ನನ್ನ ಗ್ರಹಿಕೆ ಏನೆಂದರೆ, ಯಾವುದನ್ನೂ ಬದಲಾಯಿಸಲು ಪ್ರಯತ್ನ ಮಾಡಬಾರದು, ಏಕೆಂದರೆ ಆ ಪ್ರಯತ್ನವೇ ಸಂಗತಿಗಳನ್ನು ಸುಲಭ ಮಾಡುವುದಕ್ಕಿಂತ ಕಠಿಣಗೊಳಿಸುತ್ತದೆ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ನಿಮ್ಮ ಮೈಂಡ್ ಏನೋ ಒಂದಕ್ಕೆ ಅಟ್ಯಾಚ್ ಆಗಿದೆ, ಮತ್ತು ಈಗ ಅದೇ ಮೈಂಡ್ ತನ್ನನ್ನು ತಾನು ಡಿಟ್ಯಾಚ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಅದು ಬಹುತೇಕ ಆ ಸಂಗತಿಯನ್ನು ಅದುಮಿಟ್ಟುಕೊಳ್ಳಬಹುದೇ ವಿನಃ, ಸಂಪೂರ್ಣ ಡಿಟ್ಯಾಚ್ ಮಂಟ್ ಸಾಧ್ಯವಿಲ್ಲ. ನಿಜವಾದ ಡಿಟ್ಯಾಚ್ ಮಂಟ್ ಸಾಧ್ಯವಾಗಲು, ಈ ಅಟ್ಯಾಚ್ ಮೆಂಟ್ ಯಾಕೆ ಇತ್ತು ಎನ್ನುವುದನ್ನ ಮೊದಲು ಮೈಂಡ್ ಅರಿತುಕೊಳ್ಳಬೇಕು. ಡಿಟ್ಯಾಚ್ ಮಂಟ್ ಮಾಡಿಕೊಳ್ಳಲು ಯಾವ ಅವಸರದ ಅವಶ್ಯಕತೆಯಿಲ್ಲ ; ಬದಲಾಗಿ ಈ ಅಟ್ಯಾಚ್ ಮೆಂಟ್ ಯಾಕೆ ಇತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಸುಮ್ಮನೇ ಈ ಮೆಕ್ಯಾನಿಸಂ ನ ಗಮನಿಸಿ ; ಇದು ಹೇಗೆ ಕೆಲಸ ಮಾಡುತ್ತದೆ? ಇದು ಹೇಗೆ ಸಾಧ್ಯವಾಗಿದೆ, ಯಾವ ಸಂದರ್ಭಗಳು, ಯಾವ ತಿಳಿಗೇಡಿತನ ಇದನ್ನು ಸಾಧ್ಯಮಾಡಿದೆ ಎನ್ನುವುದನ್ನ ತಿಳಿದುಕೊಳ್ಳಿ. ಸುಮ್ಮನೇ ಇದರ ಸುತ್ತಲಿನ ಎಲ್ಲ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಿ. ಕಳಚಿಕೊಳ್ಳಲು ಯಾವ ಅವಸರವೂ ಬೇಡ ಏಕೆಂದರೆ, ಕಳಚಿಕೊಳ್ಳಲು ಅವಸರದಲ್ಲಿರುವ ಜನ, ಅವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ನೀಡುವುದಿಲ್ಲ.
ಒಮ್ಮೆ ಈ ಅಟ್ಯಾಚ್ ಮೆಂಟ್ ನ ಕಾರಣ ನಿಮಗೆ ಅರ್ಥವಾಯಿತೆಂದರೆ, ಅದು ತಾನೇ ನಿಮ್ಮ ಕೈಯಿಂದ ಜಾರಿಹೋಗುತ್ತಿರುವುದನ್ನು ನೀವು ಗಮನಿಸುವಿರಿ. ತಪ್ಪು ತಿಳುವಳಿಕೆಯ ಹೊರತಾಗಿ ಯಾವ ಕಾರಣವೂ ಇರುವುದಿಲ್ಲ. ಏನೋ ಒಂದನ್ನು ತಪ್ಪುತಿಳಿಯಲಾಗಿತ್ತು ಹಾಗಾಗಿಯೇ ಅದು ಇರುವುದು. ಒಮ್ಮೆ ನೀವು ಸರಿಯಾಗಿ ಅರ್ಥಮಾಡಿಕೊಂಡುಬಿಟ್ಟರೆ, ಅದು ತಾನೇ ನಿಮ್ಮ ಕೈಯಿಂದ ಜಾರಿಹೋಗಿಬಿಡುತ್ತದೆ. ಸಮಸ್ಯೆಗಳನ್ನು ಸೃಷ್ಟಿಮಾಡುತ್ತಿರುವ ಸಂಗತಿಗಳು ಕತ್ತಲೆಯಂತೆ. ಒಮ್ಮೆ ನೀವು ಬೆಳಕು ತಂದುಬಿಟ್ಟರೆ ಕತ್ತಲೆ ತಾನಾಗಿಯೇ ಮಾಯವಾಗಿ ಬಿಡುತ್ತದೆ.
ನಸ್ರುದ್ದೀನ್ ನ ಗರ್ಲಫ್ರೆಂಡ್ ನಾಸ್ತಿಕಳಾದ್ದರಿಂದ, ಅವನ ಮನೆಯಲ್ಲಿ ಎಲ್ಲರಿಗೂ ನಸ್ರುದ್ದೀನ್ ಆ ಹುಡುಗಿಯನ್ನ ಮದುವೆಯಾಗುವುದರ ಬಗ್ಗೆ ಹಿಂಜರಿಕೆಯಿತ್ತು. ಒಂದು ದಿನ ನಸ್ರುದ್ದೀನ್ ನ ತಾಯಿ ನಸ್ರುದ್ದೀನ್ ಜೊತೆ ಮಾತನಾಡಿದಳು,
“ ನಮ್ಮದು ದೇವರನ್ನು ನಂಬುವ ಕುಟುಂಬ ಹಾಗಾಗಿ ಆ ಹುಡುಗಿ ನಮ್ಮ ಕುಟುಂಬದಲ್ಲಿ ಸೇರಿದಾಗ ಅವಳಿಗೆ ತೊಂದರೆ ಆಗಬಹುದು. ನೀನು ಅವಳಿಗೆ ದೇವರ ಬಗ್ಗೆ, ಧರ್ಮದ ಬಗ್ಗೆ ಪಾಠ ಮಾಡಿ ಮನ ಬದಲಿಸು “
ತಾಯಿಯ ಮಾತಿನಂತೆ ನಸ್ರುದ್ದೀನ್ ತನ್ನ ಗೆಳತಿಗೆ ದೇವರು-ಧರ್ಮದ ಬಗ್ಗೆ ತಲೆ ತುಂಬತೊಡಗಿದ, ವಿವಿಧ ಧಾರ್ಮಿಕ ಗ್ರಂಥಗಳ ಪರಿಚಯ ಮಾಡಿಕೊಟ್ಟ, ಹಿರಿಯ ಧಾರ್ಮಿಕ ವಿದ್ವಾಂಸರ ಪರಿಚಯ ಮಾಡಿಕೊಟ್ಟ.
ಕೆಲ ದಿನಗಳ ನಂತರ ನಸ್ರುದ್ದೀನ್ ನ ತಾಯಿ ವಿಚಾರಿಸಿದಳು, “ ನಸ್ರುದ್ದೀನ್ , ನಿನ್ನ ಗೆಳತಿಯನ್ನ ಆಸ್ತಿಕಳನ್ನಾಗಿ ಬದಲಾಯಿಸಲು ನೀನು ಮಾಡುತ್ತಿರುವ ಪ್ರಯತ್ನಗಳನ್ನ ನೋಡುತ್ತಿರುವೆ, ಖಂಡಿತ ನಿನ್ನ ಪ್ರಯತ್ನದಲ್ಲಿ ಸಫಲನಾಗುತ್ತೀಯ, ಯಾವಾಗ ಮದುವೆ ಇಟ್ಟುಕೊಳ್ಳುವುದು ? “
“ ಆಕೆಯೊಡನೆ ಮದುವೆ ಈಗ ಸಾಧ್ಯವಿಲ್ಲ , ಆಕೆಯನ್ನ ಧಾರ್ಮಿಕ ವ್ಯಕ್ತಿಯಾಗಿಸಲು ನಾನು ಮಾಡಿದ ಪ್ರಯತ್ನ ಸ್ವಲ್ಪ ಜಾಸ್ತಿ ಆಯಿತು ಅನಿಸುತ್ತದೆ. ಈಗ ಆಕೆ ನನ್ * ಆಗುವ ನಿರ್ಧಾರ ಮಾಡಿದ್ದಾಳೆ “
ನಸ್ರುದ್ದೀನ್ ನಿರಾಶೆಯಿಂದ ತಾಯಿಗೆ ಎಲ್ಲ ವಿವರಿಸಿದ.

