ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ನಿಮ್ಮ ಸಲುವಾಗಿ ಪ್ರಾಣ ಬೇಕಾದ್ರೂ ಕೊಡಬಲ್ಲ ಜಿಗ್ರಿ ದೋಸ್ತ್‌ಗಳು ನಿಮಗಿದ್ದಾರೆ ಎಂದು ಅನಿಸುತ್ತಿದ್ದರೆ ಸ್ವಲ್ಪ ಗಮನಿಸಿ ನೋಡಿ…
ಮೊದಲನೇಯ ರೀತಿಯವರು, ನಿಮ್ಮ ಬದುಕಿನಲ್ಲಿ cctv ಕ್ಯಾಮೆರಾ ಇದ್ದ ಹಾಗೆ. ಅವರಿಗೆ ನಿಮ್ಮ ಬದುಕಿನಲ್ಲಿ ಏನಾಗುತ್ತಿದೆ ಎನ್ನುವುದನ್ನ ತಿಳಿದುಕೊಂಡು ನಿಮ್ಮ ಮೇಲೆ ಸ್ಪರ್ಧೆಗೆ ಬೀಳುವಲ್ಲಿ ಆಸಕ್ತಿ.
ಎರಡನೇ ಕ್ಯಾಟಗರಿಯವರು ಬ್ರಾಡಕಾಸ್ಟಿಂಗ್ ಅಥವಾ ರೇಡಿಯೋ ಫ್ರೆಂಡ್ಸ್. ಇವರು ನಿಮ್ಮ ಬಳಿ ಇರುವ ಮಾಹಿತಿ ತೆಗೆದುಕೊಂಡು ಇನ್ನೊಂದು ಕಡೆ ಹೋಗಿ ನಿಮ್ಮ ಬಗ್ಗೆ ಗಾಸಿಪ್ ಹಬ್ಬಿಸುವವರು, ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯಗಳು ಹುಟ್ಟುವ ಹಾಗೆ ಮಾಡುತ್ತ ತಮ್ಮನ್ನು ತಾವು ಬೆಟರ್ ಫೀಲ್ ಮಾಡುವವರು.
ಮೂರನೇ ಥರದವರು Insurance policy friends. ಅವರು ನಿಮ್ಮನ್ನು Insurance policy ಹಾಗೆ ಬಳಸಲು ಮುಂದಾಗುವವರು. ನೀವು ಆರ್ಥಿಕವಾಗಿ ಅವರಿಗಿಂತ ಚೆನ್ನಾಗಿರುವುದನ್ನ ಗಮನಿಸಿ ನಿಮ್ಮನ್ನು ಸ್ವಲ್ಪ ಹೊಗಳುತ್ತ, ಸ್ವಲ್ಪ ಬೂಸ್ಟ ಮಾಡುತ್ತ ಅವಶ್ಯಕತೆ ಬಿದ್ದಾಗ ಸಹಾಯ ಪಡೆದುಕೊಳ್ಳಲು ಬಯಸುವವರು.
ನಿಮ್ಮ ನಿಜದ ಗೆಳೆಯರಿಗೆ ನೀವು ಯಶಸ್ವಿಗಳಾ, ಅಯಶಸ್ವಿಗಳಾ, ನಿಮ್ಮ ಬಳಿ ಹಣ ಇದೆಯಾ ಇಲ್ವಾ, ಈ ಯಾವುದರ ಪರಿವೆಯೂ ಇಲ್ಲ. ಅವರಿಗೆ ಯಾವುದೇ ಪರಸ್ಥಿತಿಯಲ್ಲಿ ನೀವು ಬೇಕು. ನಿಮಗಾಗಿ ಬೇಕಾದರೆ ಅವರು ತಮ್ಮ ಕಿಡ್ನಿ ಕೊಡಬಲ್ಲರು. ನಾನು ತಮಾಷೆಯಿಂದ ಅವರನ್ನ ಕಿಡ್ನಿ ಫ್ರೆಂಡ್ಸ್ ಎನ್ನುತ್ತೇನೆ. ಇಂಥವರು ನಿಮ್ಮ ಸಂಗಾತದಲ್ಲಿ ಇರಲೇಬೇಕು.
ನಿಮ್ಮ ಗೆಳೆಯರನ್ನ ಗುರುತಿಸಿ, ಇದು ನಿಮ್ಮ ಬದುಕನ್ನ ಕಡಿಮೆ ಕಾಂಪ್ಲಿಕೇಟ್ ಮಾಡುತ್ತದೆ.
ಆಕರ : YouTube podcast

