ಸಮಸ್ಯೆ, ಸತ್ಯ ಮತ್ತು ಭ್ರಮೆಗಳ ನಡುವಿನ ಆಯ್ಕೆ ಅಲ್ಲ. ಏಕೆಂದರೆ ಹೊರಕ್ಕೆ ತೆರೆದುಕೊಳ್ಳುವ ಎಲ್ಲ ಬಾಗಿಲುಗಳು ನಮ್ಮನ್ನು ಭ್ರಮೆಯತ್ತಲೇ ಕರೆದೊಯ್ಯುತ್ತವೆ ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
ನಿಜವಾದ ನಂಬಿಕೆ
ಅಂತರಂಗಕ್ಕೆ ಸಂಬಂಧಿಸಿದ್ದು.
ಕಳಚಿಕೊಂಡುಬಿಡುತ್ತವೆ
ಬಾಕಿ ಎಲ್ಲ .
ಯಾವ ಶುದ್ಧ ನೀರಿನಿಂದಲೂ ಸ್ವಚ್ಛವಾಗದ
ಒಂದೇ ಒಂದು ಕೊಳಕು ಕೊಳೆಯೆಂದರೆ
ನಮ್ಮ ಆತ್ಮವನ್ನು ಕಲುಷಿತಗೊಳಿಸುತ್ತಿರುವ
ದ್ವೇಷ ಮತ್ತು ಧರ್ಮಾಂಧತೆ.
ನಿಮ್ಮ ದೇಹವನ್ನು
ಉಪವಾಸ ಮತ್ತು ಕಾಮನೆಗಳ ಹತೋಟಿಯಿಂದ
ಸ್ವಚ್ಛವಾಗಿರಿಸಿಕೊಳ್ಳಬಹುದು
ಆದರೆ
ಹೃದಯವನ್ನು ಶುದ್ಧವಾಗಿಡಬಲ್ಲದ್ದು
ಪ್ರೇಮ ಮಾತ್ರ.
~ ಶಮ್ಸ್
ಸತ್ಯ, ನಿಮ್ಮ ಒಳಗೆ ಇದೆ. ಅದು ಇರುವುದು ಸತ್ಯ ಹುಡುಕುವವನ ಹೃದಯದೊಳಗೆ. ಆದ್ದರಿಂದ ಒಂದು ಬಾಗಿಲ ಮೇಲೆ “ ಭ್ರಮೆ” ಮತ್ತು ಇನ್ನೊಂದು ಬಾಗಿಲ ಮೇಲೆ “ಸತ್ಯ” ಎಂದು ಬರೆದಿದ್ದರೆ ಗೊಂದಲ ಮಾಡಿಕೊಳ್ಳಲು ಹೋಗಬೇಡಿ. ನೀವು ಯಾವ ಬಾಗಿಲಿನ ಮೂಲಕ ಪ್ರವೇಶ ಮಾಡಿದರೂ, ನಿಮ್ಮನ್ನು ಭ್ರಮೆಯೇ ಸ್ವಾಗತಿಸುತ್ತದೆ. ನೀವು ಸತ್ಯ, ನಿಮ್ಮ ಪ್ರಜ್ಞೆಯೇ ಸತ್ಯ.
ಆದ್ದರಿಂದ ಹೆಚ್ಚು ಜಾಗೃತರಾಗಿರಿ, ಹೆಚ್ಚು ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳಿ. ಎರಡು ಬಾಗಿಲುಗಳಲ್ಲಿ ಯಾವುದು ಸರಿಯಾದ ಬಾಗಿಲು ಎನ್ನುವುದು ಪ್ರಶ್ನೆ ಅಲ್ಲ. ಒಳಗೆ ಕತ್ತಲಿರುವುದು ನಿಮ್ಮ ಅಪ್ರಜ್ಞೆಯ ಕಾರಣವಾಗಿ, ಆದ್ದರಿಂದ ಹೊರಗಿನ ಯಾವ ಬೆಳಕೂ ನಿಮಗೆ ಸಹಾಯ ಮಾಡುವುದಿಲ್ಲ. ಬೇಕಾದರೆ ನಿಮಗೆ ಈಗಲೇ ನಾನು ದೀಪ ಕೊಡುತ್ತೇನೆ, ಆದರೆ ಅದರಿಂದ ನಿಮಗೆ ಯಾವ ಸಹಾಯವೂ ಆಗುವುದಿಲ್ಲ. ನೀವು ನಿಮ್ಮ ಕೋಣೆ ತಲುಪುವುದರೊಳಗಾಗಿ, ಅದು ಆರಿ ಹೋಗಿರುತ್ತದೆ.
ನೀವು ಹೆಚ್ಚು ಹೆಚ್ಚು ಪ್ರಜ್ಞೆಯನ್ನು ಹೊಂದಬೇಕಾಗಿದೆ, ಹೆಚ್ಚು ಜಾಗೃತರಾಗಬೇಕಿದೆ, ಆಗ ಹೊತ್ತಿಕೊಳ್ಳುವ ನಿಮ್ಮ ಒಳಗಿನ ದೀಪ ಮಾತ್ರ ನಿಮ್ಮನ್ನೂ ನಿಮ್ಮ ಸುತ್ತಲನ್ನೂ ಬೆಳಕಾಗಿಸುತ್ತದೆ. ಆ ಬೆಳಕಿನಲ್ಲಿ ನೋಡಿದಾಗ ನಿಮಗೆ ಯಾವ ಬಾಗಿಲುಗಳೂ ಕಾಣಿಸುವುದಿಲ್ಲ. ಭ್ರಮೆಯ ಬಾಗಿಲು, ಸತ್ಯದ ಬಾಗಿಲು ಎರಡೂ ಮಾಯವಾಗಿವೆ. ಎರಡೂ ಬಾಗಿಲುಗಳು ನಿಮ್ಮ ವಿರುದ್ಧ ಸಂಚು ಮಾಡುತ್ತಿದ್ದವು, ಎರಡು ಬಾಗಿಲುಗಳೂ ನಿಮ್ಮನ್ನು ಒಂದೇ ಜಾಗಕ್ಕೆ ಕರೆದೊಯ್ಯುತ್ತಿದ್ದವು. ಅವು ನಿಮಗೆ ಆಯ್ಕೆಯ ಭ್ರಮೆಯನ್ನು ಮಾತ್ರ ನೀಡುತ್ತವೆ. ಆದ್ದರಿಂದ ನೀವು ಏನು ಆಯ್ಕೆ ಮಾಡಿದರೂ ನೀವು ಅದೇ ಸಂಗತಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ಎರಡೂ ಕೂಡ ನಿಮ್ಮನ್ನು ಒಂದೇ ದಾರಿಗೆ ಕರೆದೊಯ್ಯುತ್ತವೆ. ಕೊನೆಗೂ ನೀವು ಮುಟ್ಟುವುದು ಭ್ರಮೆಯನ್ನೇ. ಆದ್ದರಿಂದ ಇದು ಸಮಸ್ಯೆ ಅಲ್ಲ. ಸಮಸ್ಯೆ ಯಾವುದೆಂದರೆ ಹೇಗೆ ಪ್ರಜ್ಞೆಯನ್ನು ಹೊಂದುವುದು, ಹೇಗೆ ಜಾಗೃತರಾಗುವುದು ಎನ್ನುವುದು.

