ಜನ ಕೂಡಿ ಮಾಡುವ ಸಂಗತಿಗಳ ಭಾಷೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ ಅಥವಾ ಏನನ್ನಾದರೂ ಮಾಡುವ ಆದರೆ ಜೊತೆಯಾಗಿರುವ ಭಾಷೆಯನ್ನ ~ ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ
ಒಂದು ಗಂಡಿಗೊಂದು ಹೆಣ್ಣು
ಹೇಗೊ ಸೇರಿ ಹೊಂದಿಕೊಂಡು
ಕಾಣದಂಥ ಹರುಷ ಕಂಡು
ಮಾತಿಗೊಲಿಯದಮೃತ ಉಂಡು
ದುಃಖ ಹಗುರ ಎನುತಿರೆ
ಪ್ರೇಮವೆನಲು ಹಾಸ್ಯವೆ?’.
~ ಕೆ.ಎಸ್.ನ
ಜನ ಮರೆತುಬಿಟ್ಟಿದ್ದಾರೆ ಸುಮ್ಮನೇ ತಮ್ಮ ಹಾಗೆ ತಾವಿರುವುದನ್ನ. ಮಾಡುವುದು ಏನೂ ಇಲ್ಲದಿರುವಾಗ ಅವರು ಪ್ರೀತಿ ಮಾಡುತ್ತಾರೆ. ಆಗ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ ಮತ್ತು ನಿಧಾನವಾಗಿ ಅವರು ಪ್ರೀತಿಯ ಬಗ್ಗೆಯೇ ಹತಾಶರಾಗುತ್ತ ಹೋಗುತ್ತಾರೆ. ಗಂಡು ಮತ್ತು ಹೆಣ್ಣು ವಿಭಿನ್ನರು, ಕೇವಲ ವಿಭಿನ್ನರು ಮಾತ್ರ ಅಲ್ಲ ಅವರ ನಡುವೆ ವೈರುಧ್ಯವೂ ಇದೆ ; ಅವರ ನಡುವಿನ ಹೊಂದಾಣಿಕೆ ಸುಲಭವಲ್ಲ. ಮತ್ತು ಇದೇ ಈ ಸಂಬಂಧದ ಚೆಲುವು ಕೂಡ ಹೌದು. ಯಾವಾಗ ಅವರಿಬ್ಬರೂ ಪರಸ್ಪರ ಫಿಟ್ ಆಗುತ್ತಾರೋ ಅದು ಪವಾಡ, ಅವು ಮಾಂತ್ರಿಕ ಕ್ಷಣಗಳು. ಇದು ಸ್ವಾಭಾವಿಕ ಮತ್ತು ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು, ಏಕೆಂದರೆ ಅವರಿಬ್ಬರ ಮೈಂಡ್ ವಿಭಿನ್ನ. ಒಬ್ಬರ ದೃಷ್ಟಿಕೋನ ಒಂದು ಧ್ರುವವಾದರೆ ಇನ್ನೊಬ್ಬರ ದೃಷ್ಟಿಕೋನ ಇನ್ನೊಂದು ಧ್ರುವ. ಅವರ ನಡುವೆ ಯಾವ ಒಪ್ಪಂದವೂ ಸಾಧ್ಯವಿಲ್ಲ, ಏಕೆಂದರೆ ಅವರ ದಾರಿಗಳೇ ಬೇರೆ ಬೇರೆ, ಅವರ ತರ್ಕವೇ ಬೇರೆ.
ಅವರು ಆಳ ಒಪ್ಪಂದಕ್ಕೆ ಬರುವುದು, ಆಳ ಸೌಹಾರ್ದತೆಯಲ್ಲಿ ಒಂದಾಗುವುದು ಬಹುತೇಕ ಪವಾಡ ಸದೃಶ. ಇದು ಅಪರೂಪದ ಕೋಹಿನೂರ್ ವಜ್ರದಂತೆ, ಮತ್ತು ಇದನ್ನು ಪ್ರತಿದಿನವೂ ಅಪೇಕ್ಷಿಸುವಂತಿಲ್ಲ. ರೂಟಿನ್ ನ ಭಾಗವಾಗಿ ಯಾರೂ ಇದನ್ನು ಬಯಸುವಂತಿಲ್ಲ. ಇದಕ್ಕಾಗಿ ಇಬ್ಬರೂ ಕಾಯಬೇಕು, ತಿಂಗಳುಗಟ್ಟಲೇ, ಕೆಲವೊಮ್ಮೆ ವರ್ಷಗಟ್ಟಲೇ, ನಂತರ ಅದು ಥಟ್ಟನೇ ಪ್ರತ್ಯಕ್ಷವಾಗುವುದು. ಮತ್ತು ಯಾವಾಗಲೂ ಇದು out of blue.
ಈ ಬಗ್ಗೆ ಚಿಂತೆ ಬೇಡ – ಅದು ತನ್ನ ಕೇರ್ ತಾನೇ ಮಾಡಿಕೊಳ್ಳುತ್ತದೆ. ಮತ್ತು ಪ್ರೀತಿಗಾಗಿ ಹುಡುಕುತ್ತ ಹೋಗಬೇಡಿ, ಹಾಗೇನಾದರೂ ಮಾಡಿದಿರಾದರೆ ಸಂಪೂರ್ಣವಾಗಿ ಕಳೆದುಕೊಂಡು ಬಿಡುತ್ತೀರಿ.

