ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಕೋಪ ಯಾವತ್ತೂ ಪ್ರಾಥಮಿಕ ಭಾವ ( primary emotion) ಅಲ್ಲ, ಅದು ಯಾವತ್ತೂ secondary emotion. ಕೋಪವನ್ನು ಉದ್ದೀಪಿಸುವ ಮೂರು ಮೂಲಭೂತ ಭಾವಗಳೆಂದರೆ
1. ಭಯ (fear)
2. ನೋವು ( hurt ) &
3. ದುಃಖ ( sadness)
ಈ ಮೂರರಲ್ಲಿ ಯಾವುದಾದರೊಂದು ನಿಮ್ಮನ್ನು ಆವರಿಸಿಕೊಂಡಿರುವಾಗ ಮತ್ತು ಇದಕ್ಕಾಗಿ ನಿಮ್ಮನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳದಿದ್ದಾಗ ಮಾತ್ರ ಕೋಪ ನಿಮ್ಮನ್ನು ಆವರಿಸಿಕೊಳ್ಳುತ್ತದೆ, ಜನ ನಿಮ್ಮನ್ನು ಸೀರಿಯಸ್ ಆಗಿ ಪರಿಗಣಿಸಲು ಸಹಾಯ ಮಾಡಿಕೊಡುವಂತೆ. ಆಗ ಕೋಪದ ಪ್ರವೇಶವಾಗುತ್ತದೆ.
ಉದಾಹರಣೆಗೆ ನಮಗೆ ನಮ್ಮ ೭ ವರ್ಷದ ಮಗನ ಮೇಲೆ ಕೋಪ ಬಂದಿದೆ. ಯಾಕೆ? ಯಾಕೆಂದರೆ ಅವನು ನನ್ನ ಫೀಲಿಂಗ್ಸ್ ನ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಅದಕ್ಕಾಗಿ. ನಿಮ್ಮ ಫೀಲಿಂಗ್ಸ ಏನು ಅಂತ ಅವನಿಗೇನಾದರೂ ಗೊತ್ತಾ? ಆದ್ದರಿಂದ ಕೋಪ ಮಾಡಿಕೊಂಡು ಪ್ರಯೋಜನವಿಲ್ಲ, ಅದರಿಂದಾಗಿ ಸಮಸ್ಯೆ ಇನ್ನೂ ಬಿಗಡಾಯಿಸುತ್ತದೆ. ಬದಲಾಗಿ ನಿಮ್ಮ ಭಾವನೆಗಳನ್ನ ಇತರರೊಂದಿಗೆ ಹಂಚಿಕೊಳ್ಳಿ, ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿ.
ಆಕರ : You Tube podcast
*****************************


podcast link
LikeLike