ತಂತ್ರದ ಇಡೀ ಪ್ರಕ್ರಿಯೆಯೇ ಎರಡು ವೈರುಧ್ಯಗಳನ್ನ ಒಂದಾಗಿಸುವುದು, ಎರಡು ವಿರುದ್ಧ ಧ್ರುವಗಳನ್ನು ಒಂದು ಇರುವಿಕೆಯಲ್ಲಿ (being) ಕರಗಿಹೋಗುವಂತೆ ಮಾಡುವುದು. ಯಾವಾಗ ಸಂಗತಿ ಇಡಿಯಾಗಿ ಪೂರ್ಣವಾಗುವುದೋ ಆಗ ಅದು ಪವಿತ್ರ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
‘ಪ್ರೇಮದ ಹುಡುಕಾಟ’ ಕ್ಕೆ
ನಮ್ಮನ್ನು ಪೂರ್ಣವಾಗಿ ಪರಿವರ್ತನೆ ಮಾಡುವ ಶಕ್ತಿಯಿದೆ.
ಈ ಹುಡುಕಾಟದ ಹಾದಿಯಲ್ಲಿ ಪಕ್ವಗೊಳ್ಳದ
ಯಾವ ಸಾಧಕನ ಬಗ್ಗೆಯೂ
ನನಗೆ ಗೊತ್ತಿಲ್ಲ.
ಪ್ರೇಮದ ದಾರಿಯಲ್ಲಿ ನೀವು
ಮೊದಲ ಹೆಜ್ಜೆ ಇಟ್ಟ ಕ್ಷಣದಲ್ಲಿಯೇ
ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ
ನಿಮ್ಮ ಒಳಗೂ ಮತ್ತು ಹೊರಗೂ.
~ ಶಮ್ಸ್ ತಬ್ರೀಝಿ
ಗಂಡು ಮತ್ತು ಹೆಣ್ಣು ಶಾಶ್ವತವಾಗಿ ಸಂಧಿಸುವುದು ಸಾಧ್ಯವಿಲ್ಲ; ಅವರ ಭೇಟಿ ಕ್ಷಣಿಕ ಮಾತ್ರ. ಇದೇ ಪ್ರೇಮದ ಸಂಕಟ ಮತ್ತು ಆನಂದ ಕೂಡ. ಈ ಆನಂದಕ್ಕೆ, ಈ ಭಾವೋತ್ಕರ್ಷಕ್ಕೆ ಕಾರಣ, ಸಾಧ್ಯವಾಗಬಹುದಾದ ಕ್ಷಣಿಕ ಭೇಟಿಯೇ. ಕೊನೆಪಕ್ಷ ಕೆಲವು ಕ್ಷಣಗಳ ಮಟ್ಟಿಗಾದರೂ ಪೂರ್ಣತೆಯನ್ನು ಅನುಭವಿಸಬಹುದು ; ಆಗ ಎಲ್ಲವೂ ಒಂದು ಸೌಹಾರ್ದದದ ಭಾಗವಾಗುತ್ತವೆ. ಇಲ್ಲೊಂದು ಮಹಾ ಆನಂದವಿದೆ ಆದರೆ ಇದು ಬಹುಬೇಗ ಕಳೆದುಹೋಗಿಬಿಡುತ್ತದೆ.
ತಂತ್ರದ ಪ್ರಕಾರ, ಇದನ್ನು ಮಹತ್ವದ ಸೂಚನೆಯಾಗಿ ಬಳಸಬೇಕು, ಹೊರಗಿನ ಮಿಲನ ಕೇವಲ ಕ್ಷಣಿಕ. ಆದರೆ, ಒಳಗಿನ ಗಂಡು, ಒಳಗಿನ ಹೆಣ್ಣು , ಅವರ ಮಿಲನ ಯಾವತ್ತೂ ಶಾಶ್ವತ. ಅದ್ದರಿಂದ ಹೊರಗಿನ ರಹಸ್ಯವನ್ನು ಒಳಗಿನ ಪ್ರಕ್ರಿಯೆಗೂ ಅಪ್ಲೈ ಮಾಡಬೇಕು. ಯಾವ ಗಂಡೂ ಕೇವಲ ಗಂಡು ಅಲ್ಲ, ಯಾವ ಹೆಣ್ಣೂ ಕೇವಲ ಹೆಣ್ಣು ಅಲ್ಲ. ಇದು ತಂತ್ರದ ಅತ್ಯಂತ ಮಹತ್ತರವಾದ ಒಳನೋಟ. ಏಕೆಂದರೆ ಮನುಷ್ಯ ಹುಟ್ಟಿರುವುದು ಗಂಡು ಮತ್ತು ಹೆಣ್ಣಿನ ಮಿಲನದಿಂದ, ಎರಡು ಧ್ರುವಗಳ ಒಂದಾಗುವಿಕೆಯಿಂದ. ಮನುಷ್ಯ ಅಪ್ಪನಿಂದ ಕೆಲವನ್ನು ತೆಗೆದುಕೊಂಡರೆ ಅಮ್ಮನಿಂದಲೂ ಕೆಲವನ್ನ ತೆಗೆದುಕೊಂಡಿರುತ್ತಾನೆ. ಹೆಣ್ಣಿನ ವಿಷಯವೂ ಹೀಗೆಯೇ. ಆದ್ದರಿಂದ ಒಳಗಿನ ಆಳದಲ್ಲಿ ನಾವು ಪ್ರತಿಯೊಬ್ಬರೂ ವೈರುಧ್ಯವನ್ನು ಹೊಂದಿರುತ್ತೇವೆ. ಪ್ರಜ್ಞೆಯ ಮೈಂಡ್ ಗಂಡಾದರೆ ಅಪ್ರಜ್ಞೆಯ ಮೈಂಡ್ ಹೆಣ್ಣು, ಮತ್ತು vice versa.
ಇನ್ನೊಬ್ಬರ ಒಳಗಿನ ಜೊತೆ ಒಂದಾಗುವ ಕಲೆ ಸಾಧ್ಯವಾಗದೇ ಹೋದರೆ, ನಿಮಗೆ ಪ್ರೇಮ ಯಾವತ್ತೂ ಸಂಕಟ ಮತ್ತು ಆನಂದದ ವಿಷವೃತ್ತ. ಆಗ ನೀವು ಹರಿದುಕೊಂಡು ಇಬ್ಭಾಗವಾಗುತ್ತೀರಿ. ಹೇಗೆ ಹೊರಗಿನ ಮಿಲನ ಸಾಧ್ಯವೋ ಹಾಗೆಯೋ ಒಳಗಿನ ಒಂದಾಗುವಿಕೆಯೂ ಸಾಧ್ಯ. ಆದರೆ ಒಳಗುಗಳ ಒಂದಾಗುವಿಕೆಯಲ್ಲಿ ಒಂದು ವಿಶೇಷತೆಯಿದೆ : ಇದು ಕೊನೆಯಾಗಬೇಕಿಲ್ಲ ; ಇದನ್ನು ನಿಜವಾದ ಮದುವೆ.

