ರೂಂ ಗೆ ಬಂದು ಅಲ್ಲಿಟ್ಟಿದ್ದ ಪುಸ್ತಕಗಳ ರಾಶಿಯಲ್ಲಿ ಏನೋ ಹುಡುಕಲು ಶುರು ಮಾಡುತ್ತಾರೆ.

ಏನ್ರೀ ಸರ್ ಏನ್ ಹುಡಕ್ಲಿಕತ್ತೀರಿ ಅಂತ ಒಬ್ಬರು ಕೇಳಿದಾಗ, ಚಂಪಾ ಉತ್ತರ ……

” ಏನಿಲ್ಲ ನಮ್ಮ ಮೊಕಾಶಿಯವರು ನಾಕುತಂತಿ ಕವನ ಇಂಗ್ಲಿಷ್ ನ್ಯಾಗ ಅನುವಾದ ಮಾಡ್ಯಾರಂತ, ಕನ್ನಡದಾಗಂತೂ ತಿಳಿಲಿಲ್ಲ, ಇಂಗ್ಲಿಷ್ ನೊಳಗರ ತಿಳಿತದೇನೋ ಅಂತ ಹುಡುಕ್ತಿದ್ದೆ”.

ಇದು ಚಂಪಾ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.