ನೀವು ತಾದಾತ್ಮ್ಯದಲ್ಲಿ, ಆಳ ಪ್ರೇಮದಲ್ಲಿ ಜೊತೆಯಾಗಿ ಒರಗಿಕೊಂಡಿರುವಾಗ, ಪ್ರಾರ್ಥನೆಯಲ್ಲಿರುವಾಗ, ಪರಸ್ಪರ ಗೌರವದಲ್ಲಿರುವಾಗ ಸಂಭವಿಸುವ ಒಂದಾಗುವಿಕೆಯ ಅನುಭೂತಿಯ ಮುಂದೆ ಸೆಕ್ಸ್ ಸಾಧ್ಯಮಾಡುವ ಅನುಭವ ತೀರ ಸಪ್ಪೆಯದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮೊಳಗಿನ ದಿವ್ಯ ಶಕ್ತಿಗಳನ್ನು
ಹೇಗೆ ಕಂಡುಕೊಳ್ಳುವುದು?
ಪ್ರತಿಮೆ, ರೂಪಕಗಳ ಮೂಲಕ
ಉತ್ತರ ಹುಡುಕುವ ಪ್ರಯತ್ನ
ವ್ಯರ್ಥ ಎಂಬುದು ಸಿದ್ಧವಾಗಿ ಹೋಗಿದೆ.
ಕಾಮ ಹೇಗಿರತ್ತೆ ಎಂಬ ಮಗುವಿನ ಪ್ರಶ್ನೆಗೆ
ಸಿಹಿಯಾಗಿರತ್ತೆ, ಸಕ್ಕರೆಯ ಬೊಂಬೆಯಂತೆ
ಎಂದು ಉತ್ತರಿಸಿದರೆ ಹೇಗೆ?
ಇಂಥ ನಿಗೂಢಗಳ ಬಗ್ಗೆ ನೀವು ಏನೇ ಹೇಳಿ
ನನಗೆ ಗೊತ್ತು ಎಂಬ ಉತ್ತರ
ಮತ್ತು
ನನಗೆ ಗೊತ್ತಿಲ್ಲ ಎಂಬ ಉತ್ತರ ಮಾತ್ರ
ಸತ್ಯಕ್ಕೆ ಹತ್ತಿರವಾದ ಉತ್ತರಗಳು
ಎರಡೂ ಉತ್ತರಗಳಲ್ಲಿ ಅಂಥ ಸುಳ್ಳೆನಿಲ್ಲ.
– ರೂಮಿ.
ಲೈಂಗಿಕತೆಯಿಂದ ಹೊರತಾದ physical energy ಎತ್ತರೆತ್ತರಕ್ಕೆ ಏರಿಸುತ್ತದೆ. ಅದು ಆತ್ಯಂತಿಕವಾದ ಎತ್ತರವನ್ನು ಏರುತ್ತದೆ, ಸಮಾಧಿಯ ಮಟ್ಟವನ್ನು ಮುಟ್ಟುತ್ತದೆ, ಅರಿವಿನ ಬಾಗಿಲನ್ನು ತಲುಪುತ್ತದೆ. ಆದರೆ ಜನ ಇದನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ಅವರು ಲೈಂಗಿಕತೆಯನ್ನೇ ಅಂತಿಮ ಎಂದುಕೊಂಡಿದ್ದಾರೆ, ಆದರೆ ಸೆಕ್ಸ್ ಅಂತಿಮವಲ್ಲ ಅದು ಕೇವಲ ಶುರುವಾತು. ನೀವು ಯಾರೊಂದಿಗಾದರೂ ಪ್ರೇಮದಲ್ಲಿರುವಿರಾದರೆ, ಆಳ ಪ್ರೇಮದಲ್ಲಿ, ಆತ್ಮೀಯತೆಯಲ್ಲ, ಅವರ ಕೈ ಹಿಡಿದುಕೊಂಡು ಒರಗಿಕೊಳ್ಳಿ, ಆಗ ನೀವು ಸೂಕ್ಷ್ಮ ಮತ್ತು ಆಳವಾದ ಸುಖೋತ್ಕರ್ಷವನ್ನು ( orgasm) ತಲುಪುತ್ತೀರ. ಹೀಗೆಯೇ ನಿಧಾನವಾಗಿ ನಿಜದ ಬ್ರಹ್ಮಚರ್ಯ ಹುಟ್ಟಿಕೊಳ್ಳುವುದು. ಬ್ರಹ್ಮಚರ್ಯ ಸೆಕ್ಸ್ ಗೆ ವಿರುದ್ಧವಲ್ಲ, ಸೆಕ್ಸ್ ಗಿಂತ ಆಳವಾದದ್ದು, ಉನ್ನತವಾದದ್ದು. ಸೆಕ್ಸ್ ನಿಂದ ಸಾಧ್ಯವಾಗುವುದು ಇಲ್ಲಿಯೂ ಸಾಧ್ಯವಾಗುತ್ತದೆ ಮತ್ತು ಅದಕ್ಕಿಂತ ಹೆಚ್ಚಿನದು ಕೂಡ. ಯಾವಾಗ ನಿಮಗೆ ನಿಮ್ಮ ಎನರ್ಜಿಯನ್ನು ಇಷ್ಟು ಎತ್ತರದ ಮಟ್ಟದಲ್ಲಿ ಬಳಸುವುದು ಗೊತ್ತಾಗುತ್ತದೆಯೋ ಆಗ ಕೆಳಮಟ್ಟದ ಸುಖದ ಬಗ್ಗೆ ಯಾಕೆ ಯೋಚಿಸಬೇಕು ?
ಸೆಕ್ಸ್ ನ ಬಿಟ್ಟು ಬಿಡಿ ಎಂದು ನಾನು ಹೇಳುತ್ತಿಲ್ಲ. ನಾನು ಏನು ಹೇಳುತ್ತಿದ್ದೇನೆಂದರೆ ನಿಮಗೆ ನೀವು ಶುದ್ಧ, ಪ್ರೇಮಿಸುವಿಕೆಯ ಜಾಗೆಗಳಿಗೆ ಎಲ್ಲಿ ಸೆಕ್ಸ್ ಒಂದು ಕನ್ಸರ್ನ್ ಅಲ್ಲವೋ ಅಲ್ಲಿ ಕೆಲವೊಮ್ಮೆಯಾದರೂ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ನೀವು ಕೆಳಗೆ ಎಳೆಯಲ್ಪಡುತ್ತೀರ ಮತ್ತು ಆಕಾಶದಲ್ಲಿ ಹಾರುವುದು ನಿಮಗೆ ಯಾವತ್ತೂ ಸಾಧ್ಯವಾಗುವುದಿಲ್ಲ.

