ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಆತ್ಮ ಸಂಗಾತಿಗಳು ( soulmate) ಅಂತ ನಿಜವಾಗಿಯೂ ಇರ್ತಾರಾ?
ಆತ್ಮ ಸಂಗಾತಿ ಅಂತ ಒಬ್ಬರಲ್ಲ ಒಬ್ಬರಿಗಿಂತ ಹೆಚ್ಚೂ ಇರಬಹುದು.
ಇದು ವಿವಾದಾತ್ಮಕ ಹೇಳಿಕೆ ಅಲ್ವಾ?
ಇಲ್ಲ ಇಲ್ಲ soulmate ಒಬ್ಬರಿಗಿಂತ ಜಾಸ್ತಿನೂ ಇರಬಹುದು. soulmate ಕೇವಲ ನಿಮ್ಮ ಬಾಳ ಸಂಗಾತಿ ಆಗಿರಬೇಕಿಲ್ಲ. ನಿಮ್ಮ soulmate ನಿಮ್ಮ ಗೆಳೆಯ/ ಗೆಳತಿಯಾಗಿರಬಹುದು, ನಿಮ್ಮ soulmate ನಿಮ್ಮ ಸಹೋದರ- ಸಹೋದರಿಯಾಗಿರಬಹುದು, ನಿಮ್ಮ soulmate ನಿಮ್ಮ ಅಪ್ಪ-ಅಮ್ಮ ಆಗಿರಬಹುದು, ನಿಮ್ಮ soulmate ನಿಮ್ಮ ಪಾರ್ಟನರ್ ಆಗಿರಬಹುದು.
ಯಾರ ಜೊತೆಗೆ ಇರುವುದು ನಿಮಗೆ ಬಹಳ ಇಷ್ಟ ಅನಿಸುತ್ತದೆ, ಯಾರ ಜೊತೆ ನಿಮಗೆ instant connection ಸಾಧ್ಯವಾಗುತ್ತದೆ, ಯಾರೋಂದಿಗೆ ನೀವು ಯಾವ ಪ್ರಯಾಸವಿಲ್ಲದೆ, ಯಾವ ಅಳುಕಿಲ್ಲದೆ ಮಾತನಾಡುವುದು ಸಾಧ್ಯವಾಗುತ್ತದೆಯೋ, ಯಾರು ನಿಮ್ಮನ್ನು ಜಡ್ಜ್ ಮಾಡುವುದಿಲ್ಲವೋ, ಯಾರು ನಿಮ್ಮ ಭಾವನೆಗಳನ್ನು ಗೌರವಿಸುತ್ತಾರೋ, ಯಾರು ನಿಮ್ಮ ಕರಿಯರ್ ನ ಗೌರವಿಸುತ್ತಾರೋ, ಯಾರ ಜೊತೆ ನಿಮಗೆ ಯಾವ ಹಿಂಜಿರಿಕೆಯಿಲ್ಲದೆ ವರ್ತಿಸುವುದು ಸಾಧ್ಯವಾಗುತ್ತದೆಯೋ, ಅವರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸಾಧ್ಯವಾಗದೇ ಇರಬಹುದು ಆದರೆ ಯಾರು ನಿಮ್ಮನ್ನು ಅತ್ಯಂತ ಕಳಕಳಿಯಿಂದ, ಪ್ರೀತಿಯಿಂದ ಕೇಳಿಸಿಕೊಳ್ಳುತ್ತಾರೋ ಅವರು ನಿಮ್ಮ soulmate. ಇದೂ ಕೂಡ ಒಂದು ವಿಭಿನ್ನ ರೋಮಾನ್ಸ್.
ಆಕರ : You Tube podcast

